- ನಟಿ ಮೃಣಾಲ್ ಠಾಕೂರ್, ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಮಾನವನ್ನು ಗಳಿಸಿದ್ದಾರೆ
- ಲವ್ ಸೋನಿಯಾ ಚಿತ್ರದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ನಟಿ
- ತಮ್ಮ ಯಶಸ್ಸಿಗೆ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಅವರೇ ಕಾರಣ ಎಂದಿದ್ದೇಕೆ?
- ರಣವೀರ್ ಅವರು ನನ್ನ ಅದೃಷ್ಟ ಮೋಡಿ. ನಾನು ಈ ಉದ್ಯಮದಲ್ಲಿ ಅಸ್ತಿತ್ವದಲ್ಲಿರಲು ಅವರೇ ಕಾರಣ
Mrunal Thakur: ಬಾಲಿವುಡ್‌ನ ನಟಿ ಮೃಣಾಲ್ ಠಾಕೂರ್, ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಮಾನವನ್ನು ಗಳಿಸಿದ್ದಾರೆ. ಲವ್ ಸೋನಿಯಾ ಚಿತ್ರದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ನಟಿ ತಮ್ಮ ಯಶಸ್ಸಿಗೆ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಅವರೇ ಕಾರಣ ಎಂದು ಹೇಳಿಕೊಂಡಿದ್ದು, ಸದ್ಯ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ರಣವೀರ್ ಅಲ್ಲಾಹಬಾಡಿಯಾ ಅವರ ಜನಪ್ರಿಯ ಪಾಡ್‌ಕ್ಯಾಸ್ಟ್‌ನಲ್ಲಿ ಅವರೊಂದಿಗೆ ಮಾತನಾಡಿದ ಮೃಣಾಲ್ , ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ರಣವೀರ್ ಅವರೊಂದಿಗೆ ಒಂದು ಜಾಹಿರಾತಿನಲ್ಲಿ ಕಾಣಿಸಿಕೊಂಡಿರುವುದಾಗಿ ಹಂಚಿಕೊಂಡರು. ಆಶ್ಚರ್ಯಕರ ವಿಷಯವೆಂದರೆ, ಆ ಜಾಹೀರಾತು ಪ್ರಸಾರವಾದ ನಂತರವೇ ಮೃಣಾಲ್ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಬ್ರೇಕ್‌ಗಳು ಮತ್ತು ಸಿನಿಮಾ ಅವಕಾಶಗಳು ಹುಡುಕಿಕೊಂಡು ಬಂದವು ಎಂದರು.
ಮೃಣಾಲ್ ಪ್ರಕಾರ, ರಣವೀರ್ ಅವರು ನನ್ನ ಅದೃಷ್ಟ ಮೋಡಿ. ನಾನು ಈ ಉದ್ಯಮದಲ್ಲಿ ಅಸ್ತಿತ್ವದಲ್ಲಿರಲು ಅವರೇ ಕಾರಣ. ಒಂದು ಜಾಹಿರಾತಿನಲ್ಲಿ ನಾನು ಅವರೊಂದಿಗೆ ಮಾಡೆಲ್ ಆಗಿ ಕಾರ್ಯನಿರ್ವಹಿಸಿದ್ದೆ. ಆ ಜಾಹಿರಾತು ತೆರೆ ಮೇಲೆ ಬಂದ ನಂತರ ನನ್ನನ್ನು ನಿರ್ಮಾಪಕರು ಗುರುತಿಸಲು ಪ್ರಾರಂಭಿಸಿದರು ಎಂದರು. ಈ ಎಲ್ಲಾ ಕಾರಣದಿಂದಲೇ ನಾನು ಅವರಿಗೆ ಕ್ರೆಡಿಟ್ ಕೊಡುತ್ತೇನೆ ಎಂದು ಅಭಿಪ್ರಾಯ ಹಂಚಿಕೊಂಡರು.
ರಣವೀರ್ ಸಿಂಗ್ ನಟನೆಗೆ ಮೃಣಾಲ್ ಠಾಕೂರ್ ಜೈಹೋ!
ಧುರಂಧರ್ ಚಿತ್ರದ ನಟನಾ ಸಾಮರ್ಥ್ಯವನ್ನು ಶ್ಲಾಘಿಸಿದ ಮೃಣಾಲ್, ನಟನೆಯ ಮೇಲ್ಮೈ ಮಟ್ಟದಲ್ಲಿರಲಿಲ್ಲ. ಅದರಲ್ಲಿ ಆಳ ಮತ್ತು ಪದರಗಳಿದ್ದವು. ನಾನು ಅವರನ್ನು ರಣವೀರ್ ಸಿಂಗ್ ಆಗಿ ನೋಡಲಿಲ್ಲ. ಅವರನ್ನು ಹಮ್ಜಾ ಆಗಿ ಮಾತ್ರ ನೋಡಿದೆ. ಅದು ನಾಯಕನಿಗಿಂತ ಹೆಚ್ಚಾಗಿ ಒಂದು ಪಾತ್ರವಾಗಿತ್ತು. ರಣವೀರ್ ತುಂಬಾ ಶ್ರಮಜೀವಿ ಆಗಿರುವುದರಿಂದ ನನಗೆ ನಂಬಲಾಗದಷ್ಟು ಹೆಮ್ಮೆ ಅವರ ಮೇಲೆ ಇದೆ. ಅವರ ಎಲ್ಲಾ ಚಿತ್ರವೂ ಬ್ಲಾಕ್ಬಸ್ಟರ್ ಆಗಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಮೃಣಾಲ್ ಠಾಕೂರ್ ಚಿತ್ರಗಳು
ಮೃಣಾಲ್ ಠಾಕೂರ್ ಕಿರುತೆರೆ ಕುಂಕುಮ ಭಾಗ್ಯ ಧಾರವಾಹಿ ಮೂಲಕ ಜನಪ್ರಿಯತೆಯನ್ನು ಗಳಸಿದರು. ಲವ್ ಸೋನಿಯಾ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ನಟಿ, ಸೂಪರ್ 30 , ಬಾಟ್ಲಾ ಹೌಸ್ , ಘೋಸ್ಟ್ ಸ್ಟೋರೀಸ್ , ತೂಫಾನ್ , ಸೀತಾ ರಾಮಮ್ , ಲಸ್ಟ್ ಸ್ಟೋರೀಸ್ 2 , ಮತ್ತು ಸನ್ ಆಫ್ ಸರ್ದಾರ್ 2 ನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ.
ಧುರಂಧರ್ 2 ಬಗ್ಗೆ
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ 'ಧುರಂಧರ್' ಒಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಡಿಸೆಂಬರ್ 2025 ರಲ್ಲಿ ತೆರೆಕಂಡ ಈ ಚಿತ್ರವು ಕೇವಲ ಒಂದು ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಮಾತ್ರವಲ್ಲದೆ, ಭಾರತೀಯ ಸಿನಿಮಾ ಇತಿಹಾಸದಲ್ಲೇ ಒಂದೇ ಭಾಷೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹೆಗ್ಗಳಿಕೆಗೆ ಪಾತ್ರವಾಯಿತು (ಏಜೆನ್ಸೀಸ್).