Chaudhry Aslam, Sanjay Dutt 
ಬಾಲಿವುಡ್

ನನ್ನ ಮೇಲೆ ಖಂಡಿತ ಒಂದು ಸಿನಿಮಾ ಬರುತ್ತೆ! ಸಾವಿಗು ಮುನ್ನ ಚೌಧರಿ ಅಸ್ಲಂ ಭವಿಷ್ಯ | Dhurandhar

ಪ್ರಮುಖ ಮುಖ್ಯಾಂಶಗಳು

  • ನನ್ನ ಜೀವನವನ್ನು ಆಧಾರವಾಗಿಟ್ಟುಕೊಂಡು ಒಂದು ಸಿನಿಮಾ ಬರುತ್ತೆ ಎಂದಿದ್ದ ಚೌಧರಿ ಅಸ್ಲಂ
  • ಚೌಧರಿ ಅಸ್ಲಂನ ನೆಚ್ಚಿನ ನಟ ಸಂಜಯ್ ದತ್
  • ಸಂಜಯ್ ದತ್ ಅಭಿನಯದ ಖಳನಾಯಕ್ ಅಸ್ಲಂನ ನೆಚ್ಚಿನ ಸಿನಿಮಾ
  • ಪಾಕಿಸ್ತಾನದ ಕರಾಚಿಯ ಟಪ್​ಕಾಪ್ ಖ್ಯಾತಿಯ ಚೌಧರಿ ಅಸ್ಲಂ ಖಾನ್​
Dhurandhar : ನನ್ನ ಜೀವನವನ್ನು ಆಧಾರವಾಗಿಟ್ಟುಕೊಂಡು ಒಂದು ಸಿನಿಮಾ ಖಂಡಿತವಾಗಿ ತೆರೆಯ ಮೇಲೆ ಬರುತ್ತೆ ಎಂದು ಲ್ಯಾರಿಯ ಟಪ್​ಕಾಪ್​ ಆಗಿದ್ದ ಚೌಧರಿ ಅಸ್ಲಂ ತನ್ನ ಬಳಿ ಹೇಳಿದ್ದರೆಂದು ಅವರ ಪತ್ನಿ ನೊರನ್ ಅಸ್ಲಂ ಪಾಕಿಸ್ತಾನದ ಪಾಡ್​ಕಾಸ್ಟ್​ವೊಂದರಲ್ಲಿ ಹೇಳಿದ್ದಾರೆ.
ಅಲ್ಲಾ ನಿಮ್ಮ ಬಗ್ಗೆ ಸಿನಿಮಾ ಮಾಡಲು ನಿವೇನು ಪಾಕಿಸ್ತಾನವನ್ನು ಗೆದ್ದಿದ್ದಿರಾ?ಎಂದು ನಾನು ಕೇಳದಾಗ,ನಾನು ನನ್ನ ಈಡೀ ಜೀವನವನ್ನೇ ಲ್ಯಾರಿಯನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಮುಡಿಪಿಟ್ಟಿದ್ದೇನೆ ಅದಕ್ಕಾದರೂ ಒಂದು ಸಿನಿಮಾ ತೆರೆಕಾಣುತ್ತೆ ಎಂದು ಅವರು ಹೇಳಿದ್ದರು. ಈಗ ಅದು ನಿಜವಾಗಿದೆ ಎಂದು ನೊರೆನ್ ಹೇಳಿದ್ದಾರೆ.
ಅವರಿಗೆ ಮೊದಲಿಂದಲು ಸಂಜಯ್​ ದತ್​ ಅವರ ಅಚ್ಚುಮೆಚ್ಚಿನ ನಟರಾಗಿದ್ದರು. ದತ್​ ಅಭಿನಯದ ಖಳನಾಯಕ್ ಅಸ್ಲಂ ಅವರ ನೆಚ್ಚಿನ ಸಿನಿಮಾವಾಗಿತ್ತು. ಕಾಕತಾಳೀಯ ಎಂಬತ್ತೆ ಈದೀಗ ತೆರೆ ಕಂಡಿರುವ ಧುರಂಧರ್ (Dhurandhar) ಸಿನಿಮಾದಲ್ಲಿ ಸಂಜಯ್ ದತ್ ಅವರೆ ನನ್ನ ಗಂಡನ ಪಾತ್ರ ಮಾಡಿರುವುದು ಸಂತಸವನ್ನು ತಂದಿದೆ ಎಂದಿದ್ದಾರೆ.

ಅದರೂ ಸ್ವಲ್ಪ ಬೇಸರವಿದೆ

ಧುರಂಧರ ಸಿನಿಮಾದಲ್ಲಿ ತಮ್ಮ ಪತಿಯ ಬಗ್ಗೆ ಪರಿಚಯ ನೀಡುವಾಗ ಜಿನ್ ಮತ್ತು ಶೈತಾನಿನೆ ಹುಟ್ಟಿದವನೇ ಚೌಧರಿ ಅಸ್ಲಂ ಎಂದಿರುವುದು ಬಹಳ ನೋವುಂಟುಮಾಡಿದೆ. ಇದು ಕೇವಲ ಅಸ್ಲಂಗೆ ಮಾತ್ರವಲ್ಲ ಅವರ ತಾಯಿಗೆ ಸಹ ಅಗೌರವ ಉಂಟುಮಾಡುವ ಹೇಳಿಕೆಯಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಯಾರು ಈ ಚೌಧರಿ ಅಸ್ಲಂ ?

1963 ರಲ್ಲಿ ಮನ್ಸೆಹ್ರಾದಲ್ಲಿ ಜನಿಸಿದ ಮುಹಮ್ಮದ್ ಅಸ್ಲಂ ಖಾನ್, ಪಠಾಣ್ ಅಧಿಕಾರಿಯಾಗಿ 80 ರ ದಶಕದಲ್ಲಿ ಸಿಂಧ್ ಪೊಲೀಸ್ ಪಡೆಗೆ ಸೇರಿ,ನಂತರ ಎಸ್ಪಿ ಚೌಧರಿ ಅಸ್ಲಂ ಆದರು. ಅವರ ಉಗಮ ಕರಾಚಿಯ ಗುಲ್ಬಹಾರ್ ಪೊಲೀಸ್ ಠಾಣೆಯಲ್ಲಿ ಪ್ರಾರಂಭವಾಯಿತು. ಎರಡು ದಶಕಗಳ ನಂತರ, ಅವರು ಕರಾಚಿಯ ರಕ್ತಸಿಕ್ತ ಯುದ್ಧಭೂಮಿಯ ಮುಂಚೂಣಿಯಲ್ಲಿ ನಿಂತು, ನಗರದ ಅತ್ಯಂತ ನಿರ್ದಯ ಗ್ಯಾಂಗ್‌ಗಳ ವಿರುದ್ಧ ರಾಜ್ಯದ ಪೂರ್ಣ ಪ್ರಮಾಣದ ಯುದ್ಧದಲ್ಲಿ ಲಿಯಾರಿ ಟಾಸ್ಕ್ ಫೋರ್ಸ್ ಅನ್ನು ಮುನ್ನಡೆಸಿದರು. ಹಿರಿಯ ಕರಾಚಿ ಪೊಲೀಸ್ ಅಧಿಕಾರಿಯಾಗಿ, ಅಸ್ಲಂ ಅಪರಾಧ ಸಿಂಡಿಕೇಟ್‌ಗಳು, ಪಂಥೀಯ ಹಂತಕರು ಮತ್ತು ಉಗ್ರಗಾಮಿ ಜಾಲಗಳ ವಿರುದ್ಧ ನಿರಂತರ ಹೋರಾಟ ನಡೆಸಿದರು.ಚೌಧರಿ ಅಸ್ಲಂ ಅವರನ್ನು 2014 ರಲ್ಲಿ ತಾಲಿಬಾನ್‌ನ ಪಾಕಿಸ್ತಾನಿ ಬಣವಾದ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಹತ್ಯೆ ಮಾಡಿತು. ಆ ಸಮಯದಲ್ಲಿ ಅಸ್ಲಂ ಕರಾಚಿಯ ಭಯೋತ್ಪಾದನಾ ನಿಗ್ರಹ ಘಟಕದ ಎಸ್‌ಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದರು.