ಬಾಲಿವುಡ್‌ನ 'ಫಿಟ್‌ನೆಸ್ ಕ್ವೀನ್' ಮಲೈಕಾ ಅರೋರಾ(ಚಿತ್ರ Instagram) 
ಬಾಲಿವುಡ್

ಜಿಮ್ ಬೇಡ, ಡಯಟ್ ಬೇಡ; ಮಲೈಕಾ ಅರೋರಾ ತೋರಿಸೋ ಈ 'ಚೈನೀಸ್ ಟ್ರಿಕ್' ಮಾಡಿದ್ರೆ ಫಿಗರ್ ಫುಲ್ ಫಿಟ್! Malaika Arora

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್‌ನ 'ಫಿಟ್‌ನೆಸ್ ಕ್ವೀನ್' ಮಲೈಕಾ ಅರೋರಾ ಸದಾ ಹೊಸ ಹೊಸ ಪ್ರಯೋಗಗಳಿಗೆ ಹೆಸರುವಾಸಿ
  • ಯೋಗ, ಜಿಮ್ ನಂತರ ​ಚೀನಾದ ಸಾಂಪ್ರದಾಯಿಕ ವ್ಯಾಯಾಮ ಪದ್ಧತಿಯನ್ನು ಪರಿಚಯಿಸಿದ ನಟಿ ಮಲೈಕಾ
  • ಈ ವ್ಯಾಯಾಮ ಮೊದಲ ದಿನದಿಂದಲೇ ಶಕ್ತಿಯ ಹರಿವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ
Malaika Arora: ಬಾಲಿವುಡ್‌ನ 'ಫಿಟ್‌ನೆಸ್ ಕ್ವೀನ್' ಮಲೈಕಾ ಅರೋರಾ ಸದಾ ಹೊಸ ಹೊಸ ಪ್ರಯೋಗಗಳಿಗೆ ಹೆಸರುವಾಸಿ. ಯೋಗ, ಜಿಮ್​ ಮತ್ತು ಪಿಲಾಟಿಸ್ ನಂತರ ಈಗ ಚೀನಾದ ಸಾಂಪ್ರದಾಯಿಕ ವ್ಯಾಯಾಮ ಪದ್ಧತಿಯನ್ನು ಪರಿಚಯಿಸಿದ್ದಾರೆ. ಇತ್ತೀಚೆಗೆ ನಟಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ 10 ನಿಮಿಷದ ದಿನಚರಿ ಹೇಗೆ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ.

ಏನಿದು ಚೈನೀಸ್ ವ್ಯಾಯಾಮ?

ಮಲೈಕಾ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ತಮ್ಮ ಕೈಗಳನ್ನು ಚಾಚಿ, ಕಾಲಿನ ಬೆರಳುಗಳ ಮೇಲೆ ನಿಂತು ದೇಹವನ್ನು ಹಗುರವಾಗಿ ಅಕ್ಕಪಕ್ಕಕ್ಕೆ ಚಲಿಸುವುದನ್ನು ಕಾಣಬಹುದು. ಇದನ್ನು ಚೀನಾದಲ್ಲಿ ಸುದೀರ್ಘ ಆಯಸ್ಸಿನ ರಹಸ್ಯ ಎಂದು ಕರೆಯಲಾಗುತ್ತದೆ. ಈ ವ್ಯಾಯಾಮವು ಹೊಟ್ಟೆ, ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಕರುಳು ಮತ್ತು ದೇಹದ ಇತರ ಭಾಗಗಳನ್ನು ಗುರಿಯಾಗಿಸಿಕೊಂಡಿದ್ದು, ಮೊದಲ ದಿನದಿಂದಲೇ ಶಕ್ತಿಯ ಹರಿವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಮಲೈಕಾ ಸೂಚಿಸಿದಂತೆ, ನಿರಂತರ ಅಭ್ಯಾಸವು ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ದೇಹದ ಅಂಗಾಂಶಗಳಲ್ಲಿ ಹೆಚ್ಚುವರಿಯಾಗಿ ಶೇಖರಣೆಗೊಂಡ ದ್ರವವನ್ನು ನಾಳಗಳ ಮೂಲಕ ಹೊರಹಾಕಿ, ರಕ್ತಪರಿಚಲನೆಗೆ ಮರಳಿ ಸೇರಿಸುತ್ತದೆ ಎಂದು ವಿವರಿಸಿದ್ದಾರೆ.
ನಿರಂತರ ಅಭ್ಯಾಸವು ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ. ಆದಾಗ್ಯೂ, ಈ ವ್ಯಾಯಾಮಗಳು ದೇಹದಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಹಗುರವಾದ ಚಲನೆಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಈ ವ್ಯಾಯಾಮಗಳು ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಸುಡಲು ಪರಿಣಾಮಕಾರಿ ಮಾರ್ಗವಾಗಿದೆ ಎಂದು ಶೀರ್ಷಿಕೆ ಬರೆದು ಪೋಸ್ಟ್ ಮಾಡಿದ್ದಾರೆ.

ಇಂಟರ್ನೆಟ್ ಪ್ರತಿಕ್ರಿಯೆ

ಮಲೈಕಾ ಅವರ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ, ಅನೇಕ ಬಳಕೆದಾರರು ಕಾಮೆಂಟ್​ ಮಾಡಿದ್ದಾರೆ. ಒಬ್ಬ ಬಳಕೆದಾರರು ನೀವು ಪ್ರತಿ ಬಾರಿ ಪೋಸ್ಟ್ ಮಾಡಿದಾಗಲೂ ಆರೋಗ್ಯವಾಗಿ ಕಾಣುತ್ತೀರಿ ಎಂದು ಕಾಮೆಂಟ್​ ಮಾಡಿದರೆ, ಇನ್ನೊಬ್ಬ ಬಳಕೆದಾರರು ಇದು ನನ್ನ ದೈನಂದಿನ ದಿನಚರಿ ಇದು ನಿಜಕ್ಕೂ ಅದ್ಭುತವಾಗಿದೆ. ದೇಹ ಮತ್ತು ಆತ್ಮಕ್ಕೆ ಚೈತನ್ಯ ನೀಡುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ (ಏಜೆನ್ಸೀಸ್​).