ಫಿಟ್ನೆಸ್​ ಸಲುವಾಗಿ ಕ್ಯಾಲೋರಿ ಡಫಿಸಿಟ್​ ಡಯಟ್​ ಫಾಲೋ ಮಾಡುತ್ತಿರುವ ನಟಿ 
ಬಾಲಿವುಡ್

ಕೃತಿ ಸನೋನ್ ಸೌಂದರ್ಯದ ಹಿಂದಿದೆ ‘ಕ್ಯಾಲೋರಿ ಡೆಫಿಸಿಟ್’ ಮ್ಯಾಜಿಕ್! ತೂಕ ಇಳಿಸಲು ನಟಿ ಮಾಡಿದ ಪ್ಲಾನ್ ಏನು ಗೊತ್ತಾ? Kriti Sanon on Calorie Deficit

ಪ್ರಮುಖ ಮುಖ್ಯಾಂಶಗಳು

  • ಕಾಕ್‌ಟೇಲ್ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವ ನಟಿ ಕೃತಿ ಸನೋನ್​
  • ಫಿಟ್ನೆಸ್​ ಸಲುವಾಗಿ ಕ್ಯಾಲೋರಿ ಡಫಿಸಿಟ್​ ಡಯಟ್​ ಫಾಲೋ ಮಾಡುತ್ತಿರುವ ನಟಿ
  • ಏನಿದು ಕ್ಯಾಲೋರಿ ಡೆಫಿಸಿಟ್​ ಡಯಟ್​? ಇದರ ಪ್ರಯೋಜನಗಳೇನು?
ಬಾಲಿವುಡ್​: ರಶ್ಮಿಕಾ ಮಂದಣ್ಣ, ಶಾಹಿದ್​ ಕಪೂರ್ ಮತ್ತು ಕೃತಿ ಸನೋನ್​ ಅಭಿನಯದ ಕಾಕ್​ಟೆಲ್​ 2 ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲಿದೆ. ಸದ್ಯ ಈ ಸಿನಿಮಾದ ಟೀಸರ್​ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈಗ ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿರುವ ಕೃತಿ ಸನೋನ್​ (Kriti Sanon on Calorie Deficit) ತಮ್ಮ ಫಿಟ್ನೆಸ್​ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ನಾನು ಕ್ಯಾಲೋರಿ ಡೆಫಿಸಿಟ್​ ಡಯಟ್​ನ್ನು ಅನುಸರಿಸಿದೆ!

ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೃತಿ, ಪ್ರಮಾಣಿಕವಾಗಿ ಹೇಳಬೇಕೆಂದರೆ ನಾನು ಇದೇ ಮೊದಲ ಭಾರಿ ಸರಿಯಾಗಿ ಆಹಾರ ಮತ್ತು ವ್ಯಾಯಾಮವನ್ನು ಮಾಡಿದ್ದು. ಮೊದಲೆಲ್ಲಾ ಎರಡು ದಿನ ಮಾಡಿ ಮೂರನೇ ದಿನ ಬಿಟ್ಟ ಬಿಡುತ್ತಿದೆ. ನಾನು ಈ ಸಲ ಕ್ಯಾಲೋರಿ ಡೆಫಿಸಿಟ್​ ಡಯಟ್​ನ್ನು ಆರಿಸಿಕೊಂಡೆ, ನಾವು ಇಟಲಿಯಲ್ಲಿ ಶೂಟಿಂಗ್​ ಮಾಡಿದಾಗ ಪೀಜಾ, ಪಾಸ್ತಾ ಎಲ್ಲವನ್ನು ತಿನ್ನುತ್ತಿದೆ, ಮತ್ತೆ ಹಾಗೆಯೇ ಬರ್ನಔಟ್​ ಮಾಡುತ್ತಿದೆ ಎಂದು ಹೇಳಿದ್ದಾರೆ.

ಕ್ಯಾಲೋರಿ ಡೆಫಿಸಿಟ್​ ಡಯಟ್​ ಎಂದರೇನು?

ಕ್ಯಾಲೋರಿ ಡೆಫಿಸಿಟ್​ (Calorie Deficit) ಎಂದರೆ ನಿಮ್ಮ ದೇಹವು ದಿನವಿಡೀ ಖರ್ಚು ಮಾಡುವ (ಬರ್ನ್ ಮಾಡುವ) ಕ್ಯಾಲೋರಿಗಳಿಗಿಂತ ಕಡಿಮೆ ಕ್ಯಾಲೋರಿಗಳನ್ನು ಸೇವಿಸುವುದು. ಸರಳವಾಗಿ ಹೇಳುವುದಾದರೆ, ದೇಹಕ್ಕೆ ಅಗತ್ಯವಿರುವ ಶಕ್ತಿಗಿಂತ ಕಡಿಮೆ ಆಹಾರದ ಶಕ್ತಿಯನ್ನು ನೀಡುವುದು. ಇದರಿಂದ ದೇಹವು ಉಳಿದ ಶಕ್ತಿಗಾಗಿ ಸಂಗ್ರಹವಾಗಿರುವ ಕೊಬ್ಬನ್ನು (Fat) ಬಳಸಿಕೊಳ್ಳಲು ಆರಂಭಿಸುತ್ತದೆ, ಇದು ತೂಕ ಇಳಿಕೆಗೆ ಕಾರಣವಾಗುತ್ತದೆ.

ಈ ಡಯಟ್​ನ ಲಾಭ

ತೂಕ ಇಳಿಕೆ (Weight Loss): ಇದು ತೂಕ ಇಳಿಸಲು ಇರುವ ಅತ್ಯಂತ ವೈಜ್ಞಾನಿಕ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ದೇಹವು ತನ್ನ ಶಕ್ತಿಗಾಗಿ ಶೇಖರಣೆಯಾದ ಕೊಬ್ಬನ್ನು ಬಳಸುವುದರಿಂದ ಬೊಜ್ಜು ಕರಗುತ್ತದೆ.
ರಕ್ತದ ಸಕ್ಕರೆ ನಿಯಂತ್ರಣ (Blood Sugar Control): ಕ್ಯಾಲೋರಿಗಳನ್ನು ಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಸ್ಥಿರವಾಗಿರುತ್ತದೆ, ಇದು ಮಧುಮೇಹ ಇರುವವರಿಗೆ ಅಥವಾ ಬರುವ ಸಾಧ್ಯತೆ ಇರುವವರಿಗೆ ಪ್ರಯೋಜನಕಾರಿ.
ಹೃದಯದ ಆರೋಗ್ಯ (Heart Health): ತೂಕ ಕಡಿಮೆಯಾದಂತೆ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವು ಸುಧಾರಿಸುತ್ತದೆ, ಇದರಿಂದ ಹೃದಯದ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.
ಚಯಾಪಚಯ ಕ್ರಿಯೆ ಸುಧಾರಣೆ (Improved Metabolism): ಸರಿಯಾದ ಪ್ರಮಾಣದ ಪ್ರೋಟೀನ್ ಮತ್ತು ವ್ಯಾಯಾಮದೊಂದಿಗೆ ಈ ಡಯಟ್ ಮಾಡಿದರೆ ದೇಹದ ಚಯಾಪಚಯ ಕ್ರಿಯೆ ಚುರುಕಾಗುತ್ತದೆ.

ಕಾಕ್​ಟೇಲ್​ 2 ಬಗ್ಗೆ

ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ಅಭಿನಯದ 2012ರ ಸೂಪರ್ ಹಿಟ್ ಚಿತ್ರ ಕಾಕ್‌ಟೇಲ್ (Cocktail) ಬಾಲಿವುಡ್‌ನ ಅತ್ಯಂತ ನೆಚ್ಚಿನ ರೋಮ್ಯಾಂಟಿಕ್ ಡ್ರಾಮಾ ಸಿನಿಮಾಗಳಲ್ಲಿ ಒಂದಾಗಿದೆ. ಸದ್ಯ ಈ ಸಿನಿಮಾದ ಮುಂದುವರಿದ ಭಾಗವಾದ ಕಾಕ್‌ಟೇಲ್ 2 ಬಗ್ಗೆ ಚಿತ್ರರಂಗದಲ್ಲಿ ಮತ್ತು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ.
ಮೊದಲ ಭಾಗದಂತೆ ಈ ಚಿತ್ರವೂ ಸಹ ಸ್ನೇಹ, ಪ್ರೀತಿ ಮತ್ತು ಸಂಬಂಧಗಳ ಸಂಕೀರ್ಣತೆಯನ್ನು ಆಧುನಿಕ ಶೈಲಿಯಲ್ಲಿ ತೆರೆಯ ಮೇಲೆ ತರಲಿದೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಶಾಹಿದ್​ ಕಪೂರ್​, ಕ್ರತಿ ಸನೋನ್​ ಮತ್ತು ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ,(ಏಜನ್ಸೀಸ್​).