ನವದೆಹಲಿ: ಬಾಲಿವುಡ್ನ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮ್ಮ ಮುಂಬರುವ ಚಿತ್ರ ಕಿಂಗ್ಗಾಗಿ (King movie) ಪ್ರಸ್ತುತ ಸುದ್ಧಿಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಅವರ ಪುತ್ರಿ ಸುಹಾನಾ ಖಾನ್, ದೀಪಿಕಾ ಪಡುಕೋಣೆ , ರಾಣಿ ಮುಖರ್ಜಿ, ಜೈದೀಪ್ ಅಹ್ಲಾವತ್ ಸೇರಿದಂತೆ ಹಲವಾರು ನಟರು ಚಿತ್ರದಲ್ಲಿ ನಟಿಸಲಿದ್ದಾರೆ.
ಸಿನಿಮಾದಲ್ಲಿ ಶಾರುಖ್ ಖಾನ್ ಮತ್ತು ಸುಹಾನಾ ಖಾನ್ ಅವರ ಅದ್ಭುತ ಸಾಹಸ ದೃಶ್ಯಗಳು ಕಂಗೊಳಿಸುತ್ತಿದ್ದು, ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಶಾರುಖ್ ತನ್ನ ಮಗಳಿಗೆ ಕಿಂಗ್ ಚಿತ್ರಕ್ಕಾಗಿ ತರಬೇತಿ ನೀಡುತ್ತಿದ್ದಾರೆ. ನಿರ್ದೇಶಕಿ ಫರಾಖಾನ್ ನಿರೀಕ್ಷಿತ ಚಿತ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸುಹಾನಾಗೆ ತರಬೇತಿ ನೀಡುತ್ತಿರುವ ಶಾರುಖ್ ಖಾನ್
ನಟ ಶಾರುಖ್ಖಾನ್ ತಮ್ಮ ಮಗಳು ಸುಹಾನಾಗೆ ಆಕ್ಷನ್ ಸೀಕ್ವೆನ್ಸ್ಗಳಲ್ಲಿ ತರಬೇತಿ ನೀಡುತ್ತಿರುವ ಬಗ್ಗೆ ಫರಾ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚಿಗೆ ದುಬೈನ ಕಾರ್ಯಕ್ರಮದ ಸಂಭಾಷಣೆಯ ಸಮಯದಲ್ಲಿ ಮಾತನಾಡಿದ ಫರಾ, ಕಿಂಗ್ ಚಿತ್ರದ ಆಕ್ಷನ್ ಸೀಕ್ವೆನ್ಸ್ಗಳಿಗಾಗಿ ಶಾರುಖ್ ಸುಹಾನಾಗೆ ತರಬೇತಿ ನೀಡುತ್ತಿದ್ದಾರೆ ಎಂದು ಬಹಿರಂಗಪಡಿಸಿದರು.
ಫರಾ ಖಾನ್ ಅವರ ಹೇಳಿದ ಈ ಮಾತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಅವರನ್ನು ಹೊಗಳುತ್ತಿರುವುದನ್ನು ನೋಡಬಹುದಾಗಿದೆ. ಫರಾ, ಶಾರುಖ್ ಅವರ ಮಗ ಆರ್ಯನ್ ಅದ್ಭುತ ಸರಣಿಯನ್ನು ನಿರ್ಮಿಸಿದ್ದಾರೆ. ಸುಹಾನಾ ಕೂಡ ತುಂಬಾ ಶ್ರಮ ಪಡುತ್ತಿದ್ದಾಳೆ. ಆಕೆಯೂ ಕೂಡ ಕಿಂಗ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಕಿಂಗ್ ಅವರ ಬೃಹತ್ ತಾರಾಬಳಗ
ಸುಹಾನಾ ಜೋಯಾ ಅಖ್ತರ್ ಅವರ 'ದಿ ಆರ್ಚೀಸ್' ಚಿತ್ರದೊಂದಿಗೆ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅಗಸ್ತ್ಯ ನಂದಾ, ಖುಷಿ ಕಪೂರ್, ವೇದಾಂಗ್ ರೈನಾ ಮತ್ತು ಮಿಹಿರ್ ಅಹುಜಾ ಸೇರಿದಂತೆ ಹಲವಾರು ನಟರು ನಟಿಸಿದ್ದಾರೆ. ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಯಿತು.
ಸುಹಾನಾ ಈಗ ತನ್ನ ತಂದೆಯೊಂದಿಗೆ ಕಿಂಗ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ ಎರಡನೇ ಸಿನಿಮಾವಾಗಿದ್ದು, ಕಿಂಗ್ ಚಿತ್ರದಲ್ಲಿ ಶಾರುಖ್ ಖಾನ್, ಸುಹಾನಾ ಖಾನ್, ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ ಮತ್ತು ಅಭಿಷೇಕ್ ಬಚ್ಚನ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರ 2026 ರಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ (ಏಜೆನ್ಸೀಸ್).