Drishyam-3: 2025ರಲ್ಲಿ ವಿಶ್ವದ್ಯಾಂತ ಗಮನ ಸೆಳೆದ ಮತ್ತು ಬಾಕ್ಸ್ ಆಫಿಸ್ನಲ್ಲಿ ಧೂಳೆಬ್ಬಿಸಿದ ಚಿತ್ರ ಧುರಂಧರ್. ಈ ಚಿತ್ರದಲ್ಲಿ ಖಡಕ್ ಖಳ ನಾಯಕನಾಗಿ ಮಿಂಚುವ ಮೂಲಕ ನಟ ಅಕ್ಷಯ್ ಖನ್ನಾ ಅವರು ತಮ್ಮ ಮತ್ತಷ್ಟು ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ.
ಧುರಂಧರ್ ಸಕ್ಸಸ್ ಅಲೆಯಲ್ಲಿ ತೆಲುತ್ತಿರುವ ಅಕ್ಷಯ್ ಖನ್ನಾ (ಸರಿಯಾಗಿ ಅಕ್ಷಯೇ ಖನ್ನಾ) ಅವರು ಹಿಂದಿ ದೃಶ್ಯಂ ಫ್ರಾಂಚೈಸಿಯ ಮೂರನೇ ಭಾಗವಾದ 'ದೃಶ್ಯಂ 3' ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂದು ಬಾಲಿವುಡ್‌ನಲ್ಲಿ ಇತ್ತೀಚಿಗೆ ದೊಡ್ಡ ಸುದ್ದಿಯೊಂದು ಹೊರ ಬಿದ್ದಿದ್ದೆ.
ಹೌದು, ಇದು ರಣವೀರ್ ಸಿಂಗ್ 'ಡಾನ್ 3' ಇಂದ ನಿರ್ಗಮಿಸಿದ ವದಂತಿಯ ನಂತರ ಇದೀಗ ಬಂದಿದ್ದು, ಸಿನಿ ಉದ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.
ನಿರ್ಗಮನಕ್ಕೆ ಕಾರಣವೇನು..?
ವರದಿಗಳ ಪ್ರಕಾರ, ವೇತನ ಸಂಬಂಧಿತ ವಿವಾದ ಮತ್ತು ಅವರ ನಡುವಿನ ಭಿನ್ನಾಭಿಪ್ರಾಯಗಳೇ ಖನ್ನಾ ಅವರ ನಿರ್ಗಮನದ ಹಿಂದಿನ ಮುಖ್ಯ ಕಾರಣಗಳು ಎಂದು ಹೇಳಲಾಗುತ್ತಿದೆ.
'ಧುರಂಧರ್' (Dhurandhar) ದೊಡ್ಡ ಯಶಸ್ಸು ಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸುಮಾರು 1000 ಕೋಟಿ ರೂಪಾಯಿ ಗಳಿಸಿದೆ. ಈ ಯಶಸ್ಸಿನ ನಂತರ, ಅವರು 'ದೃಶ್ಯಂ 3'ಗಾಗಿ ಹೆಚ್ಚಿನ ವೇತನ ಕೇಳಿದ್ದರಂತೆ, ಆದರೆ ನಿರ್ಮಾಪಕರು ಅದನ್ನು ಒಪ್ಪಲಿಲ್ಲ. ಅಲ್ಲದೆ, ಪಾತ್ರದ ಕುರಿತು ಕೆಲವು ಬದಲಾವಣೆಗಳನ್ನು ಕೋರಿದ್ದರಂತೆ, ಇದು ನಿರ್ಮಾಣ ತಂಡದೊಂದಿಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು ಎಂದು ವರದಿ ಉಲ್ಲೇಖಿಸಿದೆ.
ವಿವಾದಗಳಿಂದಾಗಿ ಹೊರ ಬಂದ್ರಾ ಖನ್ನಾ!
'ದೃಶ್ಯಂ' ಸರಣಿಯಲ್ಲಿ ಖನ್ನಾ ಅವರು ಎರಡನೇ ಭಾಗದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದರು, ಮತ್ತು ಮೂರನೇ ಭಾಗದಲ್ಲಿ ಅದನ್ನು ಮುಂದುವರಿಸಬೇಕಿತ್ತು. ಆದರೆ, ಈ ವಿವಾದಗಳಿಂದಾಗಿ ಅವರು ಚಿತ್ರದಿಂದ ಹೊರಬಂದಿದ್ದಾರೆ ಎಂದು ಹೇಳಲಾಗಿದೆ.
ಅಜಯ್ ದೇವಗಣ್ ನಟಿಸುವ ಈ ಚಿತ್ರದ ನಿರ್ಮಾಣ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ, ಮತ್ತು ಖನ್ನಾ ಅವರ ಸ್ಥಾನಕ್ಕೆ ಹೊಸ ನಟರನ್ನು ಹುಡುಕುತ್ತಿರುವ ಸಾಧ್ಯತೆಯಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿ ವೈರಲ್ ಆಗಿದ್ದು, ಕೆಲವರು ಇದನ್ನು ಕೇವಲ ವದಂತಿ ಎಂದು ಹೇಳುತ್ತಿದ್ದಾರೆ. ಆದರೆ ನಿರ್ಮಾಪಕರು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಮುಂದಿಮ ಏನಾಗಲಿದೆ ಎಂಬುದು ಕಾದು ನೋಡಬೇಕಾಗಿದೆ,(ಏಜೆನ್ಸೀಸ್).