Katrina Kaif: ಬಾಲಿವುಡ್ ನಟಿ ಕತ್ರಿನಾ ಕೈಫ್ ಹೋಳಿ ಹಬ್ಬವನ್ನು ಕುಟುಂಬದೊಂದಿಗೆ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಇದು ನಟಿಯ ಪಾಲಿಗೆ ಕೇವಲ ಬಣ್ಣಗಳ ಹಬ್ಬವಾಗದೇ ˌ ಹೊಸ ಜವಾಬ್ದಾರಿ ಮತ್ತು ಅಪಾರ ಸಂತೋಷದ ಸಂಕೇತವಾಗಿತ್ತು. ಸಧ್ಯ ಕತ್ರಿನಾ ಹಂಚಿಕೊಂಡಿರುವ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.
ಕತ್ರಿನಾ ಮಾಡಿದ ಪೋಸ್ಟ್ನಲ್ಲೇನಿದೆ?
ಹೋಳಿ ಹಬ್ಬದ ಸಂದರ್ಭದಲ್ಲಿ ಕತ್ರಿನಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದು, ಎಲ್ಲರೂ ಬಿಳಿ ಬಣ್ಣದ ಉಡುಪಿನಲ್ಲಿ ಮಿಂಚುತ್ತಿರುವುದನ್ನು ಕಾಣಬಹುದಾಗಿದೆ. ವಿಕಿ ಕತ್ರಿನಾಳನ್ನು ಅಪ್ಪಿಕೊಂಡಿದ್ದರೆ, ಸನ್ನಿ ಕೌಶಲ್ ವಾಟರ್ ಗನ್ ಹಿಡಿದು ನಿಂತಿದ್ದಾರೆ. ಈ ಪೋಸ್ಟ್ಗೆ ಕತ್ರಿನಾ ದಿ ಹ್ಯಾಪಿಯಸ್ಟ್ ಹೋಳಿ ಎಂಬ ಶೀರ್ಷಿಕೆಯನ್ನು ನೀಡಿ ಪೋಸ್ಟ್ ಮಾಡಿದ್ದಾರೆ.
ವಿಕ್ಕಿ ಕೌಶಲ್ ಅವರ ಮುಂಬರುವ ಚಲನಚಿತ್ರಗಳು
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಲವ್ ಅಂಡ್ ವಾರ್ ಚಿತ್ರದಲ್ಲಿ ವಿಕ್ಕಿ ಕೌಶಲ್ ಕಾಣಿಸಿಕೊಳ್ಳಲಿದ್ದು, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರೊಂದಿಗೆ ನಟಿಸಲಿದ್ದಾರೆ. ಈ ಚಿತ್ರವು ತ್ರಿಕೋನ ಪ್ರೇಮಕಥೆಯನ್ನು ಆಧರಿಸಿದೆ ಎಂಬ ನಿರೀಕ್ಷೆಯಲ್ಲಿದೆ. ಕೆಲವರು ಯುದ್ಧಕಾಲದ ಪ್ರೇಮಕಥೆಯನ್ನು ಚಿತ್ರೀಕರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕತ್ರಿನಾ 2024 ರಲ್ಲಿ ಶ್ರೀರಾಮ್ ರಾಘವನ್ ಅವರ ಮೆರ್ರಿ ಕ್ರಿಸ್‌ಮಸ್‌ನಲ್ಲಿ ವಿಜಯ್ ಸೇತುಪತಿ ಅವರೊಂದಿಗೆ ಕೊನೆಯ ಬಾರಿಗೆ ಚಿತ್ರದಲ್ಲಿ ಕಾಣಿಸಿಕೊಂಡರು. ಆದಾಗ್ಯೂ, ಪ್ರಸ್ತುತ ತಮ್ಮ ತಾಯ್ತನದ ಹಂತವನ್ನು ಆನಂದಿಸುತ್ತಿರುವುದರಿಂದ ಯಾವುದೇ ಯೋಜನೆಗಳಿಗೂ ಸಹಿ ಹಾಕುತ್ತಿಲ್ಲ.
ಕತ್ರಿನಾ ಮತ್ತು ವಿಕಿಯ ಮಗ
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ 2021ರಲ್ಲಿ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ನವೆಂಬರ್ 7, 2025 ರಂದು ಗಂಡು ಮಗುವಿಗೆ ಪೋಷಕರಾದರು. ನಟಿ ಜನವರಿಯ 2026 ರ ಆರಂಭದಲ್ಲಿ ತಮ್ಮ ಮೊದಲ ಮಗುವಿನ ಆಗಮನವನ್ನು ಘೋಷಿಸಿದರು (ಏಜೆನ್ಸೀಸ್).