ಭದ್ರತಾ ತಪಾಸಣೆಯನ್ನು ಮಾಡಿಸಿಕೊಳ್ಳದೆ ನೇರವಾಗಿ ವಿಮಾನ ನಿಲ್ದಾಣ ಪ್ರವೇಶಿಸಿದ ನಟಿ
- ಮುಂಬೈ ವಿಮಾನ ನಿಲ್ದಾಣದಲ್ಲಿ ಕರೀನಾ ಕಪೂರ್ ವಿವಾದ
- ಭದ್ರತಾ ತಪಾಸಣೆಯನ್ನು ಮಾಡಿಸಿಕೊಳ್ಳದೆ ನೇರವಾಗಿ ವಿಮಾನ ನಿಲ್ದಾಣ ಪ್ರವೇಶಿಸಿದ ನಟಿ
- ಬೆಬೋ ವರ್ತನೆಗೆ ನೆಟ್ಟಿಗರು ಗರಂ
ಮುಂಬೈ: ಈ ರಾಜಕಾರಣಿ ಮತ್ತು ಸಿನಿಮಾ ನಟ-ನಟಿಯರು ತಮ್ಮ ಖ್ಯಾತಿ ಹಾಗೂ ಜನಪ್ರೀಯತೆಯನ್ನು ಬಳಸಿಕೊಂಡು ಸಾಮಾನ್ಯ ಜನರ ಮುಂದೆ ತಾವು ಈ ದೇಶದ ಪ್ರಥಮ ದರ್ಜೆ ನಾಗರಿಕರು ಹಾಗೂ ನೀವುಗಳು ದ್ವಿತೀಯ, ತೃತೀಯ ದರ್ಜೆಯವರು ಎನ್ನಿಸುವಂತೆ ತಮ್ಮ ವರ್ತನೆಯ ಮೂಲಕ ತೋರ್ಪಡಿಸುವುದನ್ನು ನಾವು ಹಲವಾರು ಬಾರಿ ನೋಡಿದ್ದೆವೆ. ಈಗ ಇದೇ ರೀತಿಯ ಆರೋಪಕ್ಕೆ ಬಾಲಿವುಡ್ನ ಬೆಬೋ ಖ್ಯಾತಿಯ ಕರೀನಾ ಕಪೂರ್ ಖಾನ್ (Kareena Kapoor in Airport) ಗುರಿಯಾಗಿದ್ದಾರೆ.
ಸರತಿ ಸಾಲನ್ನ ಮರೆತ ನಟಿ!
ಮುಂಬೈನ ಛತ್ರಪತಿ ಶಿವಾಜಿ ಏರಪೋರ್ಟ್ಗೆ ಬಂದ ಸ್ಟೈಲಾಗಿ ರೆಡಿಯಾಗಿ ಬಂದ ನಟಿ ಕರೀನಾ ಕಪೂರ್, ಪ್ರವೇಶ ದ್ವಾರದಲ್ಲಿರುವ ಭದ್ರತಾ ತಪಾಸಣೆಗೆ ಒಳಗಾಗದೆ ನೇರವಾಗಿ ವಿಮಾನ ನಿಲ್ದಾಣ ಪ್ರವೇಶ ಮಾಡಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಕರೀನಾ ಕಪೂರ್ ಅವರ ಈ ವರ್ತನೆ ಈಗ ಸೋಶಿಯಲ್ ಮೀಡಿಯಾನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಈ ವಿಡಿಯೋ ಈಗ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.
ಕರೀನಾ ಈ ರೀತಿ ಮಾಡಿದ್ದು, ಇದೇ ಮೊದಲೇನಲ್ಲ, ಇವಳು ಯಾವಾಗಲು ಈ ಚೆಕಿಂಗ್ನ್ನು ತಪ್ಪಿಸಿಕೊಳ್ಳುತ್ತಾಳೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ನಮ್ಮ ದೇಶದಲ್ಲಿ ಈ ಸಿನಿಮಾ ತಾರೆಗಳನ್ನು ಎಲ್ಲಿವರೆಗೆ ಪೂಜಿಸುವುದನ್ನು ಬಿಡುವುದಿಲ್ಲವೋ ಅಲ್ಲಿವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇದೇ ಕೆಲಸವನ್ನು ಸಾಮಾನ್ಯ ಜನ ಮಾಡಿದ್ದರೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಸುಮ್ಮನಿರುತ್ತಿದ್ದರೆ ಎಂದು ಮತ್ತೊಬ್ಬರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ, (ಏಜನ್ಸೀಸ್).