ನಟಿ ಕಂಗನಾಗೆ ನಟ ಸೋನು ಸೂದ್ ಖಡಕ್ ಕೌಂಟರ್
- ಕಂಗನಾ ರಣಾವತ್ 'ಗಟಾರ್ ಪೀಳಿಗೆ' ವಿವಾದಾತ್ಮಕ ಹೇಳಿಕೆ
- ಮಾತನಾಡುವ ಮೊದಲು ಯೋಚಿಸಿ ಆಮೇಲೆ ಮಾತನಾಡಿ
- ನಟಿ ಕಂಗನಾಗೆ ನಟ ಸೋನು ಸೂದ್ ಖಡಕ್ ಕೌಂಟರ್
ಮುಂಬೈ: ಇತ್ತೀಚೆಗೆ ದೆಹಲಿಯಲ್ಲಿ ನೀಟ್ ಪರೀಕ್ಷಾ ಅಕ್ರಮವನ್ನು ವಿರೋಧಿಸಿ, ಯುವಪಡೆ ಬೃಹತ್ ಪ್ರತಿಭಟನೆಯನ್ನು ನಡೆಸಿ ದೇಶದ ತುಂಬೆಲ್ಲಾ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಈ ಹೋರಾಟಗಾರರ ಹಾಗೂ ಝೆನ್-ಜಿಗಳ ಬಗ್ಗೆ ಮಾತನಾಡಿದ್ದ ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ನೀಡಿದ್ದ ಹೇಳಿಕೆಯೊಂದು ಸೋಷಿಯಲ್ ಮೀಡಿಯಾನಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
ಈಗ ಕಂಗನಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಇನ್ನೋರ್ವ ನಟ, ಸೋನು ಸೂದ್ (Sonu Sood on Kangana Ranaut) ನಟಿ, ಸಂಸದೆ ಹೇಳಿಗೆ ತೀರುಗೇಟನ್ನು ನೀಡಿದ್ದು, ಈಗ ಇದು ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ಮಾತನಾಡುವ ಮೊದಲು ಯೋಚಿಸಿ!
ಕೆಲ ದಿನಗಳ ಹಿಂದೆ ನಟಿ, ಸಂಸದೆ ಕಂಗನಾ ರಣಾವತ್, ದೇಶದಲ್ಲಿರುವ ಝೆನ್-ಜಿಗಳ ಪೀಳಿಗೆ ಇದೊಂದು ಗಟರ್ ಪೀಳಿಗೆ ಎಂದು ನೀಡದ್ದ ಹೇಳಿದೆ ಎಲ್ಲಡೆ ಹರಿದಾಡಿ ಸಾಕಷ್ಟು ವಿವಾದ ಹಾಗೂ ಟ್ರೋಲ್ಗೆ ಗುರಿಯಾಗಿತ್ತು.
ಈಗ ಈ ಹೇಳಿಕೆ ಬಗ್ಗೆ ಮಾತನಾಡಿರುವ ಸೋನು ಸೂದ್, ನನಗೆ ಈ ಮಾತನ್ನು ಕಂಗನಾ ಹೇಳಿದ್ದಾರೆಂದು ತಿಳಿದಿಲ್ಲ, ನಾನು ಅವಳು ಹೇಳಿದನ್ನು ನೋಡಿಲ್ಲ. ಆದರೆ ಹೀಗೆ ಈಡೀ ಪೀಳಿಗೆಯನ್ನೇ ಗಟರ್ಗೆ ಹೋಲಿಸುವುದು ಸರಿಯಲ್ಲ. ಅಧಿಕಾರದಲ್ಲಿ ನಾವು ಮುಂದುವರಿಯಬೇಕೆಂದರೆ, ಎಲ್ಲರನ್ನೂ ನಮ್ಮ ಜೊತೆ ಕರೆದುಕೊಂಡು ಹೋಗಬೇಕು, ಇಲ್ಲದಿದ್ದರೆ ಆಡಳಿತ ನಡೆಸುವುದು ಕಷ್ಟವಾಗುತ್ತದೆ ಎಂದಿದ್ದಾರೆ.
ಹಾಗೆಯೇ ಇಂದಿನ ಮಕ್ಕಳೇ ನಾಳಿನ ಯುವಕರಾಗುತ್ತಾರೆ, ಆ ಯುವಪಡೆಯೇ ಮುಂದೆ ದೇಶವನ್ನು ನಡೆಸುವವರು, ಹೀಗಾಗಿ ಅವರ ಬಗ್ಗೆ ನಾಲಿಗೆ ಹರಿಬಿಡುವ ಮುನ್ನ ಸ್ವಲ್ಪ ಯೋಚಿಸುವುದು ಸೂಕ್ತ ಎಂದು ಸೋನು ಹೇಳಿದ್ದಾರೆ.
ಜನಬೆಂಬಲ ಅತ್ಯವಶ್ಯ!
ಇನ್ನು ಮಾತನ್ನು ಮುಂದುವರಿಸಿದ ನಟ, ನಾವು ರಾಜಕೀಯದಲ್ಲಿರಲೀ, ಸಿನಿಮಾ ಕ್ಷೇತ್ರದಲ್ಲಿರಲೀ, ನಮಗೆ ಜನರ ಬೆಂಬಲ ಬೇಕೇಬೇಕು. ನಾವು ಮಾಡುವ ಕೆಲಸಕ್ಕೆ ಜನರ ಬೆಂಬಲ ಸಿಗದೆಹೋದರೆ ಅದಕ್ಕೆ ಯಾವುದೇ ಅರ್ಥವಿರುವುದಿಲ್ಲ. ಹೀಗಾಗಿ ಜನರ ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಬೇಕು.
ನೀವು ಹೇಳುವಂತೆ ಕಂಗನಾ ಏನಾದರೂ 'ಗಟಾರ್ ಪೀಳಿಗೆ' ಪದವನ್ನು ಬಳಕೆ ಮಾಡಿದ್ದರೆ, ಈ ಹೇಳಿಕೆ ಖಂಡಿತವಾಗಿ ನಾಚಿಕೆ ಪಡಬೇಕಾದ ಹೇಳಿಕೆ ಆಗಿರುತ್ತದೆ. ಸಮಾಜದಲ್ಲಿ ಎಲ್ಲವೂ ಸರಿಯಿರುವುದಿಲ್ಲ, ಹಾಗೆಂದೂ ಎಲ್ಲವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಮೂರ್ಖತನ ಎಂದಿದ್ದಾರೆ, (ಏಜನ್ಸೀಸ್).