Kangana Ranaut Aishwarya Rai Cannes
- ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರ ರೆಡ್ ಕಾರ್ಪೆಟ್ ಲುಕ್ ಟ್ರೋಲ್
- ಟ್ರೋಲರ್ಸ್ ವಿರುದ್ಧ ಕಿಡಿಕಾರಿ ಪೋಸ್ಟ್ ಹಂಚಿಕೊಂಡ ನಟಿ ಕಂಗನಾ ರಣಾವತ್
- ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಐಶ್ವರ್ಯಾ ಅವರ ಹಳೆಯ ಕೇನ್ಸ್ ಚಿತ್ರವನ್ನು ಹಂಚಿಕೊಂಡ ಕಂಗನಾ
- ಹಾಲಿವುಡ್ ಅಥವಾ ಪಾಶ್ಚಾತ್ಯ ಶೈಲಿಯ ರೆಡ್ ಕಾರ್ಪೆಟ್ ಕುರುಡಾಗಿ ಅನುಕರಿಸಬೇಡಿ ಎಂದು ಕಂಗನಾ ಸಲಹೆ
Kangana Ranaut Aishwarya Rai Cannes : 79ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಭಾಗಿಯಾಗಿದ್ದರು. ಒಂದೆಡೆ ಅವರ ವಿಶೇಷ ವಸ್ತ್ರ ವಿನ್ಯಾಸ, ಕೇಶಲಂಕಾರ, ಮೇಕಪ್ ಬಗ್ಗೆ ಹಾಡಿ ಹೊಗಳುತ್ತಿದ್ದರೆ, ಮತ್ತೊಂದು ಕಡೆ ಅವರನ್ನು ಫ್ಯಾಟ್ ಆಂಟಿ ಎಂದು ಟ್ರೋಲರ್ಸ್ಗಳು ಟೀಕೆ ಮಾಡುತ್ತಿದ್ದಾರೆ. ಇದರ ವಿರುದ್ಧ ಸಂಸದೆ ಕಂಗನಾ ರಣಾವತ್ ಕಿಡಿಕಾರಿದ್ದು, ನಿಮ್ಮನ್ನು ಮೆಚ್ಚಿಸೋಕೆ ಕೇನ್ಸ್ಗೆ ತೆರಳಿಲ್ಲ. ಅವರು ಯಾವಾಗಲು ಅದ್ಭುತ ಎಂದು ಕಿಡಿಕಾರಿದ್ದಾರೆ.
ಕಂಗನಾ ರಣಾವತ್ ಅವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡು, ಮಾಜಿ ವಿಶ್ವ ಸುಂದರಿಯ ಸೌಂದರ್ಯ ಮತ್ತು ಜಾಗತಿಕ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಐಶ್ವರ್ಯಾ ರೈ ಅವರು ಸದಾ ಅದ್ಭುತವಾಗಿ ಕಾಣುತ್ತಾರೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಕಂಗನಾ ಹೇಳಿದ್ದೇನು?
ಐಶ್ವರ್ಯಾ ಅವರ ಕೇನ್ಸ್ ಲುಕ್‌ನ ಫೋಟೋ ಒಂದನ್ನು ಕಂಗನಾ ರಣಾವತ್ ಹಂಚಿಕೊಂಡು ಬರೆದುಕೊಂಡಿರುವುದು ಹೀಗೆ.. 'ಐಶ್ವರ್ಯಾ ರೈ ಅವರು ನಿಮ್ಮನ್ನು ಮೆಚ್ಚಿಸಲು ಅಲ್ಲಿಗೆ ಹೋಗಿಲ್ಲ. ಅವರು ವಿಶ್ವದ ಅತ್ಯಂತ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಶಿಷ್ಟ ಶೈಲಿ ಇರುತ್ತದೆ ಮತ್ತು ಅದನ್ನು ಗೌರವಿಸಬೇಕು'.
'ಫ್ಯಾಷನ್ ಮತ್ತು ಸ್ಟೈಲ್ ಎಂಬುದು ಸ್ವಯಂ ಅಭಿವ್ಯಕ್ತಿ. ಅದು ಜೀವನದ ಮೇಲಿನ ಒಬ್ಬರ ಸ್ವಂತ ವ್ಯಾಖ್ಯಾನ ಮತ್ತು ಅವರ ಮನೋಭಾವ ಆಗಿರುತ್ತದೆ. ಐಶ್ವರ್ಯಾ ಅದ್ಭುತವಾಗಿ ಕಾಣಿಸುತ್ತಿದ್ದಾರೆ ಅವರನ್ನು ಬೇರೆ ರೀತಿಯಲ್ಲಿ ನೋಡಲು ಬಯಸುವವರು, ಮೊದಲು ನಿಮ್ಮಲ್ಲಿ ಏನಿದೆ ಎಂದು ನೀವೇಕೆ ತೋರಿಸಬಾರದು?? ಅವರು ನಿಮ್ಮನ್ನು ಮೆಚ್ಚಿಸಲು ಇಲ್ಲಿಗೆ ಬಂದಿಲ್ಲ, ಅವರು ಸದಾ ವೈಭವೋಪೇತ. ರೆಡ್ ಕಾರ್ಪೆಟ್‌ಗಳ ಮೇಲೆ ವಯಸ್ಸಾದ ಮಹಿಳೆಯರನ್ನು ನೋಡಿ ನಿಮಗೆ ಅಭ್ಯಾಸವಿಲ್ಲದಿದ್ದರೆ, ಇನ್ಮುಂದೆ ಅದನ್ನು ನೋಡಿ ಅಭ್ಯಾಸ ಮಾಡಿಕೊಳ್ಳಿ.'
ಮುಂದುವರೆದು, 'ಇಂಟರ್ನೆಟ್‌ನಲ್ಲಿ ಕುಳಿತು ಬೇರೆಯವರನ್ನು ಟ್ರೋಲ್ ಮಾಡುವವರು ಮೊದಲು ಜಾಗತಿಕ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವುದು ಎಂದರೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಐಶ್ವರ್ಯಾ ಅವರು ದಶಕಗಳಿಂದ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಹೆಸರನ್ನು ಹೆಮ್ಮೆಯಿಂದ ಬೆಳಗಿಸುತ್ತಿದ್ದಾರೆ. ಇಂತಹ ನಟಿಯ ಉಡುಪಿನ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದು ಸರಿಯಲ್ಲ'.
ದೀಪಿಕಾಗೂ ಬೆಂಬಲಿಸಿದ್ದರು
ಈ ಹಿಂದೆ ಕಂಗನಾ ಅವರು ದೀಪಿಕಾ ಪಡುಕೋಣೆಯವರ ಪರವು ನಿಂತು ಮಾತನಾಡಿದ್ದರು.ಸಿನಿಮಾ ಚಿತ್ರೀಕರಣದ ವೇಳೆ 8 ಗಂಟೆ ಮಾತ್ರ ಕೆಲಸಕ್ಕೆ ಬೇಡಿಕೆಯಿಟ್ಟಿದ್ದ ದೀಪಿಕಾ ಪಡುಕೋಣೆಯವರ ಬೇಡಿಕೆಯನ್ನು ಕಂಗನಾ ಗೌರವಿಸಿದ್ದರು. ನಾನು ದೀಪಿಕಾ ಸಿನಿಮಾಗಾಗಿ ಆರಂಭದಲ್ಲಿ ಹಗಲಿರುಳು ಕೆಲಸ ಮಾಡಿದ್ದೇವೆ. ಒಂದು ಮಗುವಿನ ತಾಯಿಯಾದ ಅವರು ಸರಿಯಾಗಿಯೇ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಅದನ್ನು ಗೌರವಿಸಬೇಕು. ದೀಪಿಕಾ ಅವರಿಗೆ ಕುಟುಂಬ ಮತ್ತು ಮಗುವಿನ ಜವಾಬ್ದಾರಿ ಇರುವುದರಿಂದ, ಅವರು ತಮ್ಮ ವೃತ್ತಿಜೀವನದಲ್ಲಿ ಆ ಸ್ಥಾನವನ್ನು ಗಳಿಸಿದ್ದಾರೆ ಮತ್ತು ಅದಕ್ಕೆ ತಕ್ಕಂತೆ ಜನರು ಅವರ ವೇಳಾಪಟ್ಟಿಗೆ ಹೊಂದಿಕೊಳ್ಳಬೇಕು ಎಂದು ಬೆಂಬಲಿಸಿದ್ದರು, (ಏಜೆನ್ಸೀಸ್).