Kangana Ranaut, Deepika Padukone 
ಬಾಲಿವುಡ್

'ದಿನಕ್ಕೆ 8 ಗಂಟೆ ಕೆಲಸದ ಬೇಡಿಕೆ ನ್ಯಾಯಯುತ, ಮಹಿಳೆಯರ ಮೇಲೆ ಒತ್ತಡ ಹಾಕ್ಬೇಡಿ'; ದೀಪಿಕಾ ಪರ ಕಂಗನಾ ಬ್ಯಾಟಿಂಗ್..Kangana Ranaut

Kangana Ranaut on Deepika Padukone: 'ದೀಪಿಕಾ ಪಡುಕೋಣೆ ಸಿನಿಮಾ ರಂಗಕ್ಕೆ ಕಾಲಿಟ್ಟ ಕಾಲದಲ್ಲಿ 12ರಿಂದ14 ಗಂಟೆ ಕೆಲಸ ಮಾಡಿದ್ದಾರೆ. ನಾನು ಸಹ. ಈಗ ಅವರ ಪರಿಸ್ಥಿತಿ ಹಾಗಿಲ್ಲ. ಅವರೀಗ ತಾಯಿ, ಮನೆ, ಮಗುವಿನ ಜವಾಬ್ದಾರಿ ಇದೆ. ಹೀಗಾಗಿ ಅವರ ಬೇಡಿಕೆ ನ್ಯಾಯಯುತವಾಗಿದೆ. ಮಹಿಳೆಯರ ಮೇಲೆ ಒತ್ತಡ ಹೇರಬೇಡಿ' ಕನ್ನಡತಿ, ಬಾಲಿವುಡ್​ ತಾರೆ ದೀಪಿಕಾ ಪರ ನಿಂತಿದ್ದು ಕಂಗನಾ ರಣಾವತ್.

ಕಲ್ಕಿ ಸಿನಿಮಾ ರಿಜೆಕ್ಟ್ ಮಾಡಿದ್ಯಾಕೆ?

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಗೆ ಈಗ ದುವಾ ಪಡುಕೋಣೆ ಸಿಂಗ್ ಜನಿಸಿದ್ದಾಳೆ. 2024 ಸೆಪ್ಟೆಂಬರ್​ 8ರಿಂದ ದೀಪಿಕಾ ಪಡುಕೋಣೆ ಆಕೆಯ ಆರೈಕೆ ಮಾಡುತ್ತಿದ್ದಾರೆ. ಇನ್ನು ತೊದಲು ನುಡಿಯೂ ಬಾರದ ಮಗುವಿನ ಆರೈಕೆ ಮಾಡೋದು ಮುಖ್ಯ ಎನ್ನುವ ಕಾರಣದಿಂದ 'ಸ್ಪಿರಿಟ್' ಮತ್ತು 'ಕಲ್ಕಿ 2' ರಂತಹ ದೊಡ್ಡ ಪ್ರಾಜೆಕ್ಟ್‌ಗಳಿಂದ ಹೊರಬಂದಿದ್ದರು. ಈ ಸಿನಿಮಾದಲ್ಲಿ ನಟಿಸುವ ಮುನ್ನ ಎಂಟು ಗಂಟೆ ಮಾತ್ರ ಕೆಲಸ ಮಾಡುವುದಾಗಿ ಷರತ್ತು ವಿಧಿಸಿದ್ದರಂತೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಸುದ್ದಿಯಾಗಿತ್ತು. ಜೊತೆಗೆ ಈ ಬಗ್ಗೆ ಪರ ವಿರೋಧ ಚರ್ಚೆಯು ಉಂಟಾಗಿತ್ತು.
'ದೀಪಿಕಾ ಪಡುಕೋಣೆ ಸದ್ಯ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರೀಗ ಒಂದು ಮಗುವಿನ ತಾಯಿ. ಅವರು ಎಂಟು ಗಂಟೆ ಕೆಲಸ ಮಾಡುತ್ತೇನೆ ಎಂದು ಕೇಳಿಕೊಂಡ ವಿಚಾರದಲ್ಲಿ ತಪ್ಪೇ ಇಲ್ಲ. ಆ ಸ್ಥಾನವನ್ನು ಕಷ್ಟಪಟ್ಟು ಸಂಪಾದಿಸಿದ್ದಾರೆ 'ಎಂದು ದೀಪಿಕಾ ಪರ ಸಂಸದೆ, ನಟಿ ಕಂಗನಾ ರಣಾವತ್ ಮಾತನಾಡಿದ್ದಾರೆ.
'ನಾವು ಚಿತ್ರರಂಗಕ್ಕೆ ಕಾಲಿಟ್ಟ ಆರಂಭಿಕ ದಿನದಲ್ಲಿ 12 ರಿಂದ 14 ಗಂಟೆ ಕೆಲಸ ಮಾಡುತ್ತಿದ್ದೆವು. ಆಗ ನಮಗೆ ಯಶಸ್ಸು ಕಂಡುಕೊಳ್ಳುವ ನಾವು ಯಾರಿಗೂ ಅನಿವಾರ್ಯವಾಗಿರಲಿಲ್ಲ. ಆದರೆ ದೀಪಿಕಾ ವಿಷಯ ಹಾಗಿಲ್ಲ. ಅವರು ಅನಿವಾರ್ಯ ನಟಿ. ಚಿತ್ರತಂಡ ಅವರ ಸಮಯಕ್ಕೆ ತಕ್ಕಂತೆ ಕೆಲಸ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು' ಎಂದರು.

ಹೆಣ್ಮಕ್ಕಳ ಮೇಲೆ ಕೆಲಸದೊತ್ತಡ ಬೇಡ

'ಇಂದಿನ ಕಾಲದಲ್ಲಿ ವಿವಾಹಗಳು ಮುರಿದುಬೀಳುತ್ತಿವೆ, ಜನನ ಪ್ರಮಾಣ ಕಡಿಮೆಯಾಗುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಮುಖ್ಯ ಕಾರಣ ಮಹಿಳೆಯರ ಮೇಲೆ ನಾವು ಹೇರುತ್ತಿರುವ ಅತಿಯಾದ ಕೆಲಸದ ಒತ್ತಡ. ಮಹಿಳೆಯರು ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಾ ಹೊರಗೆ ದುಡಿಯುವುದು ಸುಲಭವಲ್ಲ. ನಾವು ಅವರನ್ನು ಯಂತ್ರಗಳಂತೆ ನಡೆಸಿಕೊಳ್ಳಬಾರದು' ಎಂದು ಕಂಗನಾ ಬೇಸರ ವ್ಯಕ್ತಪಡಿಸಿದರು, (ಏಜೆನ್ಸೀಸ್​).