Kangana Ranaut (ಚಿತ್ರ Instagram) 
ಬಾಲಿವುಡ್

ಮನೆ ಬಿಟ್ಟು ಬಂದಾಗ ಕೈಲಿದಿದ್ದು ಕೇವಲ 500 ರೂ; ಇಂದು ಭಾರತದ ಅತಿ ಪ್ರಭಾವಶಾಲಿ ನಟಿಯಾದ ಕಂಗನಾ ಸ್ಫೂರ್ತಿದಾಯಕ ಜರ್ನಿ...Kangana Ranaut

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್‌ನ ಫೈರ್ ಬ್ರ್ಯಾಂಡ್ ನಟಿ ಕಂಗನಾ ರನೌತ್ ಅವರ ಸಿನಿ ಪಯಣವು ಯಾರಿಗಾದರೂ ಸ್ಪೂರ್ತಿ ನೀಡುವಂತಿದೆ
  • ಕೇವಲ 500 ರೂ ಹಿಡಿದು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಇಂದು ಕೋಟ್ಯಾಂತರ ರೂಗಳ ಒಡತಿ
  • 2025 ರಲ್ಲಿ, ಕಂಗನಾ ಎಮರ್ಜೆನ್ಸಿ ಮೂಲಕ ನಿರ್ದೇಶಕರಾಗಿ ವೃತ್ತಿ ಜೀವನವನ್ನು ಆರಂಭಿಸಿದರು
Kangana Ranaut: ಬಾಲಿವುಡ್‌ನ ‘ಫೈರ್ ಬ್ರ್ಯಾಂಡ್’ ಎಂದೇ ಖ್ಯಾತಿ ಪಡೆದಿರುವ ನಟಿ ಕಂಗನಾ ರನೌತ್ ಅವರ ಸಿನಿ ಪಯಣವು ಯಾರಿಗಾದರೂ ಸ್ಪೂರ್ತಿ ನೀಡುವಂತಿದೆ.  ಕೇವಲ 500 ರೂ ಹಿಡಿದು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು ಕೊಟ್ಯಾಂತರ ರೂಪಾಯಿಗಳ ಸಾಮ್ರಾಜ್ಯಕ್ಕೆ ಒಡತಿಯಾಗಿದ್ದಾರೆ. ಆದಾಗ್ಯೂ,ಕೇವಲ ತಮ್ಮ ಪ್ರತಿಭೆ ಮತ್ತು ಛಲದಿಂದ ಇಂದು ಭಾರತದ ಅತ್ಯಂತ ಪ್ರಭಾವಶಾಲಿ ನಟಿಯರಲ್ಲಿ ಒಬ್ಬರಾಗಿದ್ದಾರೆ.

ಲೈಫ್​ ಬದಲಾಗಿದ್ದೇಗೆ?

2006 ರಲ್ಲಿ ಗ್ಯಾಂಗ್‌ಸ್ಟರ್ ಚಿತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದ ನಟಿ ವಿಮರ್ಶಕರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿದರು. ನಂತರ 'ವೋ ಲಮ್ಹೆ' ಮತ್ತು 'ಲೈಫ್ ಇನ್ ಎ ಮೆಟ್ರೋ' ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ಬಾಲಿವುಡ್‌ನಲ್ಲಿ ತಮ್ಮದೇ ಛಾಪನ್ನು ಮೂಡಿಸಲು ಪ್ರಾರಂಭಿಸಿದರು. ಕಂಗನಾ ಅವರ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿದ್ದು, ಮಧುರ್ ಭಂಡಾರ್ಕರ್ ಅವರ ಫ್ಯಾಷನ್ ಮತ್ತು ಕ್ವೀನ್‌ನಂತಹ ಚಿತ್ರ. 
ಮಾರ್ಚ್ 23 ರಂದು ತಮ್ಮ 39 ನೇ ಹುಟ್ಟುಹಬ್ಬದಂದು ಕಂಗನಾ ತನ್ನ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದು, ಅಂದು ನಾನು ಮುಂಬೈಗೆ ಕಾಲಿಟ್ಟಾಗ ಕೇವಲ 500 ರೂಪಾಯಿ ಇತ್ತು. ನನಗೆ ಭೌತಿಕ ವಸ್ತುಗಳು ಅಥವಾ ಆಸ್ತಿ-ಪಾಸ್ತಿ ಎಂದಿಗೂ ಮುಖ್ಯವಾಗಿರಲಿಲ್ಲ. ನನ್ನ ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಮೇಲೆ ನನಗೆ ಅಚಲ ನಂಬಿಕೆಯಿದೆ ಎಂದರು.
ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜೀವನ ಹಾಗೂ ತುರ್ತು ಪರಿಸ್ಥಿತಿಯ ಕಾಲಘಟ್ಟವನ್ನು ಆಧರಿಸಿದ ಚಿತ್ರಕ್ಕಾಗಿ ಕಂಗನಾ ತಮ್ಮ ಆಸ್ತಿಯನ್ನು ಅಡವಿಟ್ಟಿರುವ ಸುದ್ದಿ ಹರಿದಾಡಿತ್ತು. ಇದರ ಬಗ್ಗೆ ಮಾತನಾಡಿದ ಅವರು, ಚಿತ್ರ ಬಿಡುಗಡೆಯಾದ ನಂತರ ಏನಾದರೂ ಆಗಲಿ ನಾನು ಮೊದಲಿನಿಂದ ಜೀವನವನ್ನು ಆರಂಭಿಸಲು ಸಿದ್ಧಳಿದ್ದೇನೆ ಎಂದು ಹೇಳಿದರು.
2025 ರಲ್ಲಿ, ಕಂಗನಾ ಎಮರ್ಜೆನ್ಸಿ ಮೂಲಕ ನಿರ್ದೇಶಕರಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ಆದಾಗ್ಯೂ, ಚಲನಚಿತ್ರವನ್ನು ನಿರ್ಮಿಸುವ ಅವರ ಪ್ರಯಾಣ ಸುಲಭವಾಗಿರಲಿಲ್ಲ. ಎಲ್ಲಾ ಅಡೆ-ತಡೆಗಳನ್ನು ಮೀರಿ ಅದನ್ನು ಪೂರ್ಣಗೊಳಿಸಲು ಅವರ ಎಲ್ಲಾ ಆಸ್ತಿಗಳನ್ನು ಅಡ ಇಡಬೇಕಾಯಿತು ಎಂದು ಬಹಿರಂಗಪಡಿಸಿದರು. 

ಕಂಗನಾ ರನೌತ್ ಅವರ ರಾಜಕೀಯ ಪ್ರಯಾಣ ಮತ್ತು ಪುರಸ್ಕಾರಗಳು

ಕಂಗನಾ ರನೌತ್ ಜೂನ್ 2024 ರಿಂದ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ (MP) ಆಯ್ಕೆಯಾಗಿದ್ದಾರೆ. ತಮ್ಮ ಹುಟ್ಟೂರಿನಿಂದಲೇ ರಾಜಕೀಯ ಪ್ರವೇಶಿಸಿದ ಅವರು, ಭಾರಿ ಬಹುಮತದೊಂದಿಗೆ ಜಯಗಳಿಸಿ ಈಗ ಸಂಸತ್ತಿನಲ್ಲಿ ಜನರ ಧ್ವನಿಯಾಗಿದ್ದಾರೆ.
ಫ್ಯಾಷನ್, ಕ್ವೀನ್, ತನು ವೆಡ್ಸ್ ಮನು ರಿಟರ್ನ್ಸ್ ,ಮತ್ತು ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ನಾಲ್ಕು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ (ಏಜೆನ್ಸೀಸ್​).