Kalki Koechlin 
ಬಾಲಿವುಡ್

ಡಿವೋರ್ಸ್​ ನಂತ್ರ 'ಇನ್ಸೋಮ್ನಿಯಾ'ದಿಂದ ಚೇತರಿಸಿಕೊಳ್ಳೋಕೆ ವರ್ಷಾನೆ ಬೇಕಾಯ್ತು'; ನಿರ್ದೇಶಕ​ Anurag Kashyap ಮಾಜಿ ಪತ್ನಿ ಹೇಳಿದ್ದಿಷ್ಟು!

ಪ್ರಮುಖ ಮುಖ್ಯಾಂಶಗಳು

  • ದೇವ್​ ಡಿ ಸಿನಿಮಾದ ಮೂಲಕ ಒಟ್ಟಾಗಿದ್ದ ಅನುರಾಗ್​ ಕಶ್ಯಪ್​ ಮತ್ತು ಕಲ್ಕಿ
  • ಡಿವೋರ್ಸ್​ ನಂತರ ತೀವ್ರವಾಗಿ ನಿದ್ರಾಹೀನತೆ ಕಾಡಿತ್ತು ಕಲ್ಕಿ ಕೋಚ್ಲಿನ್ ಮುಕ್ತ ಮಾತು
  • ​ಸುಮಾರು 4 ತಿಂಗಳ ಕಾಲ ನಿದ್ರೆಯಿಲ್ಲದೆ ಪರದಾಡುತ್ತಿದ್ದೆ, ಅಳು ಸಿಟ್ಟು ಎಲ್ಲ ಕಾಡುತ್ತಿತ್ತು
Kalki Koechlin: 'ತುಂಬಾ ಪ್ರೀತಿ ಕೊಟ್ಟವರು ನಮ್ಮಿಂದ ದೂರವಾಗುವ ಸಂದರ್ಭ ಸಾಕಷ್ಟು ಕಷ್ಟ ಅನುಭವಿಸಬೇಕಾಗುತ್ತದೆ. ಸಿಟ್ಟು, ಕೋಪ, ಅಳು ಒತ್ತರಿಸಿ ಬರುತ್ತದೆ. ನನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಿಳಿದಿದ್ದು 2015ರಲ್ಲಿ ನನಗೆ ಡಿವೋರ್ಸ್​ ಆದಾಗ. ಹೀಗೆ ಪಾಡ್​ಕಾಸ್ಟ್​ವೊಂದರಲ್ಲಿ ಮಾತನಾಡಿದ್ದು ದೇವ್.ಡಿ(Dev.D), ಜಿಂದಗಿ ನಾ ದಿಲ್​ರೊಬಾ ಸಿನಿಮಾ ಮೂಲಕ ಫೇಮಸ್​​ ಆದ ನಟಿ ಕಲ್ಕಿ ಕೊಚ್ಲಿನ್.
ಅವರ ಮಾಜಿ ಪತಿ ಅನುರಾಗ್​​ ಕಶ್ಯಪ್​​​ ಅವರೊಂದಿಗೆ ಡಿವೋರ್ಸ್​ ಆದ ನಂತ ಕಲ್ಕಿ ಕೊಚ್ಲಿನ್ ಅನುಭವಿಸಿದ 'ಇನ್ಸೋಮ್ನಿಯಾ'ಯದ ಕರಾಳ ದಿನಗಳನ್ನು ಅವರು ಸೋಹಾ ಅಲಿ ಖಾನ್ ಅವರೊಂದಿಗಿನ ಪಾಡ್‌ಕಾಸ್ಟ್‌ನಲ್ಲಿ ನೆನಪಿಸಿಕೊಂಡಿದ್ದಾರೆ.

ದೇವ್​ ಡಿ ಮೂಲಕ ಪ್ರೀತಿ

ದೇವ್​ ಡಿ ಸಿನಿಮಾದ ಮೂಲಕ ಅನುರಾಗ್​ ಕಶ್ಯಪ್​ ಜೊತೆ ಪರಿಚಯದ ನಂಟು ಬೆಳೆಸಿಕೊಂಡ ಕಲ್ಕಿ 2011ರಲ್ಲಿ ಇಬ್ಬರು ಒಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2013ರಲ್ಲಿ ಬೇರ್ಪಟ್ಟರು. 2015ರಲ್ಲಿ ಅಧಿಕೃತವಾಗಿ ಇಬ್ಬರು ಡಿವೋರ್ಸ್​ ಪಡೆದುಕೊಂಡರು. ಕಲ್ಕಿ ದೇವ್​ ಡಿ ಸಿನಿಮಾ ಮೂಲಕ ಬಾಲಿವುಡ್​ಗೆ ಕಾಲಿಟ್ಟರು. ದಟ್​ ಗರ್ಲ್​ ಇನ್​ ರಲ್ಲೋ ಬೂಟ್ಸ್ ಸಿನಿಮಾಗೆ ಇಬ್ಬರು ಒಟ್ಟಾಗಿ ಕೆಲಸ ಮಾಡಿದ್ದರು. ಇಂದು(ಏಪ್ರಿಲ್​24ರಂದು) ಸಿನಿಮಾ ಮರು ಬಿಡುಗಡೆಯಾಗಿರುವ ಕಾರಣ ಹಳೆಯ ನೆನಪುಗಳನ್ನು ಮೆಲುಕುಹಾಕಿದ್ದಾರೆ.

ಕಶ್ಯಪ್ ಜೊತೆಗೆ ಡಿವೋರ್ಸ್​​

ದೇವ್​ ಡಿ ಸಿನಿಮಾ ಮನಾಡುವಾಗ ನನಗೆ 17 ವರ್ಷ. ನನ್ನ ಮೊದಲನೆಯ ಚಿತ್ರ ಇದು. ಮತ್ತೆ ಥಿಯೇಟರ್​​ನಲ್ಲಿ ಸಿನಿಮಾ ನೋಡಲು ಸಾಧ್ಯವಾಗುತ್ತಿದೆಯೇ ಅನ್ನೋದು ನಿಜಕ್ಕೂ ಆಶ್ಚರ್ಯ. ಜೊತೆಗೆ ಆ ಸಿನಿಮಾ ಮೂಲಕ ಅನುರಾಗ್​ ಜೊತೆಗೆ ಪ್ರೀತಿಯಾಗಿದ್ದು ಬ್ರೇಕಪ್​ ಆಗಿದ್ದ ಬಗ್ಗೆಯೂ ಮಾತನಾಡಿ, ಮಾಜಿ ಪ್ರೇಮಿಗಳ ಜೊತೆ ಸ್ನೇಹದಿಂದ ಇರೋದು ತುಂಬಾನೆ ಕಷ್ಟವಾಗುತ್ತದೆ. ನಾನು ವಾಸ್ತವಕ್ಕೆ ಬರಲು ವರ್ಷಗಳೇ ಹಿಡಿಯಿತು ಎಂದು ಹೇಳಿಕೊಂಡಿದ್ದಾರೆ.

ನಿದ್ರಾಹೀನತೆ ಅನುಭವಿಸಿದ್ದೆ

ಬ್ರೇಕಪ್​​ಗೆ ಚಿಕಿತ್ಸೆ ತಕ್ಷಣ ಪರಿಣಾಮ ಬೀರೋದಿಲ್ಲ. ಬ್ರೇಕಪ್​ ಆದ ಸಮಯದಲ್ಲಿ ಸಾಕಷ್ಟು ನೋವು ಅನುಭವಿಸಬೇಕಾಗುತ್ತದೆ. ಅಳು, ಕೋಪ ಎಲ್ಲವೂ ಬರುತ್ತದೆ. ಕೆಲವೊಮ್ಮೆ ವೈದ್ಯರಿಗೂ ನಮಗೆ ಚಿಕಿತ್ಸೆ ನೀಡೋದು ಕಷ್ಟವಾಗಿ ಬಿಡುತ್ತದೆ. ಚಿಕಿತ್ಸೆ ದೀರ್ಘಾವಧಿಗೆ ನಿಧಾನವಾಗಿ ಕೆಲಸ ಮಾಡುತ್ತದೆ. ಪ್ರೀತಿಯಲ್ಲಿ ನೊಂದವರಿಗೆ ನಾನು ಇದನ್ನೆ ಶಿಫಾರಸು ಮಾಡುತ್ತೇನೆ ಎಂದು ಹೇಳಿದರು. ​​
ನನಗೆ ಅನುರಾಗ್​ ಮಧ್ಯೆ ಬಿರುಕು ಕಂಡಾಗ ಸತತ ನಾಲ್ಕು ತಿಂಗಳು ನಿದ್ರೆಯೇ ಬಂದಿಲ್ಲ. ಮಾನಸಿಕ ಸ್ಥಿತಿ ದೈಹಿಕ ಆರೋಗ್ಯದ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದು ಆಗ ನನಗೆ ಅರಿವಾಯಿತು, ರಾತ್ರಿ 2 ಮತ್ತು 3ರ ತನಕ ನಿದ್ರೆಯಿಲ್ಲದೆ ಎದ್ದಿರುತ್ತಿದ್ದೆ. ಆ ಸಮಯದಲ್ಲಿ ಗಿಟಾರ್​ ಬಾರಿಸುವುದು ಮತ್ತಿನ್ಯಾವುದೋ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಸಮಯದಲ್ಲಿ ತಾವು ಎಚ್ಚರವಾಗಿದ್ದೇವೋ ಅಥವಾ ಕನಸಿನ ಲೋಕದಲ್ಲಿದ್ದೇವೋ ಎಂಬ ಗೊಂದಲ ಕಾಡುತ್ತಿತ್ತು ಎಂದು ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).