- ದಕ್ಷಿಣ ಭಾರತದ ಚಿತ್ರರಂಗದ ಧ್ರುವತಾರೆ, ಅಭಿಮಾನಿಗಳ ಪಾಲಿನ 'ಯಂಗ್ ಟೈಗರ್' ಜೂನಿಯರ್ ಎನ್‌ಟಿಆರ್
- ಎನ್‌ಟಿಆರ್ ಅವರ ಜನಪ್ರಿಯತೆ ಇಂದು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ
- ನಟ ಆಂಧ್ರಪ್ರದೇಶದ ಫೇಮಸ್ ಆಹಾರ ಪುನುಗುಲು ಹೆಚ್ಚಾಗಿ ಸೇವಿಸುವುದಾಗಿ ತಿಳಿಸಿದ್ದಾರೆ
- ಪುನುಗುಲು ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನಪ್ರಿಯ ತಿಂಡಿಗಳಲ್ಲಿ ಒಂದಾಗಿದೆ
Jr NTR: ದಕ್ಷಿಣ ಭಾರತದ ಚಿತ್ರರಂಗದ ಧ್ರುವತಾರೆ, ಅಭಿಮಾನಿಗಳ ಪಾಲಿನ 'ಯಂಗ್ ಟೈಗರ್' ಜೂನಿಯರ್ ಎನ್‌ಟಿಆರ್ ಅವರ ಜನಪ್ರಿಯತೆ ಇಂದು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಬದಲಾಗಿ ಅವರ ಅದ್ಭುತ ನಟನೆ, ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವ ಹಾವಭಾವ ಮತ್ತು ಅವರ ಅಪ್ರತಿಮ ನೃತ್ಯ ಶೈಲಿಯಿಂದ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಆದರೆ, ಆಹಾರದ ವಿಷಯಕ್ಕೆ ಬಂದಾಗ, ಯಾವುದೇ ಸ್ಟಾರ್ ಡಮ್ ಇಲ್ಲದೇ, ತುಂಬಾ ಸರಳವಾದ ಅಭಿರುಚಿಯನ್ನು ಹೊಂದಿದ್ದಾರೆ.
ಇತ್ತೀಚೆಗೆ ಎಸ್ಕ್ವೈರ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ, ನಟ ತಮ್ಮ ನೆಚ್ಚಿನ ಆಹಾರದ ಬಗ್ಗೆ ಮಾತನಾಡಿದ್ದಾರೆ. ಅವರು ಬೋಗದಾಯಕವಾದುದ್ದನ್ನು ಹೆಸರಿಸುವ ಬದಲಿಗೆ, ದಕ್ಷಿಣ ಭಾರತದ ಅದರಲ್ಲೂ ಆಂಧ್ರಪ್ರದೇಶದ ಫೇಮಸ್ ಆಹಾರವಾದ ಪುನುಗುಲು ಅನ್ನು ಹೆಚ್ಚಾಗಿ ಸೇವಿಸುವುದಾಗಿ ತಿಳಿಸಿದ್ದಾರೆ.
ಈ ಆಹಾರದ ಬಗ್ಗೆ ಮಾಹಿತಿ ನೀಡುತ್ತಾ, ಇವು ಚಿಕ್ಕ ಭಜಿಗಳಾಗಿರುತ್ತವೆ. ಇದನ್ನು ಶುಂಠಿ ಚಟ್ನಿ ಮತ್ತು ಕಡಲೆಕಾಯಿ ಚಟ್ನಿಯೊಂದಿಗೆ ತಿನ್ನಬೇಕು. ಈ ತಿಂಡಿಯನ್ನು ನಾನು ತುಂಬಾ ಇಷ್ಟಪಟ್ಟು ಸೇವಿಸುತ್ತೇನೆ ಎಂದು ಹೇಳಿದ್ದಾರೆ.
ಪುನುಗುಲು ಎಂದರೆ ಏನು?
ಪುನುಗುಲು ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನಪ್ರಿಯ ತಿಂಡಿಗಳಲ್ಲಿ ಒಂದಾಗಿದೆ. ಇದು ಹೆಚ್ಚಾಗಿ ಹೈದ್ರಾಬಾದ್ನಂತಹ ನಗರಗಳಲ್ಲಿ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಇವು ನೋಡಲು ಸಣ್ಣ ಭಜಿಯಾಕಾರದಲ್ಲಿ ಇರುತ್ತವೆ. ಮತ್ತು ಹೊರಗಡೆ ಗರಿಗರಿಯಾಗಿ ಮತ್ತು ಒಳಗಡೆ ಮೃದುವಾಗಿರುತ್ತದೆ. ಪುನುಗುಲುವನ್ನು ಉಳಿದ ಇಡ್ಲಿ ಅಥವಾ ದೋಸೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಹೆಚ್ಚುವರಿ ರುಚಿಗಾಗಿ ಈರುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವು ಮತ್ತು ಕೆಲವೊಮ್ಮೆ ಜೀರಿಗೆಯನ್ನು ಸೇರಿಸಲಾಗುತ್ತದೆ.
ಪುನುಗುಲು ತಯಾರಿಸುವುದು ಹೇಗೆ ?
* 2 ಕಪ್ ಇಡ್ಲಿ/ದೋಸೆ ಹಿಟ್ಟು
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಇಡ್ಲಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟು, ಮೈದಾ, ಜೀರಿಗೆ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಹಿಟ್ಟು ತುಂಬಾ ತೆಳುವಾಗಿರಬಾರದು. ಇದನ್ನು ಕೈಯಿಂದ ಸಣ್ಣ ಉಂಡೆಗಳನ್ನು ಬಿಡುವ ಹದದಲ್ಲಿರಬೇಕು. ಹಿಟ್ಟು ತೆಳುವಾದಲ್ಲಿ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿಕೊಳ್ಳಿ. ನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾದ ನಂತರ ಸಣ್ಣ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಹಾಕಿರಿ. ಉಂಡೆಗಳು ಸುತ್ತಲೂ ಸಮವಾಗಿ ಬೆಂದು, ಹೊಂಬಣ್ಣಕ್ಕೆ ತಿರುಗುವವರೆಗೆ ತಿರುಗಿಸಿ. ನಂತರ ತೆಂಗಿನಕಾಯಿ ಚಟ್ನಿ, ಕಡಲೆಕಾಯಿ ಚಟ್ನಿಯೊಂದಿಗೆ ಸೇವಿಸಿ (ಏಜೆನ್ಸೀಸ್).