ರಾಜಸ್ಥಾನ್ ರಾಯಲ್ಸ್ ಶಿಲ್ಪಾಗೆ ನೀಡಿದ ಗಿಫ್ಟ್​​ ಎಂದ ರಾಜ್​ ಕುಂದ್ರಾ 
ಬಾಲಿವುಡ್

ಪ್ರೇಮಿಗಳ ದಿನಕ್ಕೆ ಹೆಂಡತಿಗೆ IPL ತಂಡವೇ ಗಿಫ್ಟ್! 'ರಾಜಸ್ಥಾನ್​ ರಾಯಲ್ಸ್' ಶಿಲ್ಪಾಗೆ ನೀಡಿದ ಉಡುಗೊರೆ ಎಂದ ರಾಜ್​ ಕುಂದ್ರಾ! Raj Kundra on Rajasthan Royals

ಪ್ರಮುಖ ಮುಖ್ಯಾಂಶಗಳು

  • ಪ್ರೇಮಿಗಳ ದಿನದ ಉಡುಗೊರೆಯಾಗಿ ಐಪಿಎಲ್​ ತಂಡವನ್ನು ಖರೀದಿಸಿದ ಉದ್ಯಮಿ
  • ರಾಜಸ್ಥಾನ್ ರಾಯಲ್ಸ್ ಶಿಲ್ಪಾಗೆ ನೀಡಿದ ಗಿಫ್ಟ್​​ ಎಂದ ರಾಜ್​ ಕುಂದ್ರಾ
  • 82 ಕೋಟಿಗೆ ಖರೀದಿಸಿದ ತಂಡ ಈಗ 16 ಸಾವಿರ ಕೋಟಿ ಮೌಲ್ಯ ಪಡೆದಿದೆ
ಕ್ರಿಕೆಟ್​: ಕರ್ನಾಟಕ ಮೂಲದ, ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಬಗ್ಗೆ ಎಲ್ಲರಿಗೂ ತಿಳಿದೆಯಿದೆ. ಇವರು ಖ್ಯಾತ ಉದ್ಯಮಿ ರಾಜ್​ ಕುಂದ್ರಾ ಅವರ ಪತ್ನಿಯೂ ಹೌದು. ಇತ್ತೀಚೆಗೆ ಶಿಲ್ಪಾ ಪತಿ ರಾಜ್​ (Raj Kundra on Rajasthan Royals) ತಾವು ಐಪಿಎಲ್​​ನಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡವನ್ನು ಏಕೆ ಖರೀದಿಸಿದರು ಎಂಬ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಶಿಲ್ಪಾಗೆ ವ್ಯಾಲೆಂಟೈನ್ ಡೇ ಗಿಫ್ಟ್​​ ನೀಡಿದೆ!

ಇತ್ತೀಚಿಗೆ ಖಾಸಗಿ ಮಾದ್ಯಮವೊಂದಕ್ಕೆ ನೀಡಿಸ ಸಂದರ್ಶನ ಮಾತನಾಡಿರುವ ರಾಜ್​ ಕುಂದ್ರಾ, ನಾನು 2009 ರಲ್ಲಿ ಸುಮಾರು 82 ಕೋಟಿಗೆ ರಾಜಸ್ಥಾನ್​ ರಾಯಲ್ಸ್​ ತಂಡವನ್ನು ಖರೀದಿಸಿದ್ದೆ. ಖರೀದಿಸಿದ್ದೆ ಎಂದರೆ ನಾವು ಖರೀದಾರರ ಗುಂಪಿನಲ್ಲಿ ನಾನೊಬ್ಬ ಪಾರ್ಟ್ನರ್ ಆಗಿದ್ದೆ ಎಂದಿದ್ದಾರೆ.
ನಾನು ಈ ರಾಜಸ್ಥಾನ್​ ತಂಡವನ್ನು ಖರೀದಿಸಿದ ದಿನ ಫೆಬ್ರುವರಿ 14 ಅಂದರೆ ಪ್ರೇಮಿಗಳ ದಿನವಾಗಿತ್ತು. ಹೀಗಾಗಿ ನಾನು ಈ ತಂಡವನ್ನು ನನ್ನ ಹೆಂಡತಿ ಶಿಲ್ಪಾಳುಗೆ ಉಡುಗೊರೆಯಾಗಿ ನೀಡಿದ್ದೆ ಎಂದಿದ್ದಾರೆ.
ನಾನು ಈ ತಂಡದಲ್ಲಿ ಕೇವಲ ನನ್ನ ಹಣವನ್ನು ಮಾತ್ರವಲ್ಲ ಶಿಲ್ಪಾ ಇಷ್ಟು ವರ್ಷಗಳ ಕಾಲ ಗಳಿಸಿದ್ದ ಖ್ಯಾತಿಯನ್ನು ಸಹ ಹೂಡಿಕೆ ಮಾಡಿದ್ದೆ. ಆದರೆ ನನಗೆ ಆ ದಿನವೇ ತಿಳಿದಿತ್ತು, ಇದು ನನಗೆ ಖಂಡಿತ ಲಾಭವನ್ನು ತಂದುಕೊಡುತ್ತದೆ ಎನ್ನುವ ನಂಬಿಕೆ ಇತ್ತು ಎಂದಿದ್ದಾರೆ. ನಾವು ಆ ಸಮಯದಲ್ಲಿ ಸುಮಾರು 700 ಕೋಟಿಗೆ ತಂಡವನ್ನು ಖರೀದಿಸಿದೆವು. ಅದರ ಇಂದಿನ ಮೌಲ್ಯ ಸುಮಾರು 16 ಸಾವಿರ ಕೋಟಿ ದಾಟಿದೆ ಎಂದು ತಿಳಿಸಿದರು.

ಬ್ಯಾನ್​ ಬಗ್ಗೆ ಮೌನ ಮುರಿದ ಉದ್ಯಮಿ!

ನಂತರ 2013 ರಲ್ಲಿ ಐಪಿಎಲ್​​ನಲ್ಲಿ ಬೆಟ್ಟಿಂಗ್​ ಹಾಗೂ ಫಿಕ್ಸಿಂಗ್​ ಆರೋಪಗಳಿಗೆ ರಾಜಸ್ಥಾನ್​ ತಂಡ ಗುರಿಯಾಗಿ ಎರಡು ವರ್ಷಗಳ ನಿಷೇಧವನ್ನು ಅನುಭವಿಸಿತು. ಕೆಲವೊಂದಿಷ್ಟು ಆಟಗಾರರ ಬಂಧನವಾಯಿತು. ಹಾಗೆಯೇ ನಾನು ಕೂಡ ಕ್ರಿಕೆಟ್​​ನಿಂದ ದೂರವಾಗಬೇಕಾಯಿತು ಎಂದು ರಾಜ್​ ಬೇಸರ ವ್ಯಕ್ತಪಡಿಸಿದ್ದಾರೆ, (ಏಜನ್ಸೀಸ್​).