ಮುಂಬೈ: ಜನಪ್ರಿಯ ಧಾರವಾಹಿ ಅನುಪಮಾ ದೂರದರ್ಶನ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಕೆಲವು ಸಮಯದಿಂದ ದೂರವಾಣಿಯಲ್ಲಿ ಪ್ರಸಾರವಾಗುತ್ತಿದ್ದು, ಜನರ ಮೆಚ್ಚುಗೆಯನ್ನು ಗಳಿಸಿದೆ. ಇನ್ನು ಆ ಧಾರವಾಹಿಯಲ್ಲಿ ರೂಪಾಲಿ ಗಂಗೂಲಿ ಅವರ ಸೊಸೆಯಾಗಿ ನಟಿಸಿದ್ದ ನಟಿ ನಿಧಿ ಶಾ, ಸಹನಟ ಗೌರವ ಖನ್ನಾ ಅವರೊಂದಿಗೆ ಸಂಬಂಧ (Dating) ಹೊಂದಿದ್ದಾರೆ ಎಂದು ನೆಟಿಜನ್ಗಳು ಆರೋಪಿಸಿದ ನಂತರ ಸಹ ನಟರಿಬ್ಬರು ಸುದ್ಧಿಯಲ್ಲಿದ್ದಾರೆ.
ಗೌರವ್ ಖನ್ನಾ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದ ನಿಧಿ
ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಗೌರವ್ ಖನ್ನಾ ಬಿಗ್ಬಾಸ್ 19 ರ ಗೆಲುವನ್ನು ತೋರಿಸುವ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಅರ್ಹರಲ್ಲ ಎಂದು ಸೂಚಿಸಿದಾಗ ವಿವಾದ ಭುಗಿಲೆದ್ದಿದೆ. ಈ ವೇಳೆ ಅವರ ಲೈಕ್ಗಳು ತ್ವರಿತವಾಗಿ ಊಹಾಪೋಹಗಳನ್ನು ಹುಟ್ಟುಹಾಕಿತು. ಈ ಸಮಯದಲ್ಲಿ ಒಬ್ಬ ಬಳಕೆದಾರ ಅನುಪಮಾ ಸಮಯದಲ್ಲಿ ಅವರಿಬ್ಬರು ಸಂಬಂಧ ಹೊಂದಿದ್ದರು ಎಂದು ಕಾಮೆಂಟ್ ಮಾಡಿದ್ದಾರೆ, ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನಿಧಿ, ನಿಮಗೆ ತುಂಬಾ ಚೆನ್ನಾಗಿ ತಿಳಿದಿದೆ ಎಂದು ವ್ಯಂಗ್ಯ ನುಡಿಯುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಬಿಗ್ ಬಾಸ್ ಗೆಲುವನ್ನು ಪ್ರಶ್ನಿಸಿದವರಿಗೆ ಉತ್ತರಿಸಿದ ಗೌರವ್!
ಗೌರವ್ ಖನ್ನಾ ಅವರ ಬಿಗ್ಬಾಸ್ 19 ಪ್ರಯಾಣದ ಬಗ್ಗೆ ಟೀಕಿಸಿದವರನ್ನು ಉದ್ದೇಶಿಸಿ ಮಾತನಾಡಿದ ಗೌರವ್ ನಾನು ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಬಿಗ್ಬಾಸ್ ಮನೆಯ ಒಳಗೆ 15 ಜನರನ್ನು ಮೆಚ್ಚಿಸುವ ಸಲುವಾಗಿ ನಾನು ಅಲ್ಲಿಗೆ ಹೋಗಿಲ್ಲ. ನನ್ನನ್ನು ನೋಡುತ್ತಿರುವ 150 ಕೋಟಿ ಜನರನ್ನು ಮೆಚ್ಚಿಸಲು ನಾನು ಅಲ್ಲಿಗೆ ಹೋಗಿದ್ದೆ. ಈ ಸಂದರ್ಭದಲ್ಲಿ ನಾನು ಅನೇಕ ಜನರ ಹೃದಯವನ್ನು ಮುಟ್ಟುದ್ದೇನೆ. ಅದಕ್ಕಾಗಿ ಅವರು ನನಗೆ ಮತಹಾಕಿದ್ದಾರೆ ಎಂದರು.
ಬಿಗ್ ಬಾಸ್ 19
ಬಿಗ್ ಬಾಸ್ 19 ರ ವಿಜೇತ ಗೌರವ್ ಖನ್ನಾ ಅವರು ಟ್ರೋಫಿ ಗೆಲ್ಲುವುದರೊಂದಿಗೆ 50 ಲಕ್ಷ ಬಹುಮಾನವನ್ನು ಗೆದ್ದರು. ಐದು ಫೈನಲ್ ಲಿಸ್ಟ್ಗಳಲ್ಲಿ ಗೌರವ್ ಖನ್ನಾ, ಫರ್ಹಾನಾ ಭಟ್, ತಾನ್ಯಾ ಮಿತ್ತಲ್. ಮಲ್ಲಿಕ್ ಮತ್ತು ಪ್ರಣಿತ್ ಮೋರೆ ಇದ್ದರು. ಫರ್ಹಾನಾ ಭಟ್ ಅವರು ಮೊದಲ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿದ್ದಾರೆ (ಏಜೆನ್ಸೀಸ್).