Yami Gautam (ಚಿತ್ರ Instagram)
Yami Gautam: ಚಲನಚಿತ್ರ ನಿರ್ಮಾಪಕ ಆದಿತ್ಯ ಧರ್ ಇಂದು (ಮಾ.12) 43 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಅವರ ಪತ್ನಿ ಯಾಮಿ ಗೌತಮ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ಸಧ್ಯ ಅಭಿಮಾನಿಗಳ ಗಮನ ಸೆಳೆದಿದೆ.
ಪೋಸ್ಟ್ನಲ್ಲೇನಿದೆ?
ಆದಿತ್ಯ ಜೊತೆಗಿನ ಎರಡು ಚಿತ್ರಗಳನ್ನು ಹಂಚಿಕೊಂಡ ಯಾಮಿ, ನನ್ನ ಜೀವನದಲ್ಲಿ ನೀನು ನನಗೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಲು ಪದಗಳೇ ಸಾಲುತ್ತಿಲ್ಲ... ನನ್ನ ಪಾಲಿನ ಏಕೈಕ ಮತ್ತು ಪ್ರೀತಿಯ ಆದಿತ್ಯನಿಗೆ ಜನ್ಮ ದಿನದ ಶುಭಾಶಯಗಳು ಎಂದು ಬರೆದಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಅನೇಕ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು "ನಿಜವಾದ ಧುರಂಧರ್ ದಂಪತಿಗಳು" ಎಂದು ಬರೆದರೆ, ಇನ್ನೊಬ್ಬರು "ಬಾಲಿವುಡ್ ಸ್ಪೈ ಯೂನಿವರ್ಸ್ ಗೇಮ್ ಚೇಂಜರ್‌ಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನಿತರರು "ರಾಷ್ಟ್ರದ ಹೆಮ್ಮೆಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಬರೆದಿದ್ದಾರೆ.
ಆದಿತ್ಯ ಅವರ ವೃತ್ತಿಪರ ಜೀವನದ ಬಗ್ಗೆ ಹೇಳುವುದಾದರೆ, ಧುರಂಧರ್ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ಹಣವನ್ನು ದೋಚಿಕೊಂಡಿತು. ಈ ಚಿತ್ರದ ಯಶಸ್ಸಿನ ನಂತರ ಧುರಂಧರ್ 2 ಚಿತ್ರದ ಬಿಡುಗಡೆಗೆ ನಿರ್ದೆಶಕರು ಸಜ್ಜಾಗಿದ್ದು, ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಧುರಂಧರ್ 2 ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ನೈಜ ಘಟನೆಗಳಿಂದ ಪ್ರೇರಿತವಾದ ಧುರಂಧರ್ ಚಿತ್ರದ ಕೇಂದ್ರಬಿಂದು ಕರಾಚಿಯಲ್ಲಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿರುವ ಒಬ್ಬ ಭಾರತೀಯ ಗೂಢಚಾರ (Spy). ಭಾರತದ ರಾಷ್ಟ್ರೀಯ ಭದ್ರತೆಗೆ ಹೊಂಚು ಹಾಕುತ್ತಿರುವ ಒಂದು ಭೀಕರ ಭಯೋತ್ಪಾದಕ ಸಂಘಟನೆಯನ್ನು ಬೇರುಸಹಿತ ಕಿತ್ತೆಸೆಯುವುದು ಈ ಗುಪ್ತಚರ ಕಾರ್ಯಕರ್ತನ ಮುಖ್ಯ ಗುರಿಯನ್ನು ಹೊಂದಿತ್ತು (ಏಜೆನ್ಸೀಸ್).