Dhurandhar 
ಬಾಲಿವುಡ್

ಭಾರತದ ಏಜೆಂಟ್ ಲಿಯಾರಿಗೆ ಬಂದಿದ್ದರೆ ಜೀವಂತವಾಗಿ ಹೋಗುತ್ತಿರಲಿಲ್ಲ : ಧುರಂಧರ್ ಸಿನಿಮಾಗೆ ನಬೀಲ್ ಗಬೋಲ್ ಟಾಂಗ್​ | Dhurandhar

ಪ್ರಮುಖ ಮುಖ್ಯಾಂಶಗಳು

  • ಧುರಂಧರ್ ಚಿತ್ರದಲ್ಲಿ ತಮ್ಮ ಪಾತ್ರವನ್ನು ತಪ್ಪಾಗಿ ಚಿತ್ರಿಸಿದ್ದಕ್ಕಾಗಿ ನಬಿಲ್ ಗಬೋಲ್ ಆಕ್ರೋಶ
  • ಲಿಯಾರಿಗೆ ಇವರ ಏಜೆಂಟ್ ಬಂದಿದ್ದರೆ ಖಂಡಿತವಾಗಿ ಜೀವ ಸಹಿತ ಹೋಗುತ್ತಿರಲಿಲ್ಲ
  • ನಾನು ಬಹಳ ಧೈರ್ಯಶಾಲಿ ನಾಯಕ, ಆದರೆ ನನ್ನ ಪಾತ್ರ ಸರಿಯಾಗಿ ಮೂಡಿಬಂದಿಲ್ಲ
Dhurandhar : ನಿರ್ದೇಶಕ ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ಅಭಿನಯದ 'ಧುರಂಧರ್' (Dhurandhar) ಚಿತ್ರ ತೆರೆಗೆ ಬಂದು ಹದಿನೈದು ದಿನಗಳು ಕಳೆದಿದ್ದರೂ, ಈ ಚಿತ್ರದ ಕುರಿತಾದ ಚರ್ಚೆಗಳು ಇನ್ನೂ ಮುಗಿಯುತ್ತಿಲ್ಲ. ಕೆಲವರು ಅದರ ತಾಂತ್ರಿಕ ಕೌಶಲ್ಯ ಮತ್ತು ಕಲಾವಿದರ ಅಭಿನಯಕ್ಕಾಗಿ ಹೊಗಳಿದರೆ ಇನ್ನೂ ಅನೇಕರು ದ್ವೇಷಪೂರಿತ ಪ್ರಚಾರ ಮತ್ತು ಧರ್ಮಾಂಧತೆಯನ್ನು ಹರಡುತ್ತದೆ ಎಂದು ಟೀಕಿಸಿದ್ದಾರೆ. ಇದರ ನಡುವೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಮಾಜಿ ಸದಸ್ಯ ನಬಿಲ್ ಗಬೋಲ್ ಧುರಂಧರ್ ಚಿತ್ರದಲ್ಲಿ ತಮ್ಮ ಪಾತ್ರವನ್ನು ತಪ್ಪಾಗಿ ಚಿತ್ರಿಸಿದ್ದಕ್ಕಾಗಿ ತೀತ್ರ ಟೀಕೆ ಮಾಡಿದ್ದಾರೆ. ಸಿನಿಮಾದಲ್ಲಿ ಅನುಭವಿ ನಟ ರಾಕೇಶ್ ಬೇಡಿ ನಿರ್ವಹಿಸಿದ ಜಮೀಲ್ ಜಮಾಲಿ ಪಾತ್ರವು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಯ ನಾಯಕ ಗಬೋಲ್ ಅವರನ್ನು ಆಧರಿಸಿದೆ ಎಂದು ಹೇಳಲಾಗುತ್ತದೆ. ಅವರು 2008 ರಿಂದ 2011 ರವರೆಗೆ ಬಂದರು ಮತ್ತು ಹಡಗು ಖಾತೆ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. "ಜೋ ಮೇರಾ ರೋಲ್ ದಿಖಾಯಾ ಗಯಾ ಹೈ, ಮೇರಾ ರೋಲ್ ಬಹುತ್ ದಬ್ಬಾಂಗ್ ಥಾ, ದಬ್ಬಾಂಗ್ ಇಸ್ ತರೀಕೆ ಸೆ ಥಾ ಕಿ ಇನ್ಹೋನೆ ಮೇರೆ ರೋಲ್ ಕೋ ಸಹಿ ತರೀಕೆ ಸೆ ನಹಿ ದಿಖಾಯಾ ( ನಾನು ತುಂಬಾ ಧೈರ್ಯಶಾಲಿ ವ್ಯಕ್ತಿ ಆದರೆ ಅವರು ನಾನು ಹೇಗಿದ್ದೆನೋ ಅದನ್ನು ನನಗೆ ತೋರಿಸಿಲ್ಲ) ಎಂದು ಅವರು ಸ್ಥಳೀಯ ಮಾಧ್ಯಮಗಳೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ಹೇಳಿದರು. "ಇನ್ಹೋನೆ ಕೋಶಿಶ್ ಕರಿ ಹೈ ಲಿಯಾರಿ ಕೋ ಭಯೋತ್ಪಾದಕ ಹಬ್ ದಿಖಾನೆ ಕಿ, ಲಿಯಾರಿ ಕೋಯಿ ಭಯೋತ್ಪಾದಕ ಹಬ್ ನಹೀ ಹೈ. ಅಗರ್ ಇಂಕಾ ಕೋಯಿ ಏಜೆಂಟ್ ಆ ಜಾತಾ ತೋ ವೋ ಜಿಂದಾ-ಸಲಾಮತ್ ಲಿಯಾರಿ ಸೆ ನಹೀ ಜಾತಾ (ಅವರು ಲಿಯಾರಿಯನ್ನು ಭಯೋತ್ಪಾದಕ ಕೇಂದ್ರ ಎಂದು ತೋರಿಸಲು ಪ್ರಯತ್ನಿಸಿದ್ದಾರೆ. ಇವರು ತೋರಿಸಿದಂತೆ ಇವರ ಏಜೆಂಟ್ ಯಾರಾದರು ಲಿಯಾರಿಗೆ ಬಂದಿದ್ದರೆ ಜೀವಂತವಾಗಿ ಹೋಗುತ್ತಿರಲಿಲ್ಲ) ಚಿತ್ರದ ಮೇಲೆ ಅಂತರರಾಷ್ಟ್ರೀಯ ನಿಷೇಧಕ್ಕೆ ಒತ್ತಾಯಿಸುತ್ತೀರಾ ಎಂದು ಕೇಳಿದಾಗ, ಗ್ಯಾಬೋಲ್ ಅವರು ಹಾಗೆ ಮಾಡಲು ಹಣಕಾಸಿನ ಸಂಪನ್ಮೂಲಗಳ ಕೊರತೆ ಇದೆ ಎಂದು ಹೇಳಿದರು.
ನಟ ರಾಕೇಶ್ ಬೇಡಿ ಸ್ವತಃ ಜಮಾಲಿ ಪಾತ್ರವು ನಿಜ ಜೀವನದ ರಾಜಕಾರಣಿಯನ್ನು ಆಧರಿಸಿದೆ ಎಂದು ಒಪ್ಪಿಕೊಂಡರೂ ಸಹ ಅವರು ಯಾರ ಹೆಸರನ್ನು ಹೇಳಲಿಲ್ಲ. ಹೌದು, ನಾನು ಅವರ ಬಹಳಷ್ಟು ದೃಶ್ಯಗಳು, ದೇಹ ಭಾಷೆ ಮತ್ತು ಭಾಷಣಗಳನ್ನು ನೋಡಿದ್ದೇನೆ. ನಮ್ಮ ಕಥೆಯ ಚೌಕಟ್ಟಿನೊಳಗೆ ನನಗೆ ಸಾಧ್ಯವಾದಷ್ಟು ಎಲ್ಲವನ್ನೂ ನಾನು ಪಡೆದುಕೊಂಡಿದ್ದೇನೆ. ಅವರು ಒಂತರಾ ನರಿಯಂತೆ. ಏನೇ ಬರಲಿ, ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಅವರು ಅಧಿಕಾರದಲ್ಲಿಯೇ ಇರುತ್ತಾರೆ. ಭಾರತದಲ್ಲಿಯೂ ಸಹ ಅಂತಹ ಕೆಲವು ಜನರಿದ್ದಾರೆ, ಅವರು ವಂಚನೆಯಿಂದ ಅಧಿಕಾರದಲ್ಲಿ ಹೇಗೆ ಉಳಿಯಬೇಕೆಂದು ತಿಳಿದಿದ್ದಾರೆ, ”ಎಂದು ಅವರು ಹೇಳಿದರು.

ಧುರಂಧರ್ ಬಗ್ಗೆ

ಈ ಸ್ಪೈ ಥ್ರಿಲ್ಲರ್ ಕತೆಯು ಪಾಕಿಸ್ತಾನವನ್ನು ಕೇಂದ್ರವಾಗಿಟ್ಟುಕೊಂಡಿದ್ದು, ರಣವೀರ್ ಲಿಯಾರಿಯಿಂದ ಕಾರ್ಯನಿರ್ವಹಿಸುವ ಭಯೋತ್ಪಾದಕ ಜಾಲಗಳಿಗೆ ನುಸುಳುವ ಭಾರತೀಯ ಗೂಢಚಾರ ಏಜೆಂಟ್ ಆಗಿ ನಟಿಸಿದ್ದಾರೆ. ಈ ಚಿತ್ರವು ಬೇಹುಗಾರಿಕೆ, ಅಪರಾಧ ಮತ್ತು ಗುಪ್ತಚರ ತಂತ್ರಗಳ ವಿಷಯಗಳನ್ನು ಸಂಯೋಜಿಸುತ್ತದೆ. ಇದರಲ್ಲಿ ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಆರ್. ಮಾಧವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಧುರಂಧರ್ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ಭಾರತದಲ್ಲಿ ಈಗಾಗಲೇ ₹800 ಕೋಟಿ ದಾಟಿದೆ. ಈ ಚಿತ್ರವನ್ನು ಆದಿತ್ಯ ಧರ್ ನಿರ್ದೇಶಿಸಿದ್ದಾರೆ.(ಏಜೆನ್ಸೀಸ್).