ಬಡೇ ಸಾಬ್​ ಪಾತ್ರದ ಕುರಿತು ನನ್ನ ಮನೆಯವರಿಗೂ ತಿಳಿಸಿರಲಿಲ್ಲ ಎಂದ ಡ್ಯಾನಿಶ್ 
ಬಾಲಿವುಡ್

ಮನೆಯವರಿಗೂ ತಿಳಿಸದೆ ದಾವೂದ್ ಪಾತ್ರ ಮಾಡಿದೆ! ಧುರಂಧರ್ 2 ಬಗ್ಗೆ ಮೌನ ಮುರಿದ ಬಡೇ ಸಾಬ್ ಡ್ಯಾನಿಶ್ ಇಕ್ಬಾಲ್! Dhurandhar 2 Dawood Ibrahim

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್​ ಆಫೀಸ್​ನಲ್ಲಿ ಧುರಂಧರ್​ ಕಮಾಲ್​
  • ಈ ಸಿನಿಮಾದಲ್ಲಿ ದಾವೂದ್​ ಇಬ್ರಾಹಿಂ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡ್ಯಾನಿಶ್​ ಇಕ್ಬಾಲ್​
  • ಬಡೇ ಸಾಬ್​ ಪಾತ್ರದ ಕುರಿತು ನನ್ನ ಮನೆಯವರಿಗೂ ತಿಳಿಸಿರಲಿಲ್ಲ ಎಂದ ಡ್ಯಾನಿಶ್
ಮುಂಬೈ: ಮಾರ್ಚ್​ 19 ರಂದು ತೆರೆಕಂಡ ಧುರಂಧರ್​ 2: ದಿ ರಿವೆಂಜ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಾ ಬಿಡುಗಡೆಯಾದ ಐದೇ ದಿನಗಳಲ್ಲಿ ಸಾವಿರದ ಗಡಿ ತಲುಪಿದೆ. ಈ ಸಿನಿಮಾದಲ್ಲಿ ನಿಜ ಜೀವದಲ್ಲಿ ಬದುಕಿರುವ ಹಾಗೂ ಸಾವನ್ನಪ್ಪಿರುವ ವ್ಯಕ್ತಿಗಳ ಪಾತ್ರಗಳನ್ನು ಸೃಷ್ಟಿಸಿದ ಕಾರಣದಿಂದಲೇ ಈ ಸಿನಿಮಾ ಇಷ್ಟೊಂದು ಯಶಸ್ಸು ಕಂಡಿದೆ ಎಂದರೆ ತಪ್ಪಾಗಲಾರದು.
ಈ ಸಿನಿಮಾದ ಮೊದಲ ಭಾಗ ಬಿಡುಗಡೆಯಾದಾಗನಿಂದ ಈ ಚಿತ್ರದಲ್ಲಿ ಹೇಳಿರುವ ಬಡೇ ಸಾಬ್ ​(Dhurandhar 2 Dawood Ibrahim) ಯಾರ ಕುರಿತಾದ ಪಾತ್ರ? ಮತ್ತು ಈ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬ ಪ್ರಶ್ನೆ ಪ್ರೇಕ್ಷಕರ ಮನಸ್ಸಿನಲ್ಲಿ ಕಾಡುತ್ತಿತ್ತು. ಈಗ ಸಿನಿಮಾದ ಎರಡನೇ ಭಾಗ ಬಿಡುಗಡೆಯಾದ ನಂತರ ಈ ಬಡೇ ಸಾಬ್​ ಪಾತ್ರ ಭೂಗತ ಪಾತಕಿ ದಾವೂದ್​ ಇಬ್ರಾಹಿಂನದ್ದು ಎನ್ನುವುದು ಜಗಜ್ಜಾಹಿರವಾಗಿದೆ.

ನನ್ನ ಮನೆಯವರಿಗೆ ಇದರ ಬಗ್ಗೆ ತಿಳಿದಿರಲಿಲ್ಲ!

ಈ ಬಡೇ ಸಾಬ್​ ಅಂದರೆ ದಾವೂದ್​ ಇಬ್ರಾಹಿಂನ ಪಾತ್ರದಲ್ಲಿ ಮಿಂಚಿರುವ ಡ್ಯಾನಿಶ್​ ಇಕ್ಬಾಲ್​ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ತಮ್ಮ ಪಾತ್ರದ ಕುರಿತು ಮೌನ ಮುರಿದಿದ್ದಾರೆ.
ನನಗೆ ಆದಿತ್ಯ ಧರ್​ ನೀವು ನನ್ನ ಸಿನಿಮಾದಲ್ಲಿ ಒಂದು ಪಾತ್ರವನ್ನು ಮಾಡಬೇಕೆಂದಷ್ಟೆ ತಿಳಿಸಿದ್ದರು. ನಂತರ ಸಿನಿಮಾದ ಕಥೆ ಕೇಳಿದ ಬಳಿಕ ನನಗೆ ನೀವು ಸಿನಿಮಾದಲ್ಲಿ ಬರುವ ಬಡೇ ಸಾಬ್​ (ದಾವೂದ್​ ಪಾತ್ರ) ಪಾತ್ರವನ್ನು ನಿರ್ವಹಿಸಬೇಕೆಂದು ಹೇಳಿದರು. ಹಾಗೆಯೇ ಈ ಕುರಿತು ಕೆಲವು ಅರ್ಗಿಮೆಂಟ್​ಗಳನ್ನು ಮಾಡಿಕೊಂಡು ಈ ಪಾತ್ರದ ಬಗ್ಗೆ ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಎಲ್ಲಿಯೂ ಯಾವುದೇ ರಹಸ್ಯವನ್ನು ಬಿಟ್ಟುಕೊಡಬಾರದೆಂದು ಆದಿತ್ಯ ತಿಳಿಸಿದ್ದ.
ಹಾಗೆಯೇ ನಾನು ವೃತ್ತಿ ಧರ್ಮಕ್ಕೆ ಬೆಲೆ ಕೊಟ್ಟು ನಾನು ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಕುರಿತು ಮನೆಯವರಿಗೂ ಸಹ ಏನನ್ನು ತಿಳಿಸಿರಲಿಲ್ಲ ಎಂದು ಡ್ಯಾನಿಶ್​ ಇಕ್ಬಾಲ್​ ತಿಳಿಸಿದ್ದಾರೆ. ಈಗ ಈ ಸಿನಿಮಾ ಅದ್ಭುತವಾಗಿ ಮೂಡಿಬಂದಿದ್ದು, ನನ್ನ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗುತ್ತಿರುವುದು ನನಗೆ ಸಹ ತುಂಬಾ ಖುಷಿಯನ್ನು ತಂದುಕೊಟ್ಟಿದೆ ಎಂದು ಅವರು ಹೇಳಿದ್ದಾರೆ.

ಯಾರು ಈ ಡ್ಯಾನಿಶ್ ಇಕ್ಬಾಲ್?

ಡ್ಯಾನಿಶ್ ಇಕ್ಬಾಲ್ ಒಬ್ಬ ನಟ, ರಂಗಭೂಮಿ ನಿರ್ದೇಶಕ, ನ್ಯಾಷನಲ್​ ಸ್ಕೂಲ್​ ಆಫ್ ಡ್ರಾಮಾದ ವಿದ್ಯಾರ್ಥಿಯಾಗಿದ್ದು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಾಟಕಕಾರರಾಗಿದ್ದಾರೆ. ಅಷ್ಟೇ ಅಲ್ಲದೇ ಡ್ಯಾನಿಶ್ ಇಕ್ಬಾಲ್, ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಸಮೂಹ ಸಂವಹನ ಸಂಶೋಧನಾ ಕೇಂದ್ರದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಧುರಂಧರ್​ 2 ನಲ್ಲಿ ಬಡೇ ಸಾಬ್​ ಪಾತ್ರವನ್ನು ನಿರ್ವಹಿಸುವ ಮೊದಲು ಫರ್ಜ, ಹಕ್​, ಭಕ್ಷಕ್​ ಹಾಗೂ ಹಾಲಿವುಡ್​ನ ದಿ ಮೈಟಿ ಹಾರ್ಟ್​ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಧುರಂಧರ್​ 2 ಬಗ್ಗೆ

ಧುರಂಧರ್​ 2 ಇದು ಧುರಂಧರ್​ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ರಾಕೇಶ್​ ಬೇಡಿ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಡ್ಯಾನಿಶ್​ ಇಕ್ಬಾಲ್​, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾದ ನಿರ್ದೇಶಕ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್​).