ಧುರಂಧರ್​ ಸಿನಿಮಾ ಬಗ್ಗೆ ಮೌನ ಮುರಿದ ಅಮೀರ್​ ಖಾನ್​ 
ಬಾಲಿವುಡ್

ನಾನು ಈ ಸಿನಿಮಾವನ್ನು ನೋಡಿಲ್ಲ, ಆದರೆ.... ಧುರಂಧರ್ 2 ಬಗ್ಗೆ ಕೊನೆಗೂ ಮೌನ ಮುರಿದ ಅಮೀರ್​ ಖಾನ್​! Aamir Khan on Dhurandhar 2

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್​ 2
  • ಬಿಡುಗಡೆಯಾದ ಒಂದೇ ವಾರದಲ್ಲಿ ಸಾವಿರ ಕೋಟಿ ಕ್ಲಬ್​ ಸೇರಿದ ಸಿನಿಮಾ
  • ನಾನು ಈ ಸಿನಿಮಾವನ್ನು ನೋಡಿಲ್ಲ, ಆದರೆ ಇದರ ಬಗ್ಗೆ ಉತ್ತಮ ಅಭಿಪ್ರಾಯವನ್ನು ಕೇಳಿದ್ದೆನೆ : ಅಮೀರ್​ ಖಾನ್​
ಮುಂಬೈ: ಭಾರತೀಯ ಚಿತ್ರರಂಗದ ಅದರಲ್ಲೂ ಬಾಲಿವುಡ್​ನ ದಿಕ್ಕನ್ನೇ ಬದಲಿಸಿದ ಸಿನಿಮಾ ಯಾವುದೆಂರೆ ಎಲ್ಲರ ಬಾಯಿಗೆ ಬರುವ ಹೆಸರೇ ಧುರಂಧರ್​. ಈಗ ಈ ಸಿನಿಮಾದ ಎರಡನೇ ಭಾಗ ಧುರಂಧರ್​ 2 ತೆರೆಕಂಡ ಏಳೇ ದಿನಗಳಲ್ಲಿ ಸಾವಿರ ಕೋಟಿ ಗಡಿ ದಾಟಿ ಈಗ 1,500 ಕೋಟಿಗಳಿಕೆ ಮಾಡಲು ಸಜ್ಜಾಗುತ್ತಿದೆ.
ಈ ಸಿನಿಮಾ ಬಿಡುಗಡೆಯಾದ ದಿನದಿಂದ ಇದರ ಯಶಸ್ಸಿನ ಅಶ್ವಮೇಧಯಾಗ ಮುಂದುವರೆದಿದ್ದು, ಇಲ್ಲಿವರೆಗೆ ಸಿನಿ ರಂಗದಲ್ಲಿ ನಿರ್ಮಾಣವಾಗಿದ್ದ ಎಲ್ಲಾ ದಾಖಲೆಗಳು ಪುಡಿಪುಡಿಯಾಗಿವೆ.
ಆದರೆ ಈ ಸಿನಿಮಾ ಇಷ್ಟೊಂದು ಖ್ಯಾತಿಯನ್ನು ಗಳಿಸುತ್ತಿದ್ದರೂ ಸಹ ಬಾಲಿವುಡ್​ನ ಸೂಪರ್​ ಸ್ಟಾರ್​ಗಳೆನ್ನಿಕೊಂಡಿರುವ ಖ್ಯಾತನಾಮರು ಏಕೆ ಈ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿಲ್ಲ, ಎಂಬ ಪ್ರಶ್ನೆ ವೀಕ್ಷಕರನ್ನು ಕಾಡುತ್ತಲೇ ಇತ್ತು.

ನಾನು ಈ ಸಿನಿಮಾದ ಬಗ್ಗೆ ಮೆಚ್ಚುಗೆಯನ್ನಷ್ಟೇ ಕೇಳಿದ್ದೇನೆ!

ಈಗ ಈ ಸಿನಿಮಾ ಬಗ್ಗೆ ಮೌನ ಮುರಿದಿರುಬ ಮಿಸ್ಟರ್​ ಪೆರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್​ ಖಾನ್​ (Aamir Khan on Dhurandhar 2), ನಾನು ಈ ಸಿನಿಮಾವನ್ನು ಈ ವರೆಗೆ ನೋಡಿಲ್ಲ, ಆದರೆ ಇದರ ಬಗ್ಗೆ ಸಕಾರಾತ್ಮಕವಾದ ವಿಚಾರವನ್ನಷ್ಟೇ ಕೇಳಿದ್ದೇನೆಂದು ಹೇಳಿದ್ದಾರೆ.
ಆದಿತ್ಯ ಹಾಲಿವುಡ್​ ರೇಂಜ್​ ನಿರ್ದೇಶಕ: ಕಂಗನಾ
ಧುರಂಧರ್​ 2: ದಿ ರಿವೆಂಜ್​ ಸಿನಿಮಾವನ್ನು ವೀಕ್ಷಿಸಿದ ಬಾಲಿವುಡ್​ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್​, ಈ ಸಿನಿಮಾ ಭಾತರೀಯ ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬಾಲಿವುಡ್​ನಲ್ಲಿ ನಿರ್ದೇಶಕ ಎಲ್ಲರಿಗಿಂತ ಹೆಚ್ಚಿನ ಶ್ರಮವಹಿಸಿ ಅತ್ಯಂತ ಕಡಿಮೆ ಸಂಭಾವನೆ ಪಡೆಯುತ್ತಾನೆ. ಸಿನಿಮಾ ಕೇವಲ ಸ್ಟಾರ್​ ನಟರಿಂದ ಹಿಟ್​ ಆಗುತ್ತದೆ ಎಂಬ ಸಂಸ್ಕೃತಿ ಬಾಲಿವುಡ್​ನಲ್ಲಿದೆ.
ಆದರೆ, ಆದಿತ್ಯ ಧರ್​ ಈ ಸಂಪ್ರದಾಯವನ್ನು ಸಂಪೂರ್ಣವಾಗಿ ಸುಳ್ಳಾಗಿಸಿದ್ದು, ನಿರ್ದೇಶಕನ ಮೂಲಕವೇ ಸಿನಿಮಾ ಹಿಟ್​ ಅಥವಾ ಪ್ಲಾಪ್ ಆಗುತ್ತದೆ ಎಂಬ ಸಂದೇಶವನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಆದಿತ್ಯ ಧರ್​ ಒಬ್ಬ ಹಾಲಿವುಡ್ ರೇಂಜಿನ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ ಎಂದು ಕಂಗನಾ ಮೆಚ್ಚುಗೆ ವ್ಯಕ್ತ ಪಡಿಸಿದ್ದರು.

ಧುರಂಧರ್​ 2 ಬಗ್ಗೆ

ಧುರಂಧರ್​ 2 ಇದು ಧುರಂಧರ್​ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ರಾಕೇಶ್​ ಬೇಡಿ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಡ್ಯಾನಿಶ್​ ಇಕ್ಬಾಲ್​, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾದ ನಿರ್ದೇಶಕ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್​).