ನಾನು ದಾವೂದ್​ನನ್ನು ಭೇಟಿ ಮಾಡಿಯೇ ಇಲ್ಲ: ನಬೀಲ್ ಗೋಯಲ್​ 
ಬಾಲಿವುಡ್

ನಾನು ದಾವೂದ್​ನನ್ನು ಭೇಟಿಯೇ ಮಾಡಿಲ್ಲ: ಧುರಂಧರ್​ 2 ವಿರುದ್ಧ ನಬೀಲ್​ ಗಬೋಲ್​ ಗರಂ| Nabil Gabol on Dhurandhar 2

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್​ 2
  • ತೆರೆಕಂಡು 13 ನೇ ದಿನಕ್ಕೆ 1500 ಕೋಟಿ ಕಲೆಕ್ಷನ್​
  • ನಾನು ದಾವೂದ್​ನನ್ನು ಭೇಟಿ ಮಾಡಿಯೇ ಇಲ್ಲ: ನಬೀಲ್ ಗೋಯಲ್​
  • ನನ್ನ ಪಾತ್ರವನ್ನು ಈ ಸಿನಿಮಾದಲ್ಲಿ ಸರಿಯಾಗಿ ತೋರಿಸಿಲ್ಲ : ಪಾಕಿಸ್ತಾನದ ಜಮೀಲ್​ ಜಮಾಲಿ
ಪಾಕಿಸ್ತಾನ: ಮಾರ್ಚ್​ 19 ರಂದು ಬಿಡುಗಡೆಯಾಗಿ ಭಾರತೀಯ ಬಾಕ್ಸ್ ಆಫೀಸ್​​ನ್ನು ಧೂಳಿಪಟ ಮಾಡಿರುವ ಸಿನಿಮಾ ಎಂದರೆ ಅದು ಧುರಂಧರ್​ 2 ದಿ ರಿವೆಂಜ್​ ಆಗಿದೆ. ತೆರೆಕಂಡ 13 ನೇ ದಿನವೇ ಸುಮಾರು 1,500 ಕೋಟಿ ಗಳಿಸುವ ಮೂಲಕ ತನ್ನ ನಾಗಾಲೋಟವನ್ನು ಮುಂದುವರೆಸಿದೆ.
ಈ ಸಿನಿಮಾದಲ್ಲಿ ಪಾಕಿಸ್ತಾನವನ್ನು ಉಗ್ರಗಾಮಿಗಳ ದೇಶವೆಂದು, ಅಲ್ಲಿ ಭಯೋತ್ಪಾದಕರನ್ನು ಹುಟ್ಟು ಹಾಕಲಾಗುತ್ತದೆ ಎಂದು ತೋರಿಸಿರುವ ಕಾರಣ ಈ ಸಿನಿಮಾವನ್ನು ಪಾಕಿಸ್ತಾನ ಸರ್ಕಾರ ನಿಷೇಧ ಮಾಡಿದೆ. ಈ ಸಿನಿಮಾದಲ್ಲಿ ತೋರಿಸಿರುವ ಕೆಲ ಪಾತ್ರಗಳು ನೈಜವಾಗಿ ಬದುಕಿದ್ದರೆ, ಇನ್ನೂ ಕೆಲ ಪಾತ್ರಗಳು ಕಾಲ್ಪನಿಕವಾಗಿದ್ದರೂ ಸಹ ಬದುಕಿರುವ ವ್ಯಕ್ತಿಗಳನ್ನು ಬಹಳಷ್ಟು ಹೋಲುವಂತಿದೆ.

ನಾನು ದಾವೂದ್​ನ್ನು ಭೇಟಿ ಮಾಡಿಯೇ ಇಲ್ಲ!

ಈ ಸಿನಿಮಾದಲ್ಲಿ ರಣವೀರ್​ ಸಿಂಗ್​ ಅಭಿನಯದ ಹಮ್ಜಾ ಅಲಿ ಮಜಾರಿ ಪಾತ್ರ ಮುಖ್ಯ ಭೂಮಿಕೆಯಲ್ಲಿದ್ದರೂ ಸಹ ರಾಕೇಶ್​ ಬೇಡಿ ನಟಿಸಿರುವ ಜಮೀಲ್ ಜಮಾಲಿ ಎಂಬ ಪಾತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಖ್ಯಾತಿಯನ್ನು ಪಡೆಯುತ್ತಿದೆ.
ಈ ಪಾತ್ರವು ಪಾಕಿಸ್ತಾನದ ರಾಜಕಾರಣಿ ನಬೀಲ್ ಗಬೋಲ್​ (Nabil Gabol on Dhurandhar 2) ಅವರನ್ನು ಬಹಳಷ್ಟು ಹೋಲುತ್ತದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ನಬೀಲ್​ ಗಬೋಲ್​, ಸಿನಿಮಾದಲ್ಲಿ ನನ್ನ ಪಾತ್ರವನ್ನು ಬಹಳ ಹಾಸ್ಯಮಯಿಯಾಗಿ ತೋರಿಸಿದ್ದಾರೆ, ಆದರೆ ನಾನು ನನ್ನ ಗಟ್ಟಿತನಕ್ಕೆ ಖ್ಯಾತನಾಗಿದೆ. ಹಾಗೆಯೇ ಈ ಸಿನಿಮಾದಲ್ಲಿ ತೋರಿಸಿದಂತೆ ನಾನೆಂದು ದಾವೂದ್​ ಇಬ್ರಾಹಿಂನನ್ನು ಬೇಟಿ ಮಾಡಿಲ್ಲ. ಮತ್ತು ಅವರು ಪಾಕಿಸ್ತಾನದಲ್ಲಿ ಇದ್ದ ಬಗ್ಗೆ ಸಹ ನನಗೆ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಹೆಸರನ್ನು ಹಾಳು ಮಾಡುವ ಉದ್ದೇಶ!

ಅಂದ ಹಾಗೆ ಈ ಸಿನಿಮಾದಲ್ಲಿ ಪಾಕಿಸ್ತಾನವನ್ನು ಕೆಟ್ಟದಾಗಿ ತೋರಿಸಿದ್ದಾರೆ. ಪಾಕಿಸ್ತಾನ ಒಂದು ಭತೋತ್ಪಾದಕ ದೇಶ ಎಂದು ಜನರ ಭಾವನೆ ಬರುವಂತೆ ಮಾಡುವುದು ಈ ಚಿತ್ರದ ಉದ್ದೇಶವಾಗಿದೆ. ಆದರೆ ಈ ಸಿನಿಮಾದಲ್ಲಿ ತೋರಿಸಿರುವುದೆಲ್ಲಾ ನಿಜವಲ್ಲ. ಇಲ್ಲಿ ಕೇವಲ ಅರ್ಧ ಸತ್ಯವನ್ನು ಮಾತ್ರ ತೋರಿಸಲಾಗಿದೆ ಎನ್ನುವುದು ನಬೀಲ್​ ಗಬೋಲ್​ ಅವರ ಅಭಿಪ್ರಾಯವಾಗಿದೆ.

ಲಿಯಾರಿ ಕಾ ಗಬ್ಬರ್​ ಸಿನಿಮಾ ನಿರ್ಮಿಸುತ್ತೆನೆ

ಈ ಧುರಂಧರ್​ ಸಿನಿಮಾದಲ್ಲಿ ನನ್ನ ಪಾತ್ರವನ್ನು ಸರಿಯಾಗಿ ಚಿತ್ರಿಸಿಲ್ಲ, ಇದು ನನಗೆ ತುಂಬಾ ನೋವಾಗಿದೆ ಎಂದು ಹೇಳಿರುವ ಗಬೋಲ್​, ಇನ್ನೇನು ಕೆಲವೇ ತಿಂಗಳುಗಳಲ್ಲಿ ಲಿಯಾರಿ ಕಾ ಗಬ್ಬರ್​ ಎನ್ನುವ ಸಿನಿಮಾವನ್ನು ನಿರ್ಮಿಸುತ್ತೆನೆ. ಆ ಸಿನಿಮಾದಲ್ಲಿ ನನ್ನ ಪಾತ್ರ ಹೇಗಿರಲಿದೆ ಎನ್ನುವುದನ್ನು ಜನರಿಗೆ ತೋರಿಸುತ್ತೆನೆ ಎಂದು ಅವರು ಹೇಳಿದ್ದಾರೆ.

ಧುರಂಧರ್​ 2 ಬಗ್ಗೆ

ಧುರಂಧರ್​ 2 ಇದು ಧುರಂಧರ್​ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ರಾಕೇಶ್​ ಬೇಡಿ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಡ್ಯಾನಿಶ್​ ಇಕ್ಬಾಲ್​, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾದ ನಿರ್ದೇಶಕ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್​).