ನಾನು ಅಮೀರ್ ಖಾನ್ ಮಗ ಎಂದೇ ಅವಕಾಶ ದೊರೆತಿದೆ
- ನೆಪೊಟಿಸಂ ಬಗ್ಗೆ ಜುನೈದ್ ಖಾನ್ ಶಾಕಿಂಗ್ ಹೇಳಿಕೆ
- ನಾನು ಅಮೀರ್ ಖಾನ್ ಮಗ ಎಂದೇ ಅವಕಾಶ ದೊರೆತಿದೆ
- ತಾರೆಗಳ ಮಕ್ಕಳ ಸಿನಿಮಾ ಲಾಭ ತರುತ್ತದೆ
ಮುಂಬೈ: ಬಾಲಿವುಡ್ನಲ್ಲಿ ಸ್ವಜನ ಪಕ್ಷಪಾತ (Nepitism) ಬಗ್ಗೆ ಆಗ್ಗಾಗೆ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತದೆ. ಖ್ಯಾತ ನಾಮ ನಟ, ನಿರ್ದೇಶಕ-ನಿರ್ಮಾಪಕರ ಮನೆಯಲ್ಲಿ ಹುಟ್ಟಿದರೆ ಸಾಕು, ಯೋಗ್ಯತೆ ಇಲ್ಲದಿದ್ದರು ಸಹ ದೊಡ್ಡ ಪರದೆ ಮೇಲೆ ನಟ-ನಟಿಯಾಗಿ ಮಿಂಚಬಹುದು ಎಂಬ ಆರೋಪ ಇದ್ದೇ ಇದೆ.
ಈಗ ಈ ನೆಪೊಟಿಸಂ ಕುರಿತು ಬಾಲಿವುಟ್ ನಟ ಅಮೀರ್ ಖಾನ್ ಪುತ್ರ ಜುನೈದ್ ಖಾನ್ (Junaid Khan on Nepotism) ನೀಡಿರುವ ಹೇಳಿಕೆ ಎಲ್ಲಾ ಕಡೆ ವೈರಲ್ ಆಗಿದ್ದು, ತೀವ್ರವಾದ ಚರ್ಚೆಗೆ ವೇದಿಕೆ ಕಲ್ಪಿಸಿದೆ ಎಂದರೆ ತಪ್ಪಾಗದು.
ನಾನು ಅಮೀರ್ ಖಾನ್ ಮಗ; ಅದಕ್ಕೆ ಕೆಲಸ ಸಿಕ್ಕಿದೆ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಜುನೈದ್ ಖಾನ್, ಈ ನೆಪೊಟಿಸಂ ಎನ್ನುವ ಶಬ್ದಕ್ಕೆ ನಾನು ತಲೆ ಕೆಡಿಸಿ ಕೊಳ್ಳುವುದಿಲ್ಲ, ನನಗೆ ಸಿನಿಮಾದಲ್ಲಿ ಅವಕಾಶ ದೊರೆಯಲು ಅಮೀರ್ ಖಾನ್ ಮಗ ಎನ್ನುವುದೇ ಕಾರಣ ಎಂದು ಬಹಿರಂಗವಾಗಿ ಹೇಳಿದ್ದಾರೆ.
ನಾನು ನಟಿಸಿರುವ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ನೆಲ ಕಚ್ಚಿದರೂ ಸಹ, ನನಗೆ ಇನ್ನಷ್ಟು ಅವಕಾಶ ದೊರೆಯುತ್ತಿದೆ. ಇದಕ್ಕೆ ನನ್ನ ತಂದೆ ಅಮೀರ್ ಖಾನ್ ಅವರೇ ಕಾರಣ ಎಂದರೆ ಸುಳ್ಳಲ್ಲ ಎಂದು ಅವರು ಹೇಳಿದ್ದಾರೆ.
ಸ್ಟಾರ್ ಮಕ್ಕಳು ಲಾಭ ತರುತ್ತಾರೆ; ಅದಕ್ಕೆ ಅವರನ್ನು ಆರಿಸುತ್ತಾರೆ
ಇನ್ನು ಬಾಲಿವುಡ್ನಲ್ಲಿರುವ ನೆಪೊಟಿಸಂ ಬಗ್ಗೆ ಮಾತನಾಡಿದ ಜುನೈದ್, ನೋಡಿ ಖ್ಯಾತ ತಾರೆಗಳ ಮಕ್ಕಳು ಚಿಕ್ಕಂದಿನಿಂದ ಸಿನಿಮಾಗಳನ್ನು ನೋಡಿಕೊಂಡೆ ಬೆಳೆದಿರುತ್ತಾರೆ. ಹಾಗೆಯೇ ಅವರಿಗೆ ಸಿನಿಮಾದಲ್ಲಿ ಏನು ಮಾಡಬೇಕು? ಏನು ಮಾಡಬಾರದೆಂದು ಅವರ ಪಾಲಕರು ಹೇಳಿ ಕೊಟ್ಟಿರುತ್ತಾರೆ.
ಹೀಗಾಗಿ ಅವರು ಸಿನಿಮಾದಲ್ಲಿ ಬೇಗ ಯಶಸ್ಸನ್ನು ಕಾಣುವ ಜೊತೆಗೆ ಸಿನಿಮಾ ಕೂಡ ಸಕ್ಸಸ್ ಆಗುವಂತೆ ನೋಡಿಕೊಳ್ಳುತ್ತಾರೆ. ಹಾಗೆಯೇ ಮನೆತನದ ಹೆಸರನ್ನು ನೋಡೆ ಇಂದಿಗು ಜನ ಥಿಯೇಟರ್ಗೆ ಬರುವ ಕಾರಣ, ಅವರು ಈ ನೆಪೋ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆಂದು ಜುವೈದ್ ಹೇಳಿದ್ದಾರೆ, (ಏಜನ್ಸೀಸ್).