ಇದು ನಮ್ಮ ಯುದ್ಧ ನಾವೇ ಹೋರಾಡುತ್ತೆವೆ; ಯಾರ ಬೆಂಬಲವೂ ಬೇಡ: ದಿಲ್ಜಿತ್ ದೋಸಾಂಜ್
- ಸಿಖ್ ನರಮೇಧದ ಕಥೆಯುಳ್ಳ ದಿಲ್ಜಿತ್ ದೋಸಾಂಜ್ ನಟನೆಯ 'ಸತ್ಲಜ್' ಸಿನಿಮಾ
- ಜೀ5 ಓಟಿಟಿಯಲ್ಲಿ ಬಿಡುಗಡೆಯಾದ ಎರಡೇ ದಿನಕ್ಕೆ ಸಿನಿಮಾ ಕಣ್ಮರೆ
- ಇದು ನಮ್ಮ ಯುದ್ಧ ನಾವೇ ಹೋರಾಡುತ್ತೆವೆ; ಯಾರ ಬೆಂಬಲವೂ ಬೇಡ: ದಿಲ್ಜಿತ್ ದೋಸಾಂಜ್
ಮುಂಬೈ: ಸಂಗೀತ ನಿರ್ದೇಶಕ, ಗಾಯಕ ಹಾಗೂ ನಟ ದಿಲ್ಜಿತ್ ದೋಸಾಂಜ್ ಅವರ ಬಹನೀರಿಕ್ಷಿತ ಸಿನಿಮಾ ಸತ್ಲಜ್ ಇತ್ತೀಚೆಗೆ ಜೀ5 ಓಟಿಟಿಯಲ್ಲಿ ಬಿಡುಗಡೆಯಾಗಿ ಈಗ ಮತ್ತೆ ಕಣ್ಮರೆಯಾಗಿದೆ. ಈ ಸಿನಿಮಾದಲ್ಲಿ ಸಿಖ್ರ ನರಮೇಧದ ಕುರಿತು ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ಬೆಳಕನ್ನು ಚೆಲ್ಲಿರುವ ಕಾರಣ ಈ ಸಿನಿಮಾದ ಬಿಡುಗಡೆಗೆ ತಡೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಈಗ ಇದರ ಕುರಿತು ನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ದಿಲ್ಜಿತ್ ದೋಸಾಂಜ್ (Diljit Dosanjh on Satluj Ban) ಮನಬಿಚ್ಚಿ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇದು ನಮ್ಮ ಹೋರಾಟದ ಕತೆ!
ಈ ಸತ್ಲಜ್ ಸಿನಿಮಾಗೆ ಮೊದಲು ಪಂಜಾಬ್ 95 ಎಂದು ಹೆಸರನ್ನು ಇಡಲಾಗಿತ್ತು. ಅಂದರೆ ಈ ಸಿನಿಮಾದಲ್ಲಿ 1995 ರಲ್ಲಿ ಪಂಜಾಬ್ನಲ್ಲಿ ನಡೆದಿದೆ ಎನ್ನಲಾದ ಸಿಖ್ ಸಮುದಾಯದ ಹತ್ಯಾಕಾಂಡದ ಬಗ್ಗೆ ಈ ಸಿನಿಮಾ ಕೇಂದ್ರಿಕೃತವಾಗಿತ್ತು. ಆದರೆ ಇದಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆ ಸಿನಿಮಾಗೆ ಸತ್ಲಜ್ ಎಂದು ಮರುನಾಮಕರಣ ಮಾಡಲಾಯಿತು. ಈಗ ನಿಸಿಮಾ ಓಟಿಟಿಯಲ್ಲಿ ತೆರೆಕಂಡ ಎರಡೇ ದಿನಗಳಲ್ಲಿ ಪ್ರಸಾರ ನಿಲ್ಲಿಸಿದ ಬಗ್ಗೆ ದಿಲ್ಜಿತ್ ದೋಸಾಂಜ್ ಇಂದು (ಸೋಮವಾರ, ಜು.6) ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದು ಒಂದಿಷ್ಟು ಸಮಯ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ನನ್ನ ಈ ಸಿನಿಮಾ ಓಟಿಟಿಯಿಂದ ತೆಗೆದುಹಾಕಲಾಗಿದೆ ಎಂಬ ಮಾಹಿತಿ ನನಗೆ ಈಗತಾನೆ ಗೊತ್ತಾಯಿತು. ಆದರೆ ಈ ಸಿನಿಮಾ ಯಾವುದೇ ಕಟ್ಟುಕತೆಯಲ್ಲ, ನನ್ನ ಸಮುದಾಯದ ಜನ ಇಷ್ಟು ವರ್ಷಗಳವರೆಗೆ ಅನುಭವಿಸಿದ ಕಷ್ಟವನ್ನು ಇಲ್ಲಿ ತೋರಿಸಲಾಗಿದೆ. ಆದರೆ ಈ ಸಿನಿಮಾ ಬ್ಯಾನ್ ಆದರೂ ಜನ ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಜನ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದಾರೆ. ಇದರಲ್ಲೇ ನನ್ನ ಸಿನಿಮಾ ಗೆದ್ದಿದೆ, ಜನರನ್ನು ತಲುಪಿದೆ ಎಂದು ಭಾವಿಸುತ್ತೆನೆಂದು ದಿಲ್ಜಿತ್ ಹೇಳಿದ್ದಾರೆ.
ನನಗೆ ಯಾರ ಬೆಂಬಲವೂ ಬೇಡ!
ಈ ಸಿನಿಮಾವನ್ನು ತೆರೆಮೇಲೆ ತರಲು ನಾನು ಕಳೆದ ಮೂರು-ನಾಲ್ಕು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದೆನೆ. ಆದರೆ ನಾನು, ನನಗೆ ಸಹಾಯ ಮಾಡಿ ಎಂದು ಬಾಲಿವುಡ್ ಅಥವಾ ನನ್ನ ಪಂಜಾಬ್ ಇಂಡಸ್ಟ್ರಿಯಲ್ಲಿ ಕೇಳಿಕೊಂಡಿಲ್ಲ. ನನಗೆ ಯಾರ ಸಹಾಯದ ಅಗತ್ಯವಿಲ್ಲ, ನಮ್ಮ ಯುದ್ಧವನ್ನು ನಾವೇ ಮಾಡಬೇಕು, ನಮ್ಮ ಜೊತೆ ನಿಲ್ಲುವ ಮನಸ್ಸಿದ್ದರೆ ನಿಲ್ಲಲಿ, ಇಲ್ಲದಿದ್ದರೆ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
https://youtube.com/shorts/T8hpgSsSDPQ?si=4GC8e3XF3madEJeK
ಥಿಯೇಟರ್ನಲ್ಲಿ ಈ ಸಿನಿಮಾ ಬಿಡುಗಡೆ ಸಾಧ್ಯವಾಗದಿದ್ದಾಗ ನಾನು ಕಷ್ಟಪಟ್ಟು ಓಟಿಟಿಯಲ್ಲಿ ಬಿಡುಗಡೆ ಮಾಡಿಸಿದೆ. ಆದರೆ ಈಗ ಎರಡೇ ದಿನದಲ್ಲಿ ಅದನ್ನು ತೆಗೆದುಹಾಕಿದ್ದಾರೆ. ಆದರೆ ಈ ಸಿನಿಮಾವನ್ನು ವೀಕ್ಷಿಸಿದ ಹಾಗೂ ಆಫ್ಲೈನ್ ಡೌಲ್ನೋಡ್ ಮಾಡಿಕೊಂಡ ಬಳಕೆದಾರರು ತಮ್ಮ ಸುತ್ತಲಿನ ಜನರಿಗೆ ಹಂಚಿಕೆ ಮಾಡುತ್ತಿದ್ದಾರೆ. ಅಂತೂ ನನ್ನ ಸಿನಿಮಾ ನನ್ನ ಜನರಿಗೆ ತಲುಪಿದೆ ಎನ್ನುವುದೇ ನನಗೆ ಸಮಾಧಾನ ಎಂದು ದಿಲ್ಜಿತ್ ಹೇಳಿದ್ದಾರೆ.
ಜನರನ್ನು ಸಿನಿಮಾ ನೋಡದಂತೆ ತಡೆಯಲು ಸಾಧ್ಯವಿಲ್ಲ!
ನನ್ನ ಸಿನಿಮಾವನ್ನು ಥಿಯೇಟರ್ನಲ್ಲಿ ಬಿಡುಗಡೆ ಆಗದಂತೆ ತಡೆಯಲಾಯಿತು. ಆದರೆ ಒಂದು ಸಾರಿ ಓಟಿಟಿಯಲ್ಲಿ ಬಿಡುಗಡೆಯಾಗಿ ಜನ ಡೌಲ್ನೋಡ್ ಮಾಡಿಕೊಂಡ ಮೇಲೆ ಅವರು ತಮಗೆ ಬೇಕಾದ ವೇದಿಕೆಯಲ್ಲಿ ಹಂಚಿಕೊಳ್ಳುತ್ತಾರೆ. ಹೀಗಾಗಿ ನಮ್ಮ ಸತ್ಲಜ್ ಸಿನಿಮಾವನ್ನು ಜನರಿಂದ ದೂರವಿಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ದಿಲ್ಜಿತ್ ಹೇಳಿದ್ದಾರೆ, (ಏಜನ್ಸೀಸ್).