ಚಿತ್ರ Instagram 
ಬಾಲಿವುಡ್

ಅಂತ್ಯವಿಲ್ಲದ ಪ್ರೀತಿ ಇರಲಿ: ಹೃತಿಕ್-ಸಬಾ ಪ್ರೇಮಕ್ಕೆ ಮಾಜಿ ಪತ್ನಿ ಸುಸೇನ್ ಖಾನ್ ಹಾರೈಕೆ! Sussanne Khan

ಮುಂಬೈ: ಬಾಲಿವುಡ್‌ನ ನಟ ಹೃತಿಕ್ ರೋಷನ್ ಮತ್ತು ಅವರ ಮಾಜಿ ಪತ್ನಿ ಸುಸೇನ್ ಖಾನ್ (Sussanne Khan) ತಮ್ಮ ವಿಚ್ಛೇದನದ ನಂತರ ಅವರ ಭಾಂದವ್ಯವನ್ನು ಮುಂದುವರೆಸುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಹೃತಿಕ್​ ಅವರ ಗೆಳತಿ ಸಬಾ ಆಜಾದ್​ ಹುಟ್ಟು ಹಬ್ಬದ ದಿನದಂದು ಸುಸೇನ್ ಹಂಚಿಕೊಂಡಿರುವ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸುಸೇನ್ ಖಾನ್ ಅವರ ಪೋಸ್ಟ್‌ನಲ್ಲಿ ಏನಿದೆ?

ಸಬಾ ಆಜಾದ್ ಅವರ ಜನ್ಮದಿನದಂದು ಸುಸೇನ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹೃತಿಕ್​ ಮತ್ತು ಸಬಾ ಒಟ್ಟಿಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಂತರ , ಈ ಫೋಟೋಗೆ ಅವರು, ಹುಟ್ಟುಹಬ್ಬದ ಶುಭಾಶಯಗಳು ಸಬಾ... ನಿಮಗೆ ಅಂತ್ಯವಿಲ್ಲದ ಪ್ರೀತಿ, ಶಾಂತಿ ಮತ್ತು ಸುಖ ಸದಾ ಇರಲಿ. ನೀನು ಎಂದಿಗೂ ನಮಗೆ ನಕ್ಷತ್ರಗಳ ತುಂಬಿದ ಆಕಾಶದಂತೆ ಮುಂದಿನ ದಿನಗಳಲ್ಲೂ ನಮ್ಮ ಕುಟುಂಬ ಮತ್ತು ಹೃದಯದ ನಡುವಿನ ಈ ಸುಂದರ ಸಂಬಂಧ ಹೀಗೆಯೇ ಮುಂದುವರಿಯಲಿ ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.
ಇತ್ತೀಚೆಗೆ (ಜ.10) ರಂದು ಹೃತಿಕ್ 52 ನೇ ವರ್ಷಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ಅವರು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಇರುವಂತಹ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ದೀರ್ಘವಾದ ಟಿಪ್ಪಣಿಯೊಂದನ್ನು ಬರೆದಿದ್ದಾರೆ.
ನನ್ನ ಕುಟುಂಬಕ್ಕೆ, ನನ್ನ ಸ್ನೇಹಿತರಿಗೆ, ನನ್ನ ಅಭಿಮಾನಿಗಳಿಗೆ, ನನಗೆ ಸಂದೇಶ ಕಳುಹಿಸಲು, ನನಗೆ ಕರೆ ಮಾಡಲು ಪ್ರಯತ್ನಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ಆದಾಗ್ಯೂ, ಈ ಭೂಮಿ ಎಂಬ ಬಂಡೆಯ ಮೇಲೆ, ನಿಮ್ಮೆಲ್ಲರ ಜೊತೆಗೆ ಈ ಜಗತ್ತನ್ನು ಹಂಚಿಕೊಳ್ಳುತ್ತಿರುವುದು ಒಂದು ದೊಡ್ಡ ಗೌರವ ಮತ್ತು ಸೌಭಾಗ್ಯ ಎಂದು ಅವರು ಬರೆದು ಪೋಸ್ಟ್ ಮಾಡಿದ್ದಾರೆ.

ಹೃತಿಕ್​ ಅವರ ಮುಂಬರುವ ಚಿತ್ರ!

ಯಶ್ ರಾಜ್ ಫಿಲ್ಮ್ಸ್‌ನ (YRF) 'ಸ್ಪೈ ಯೂನಿವರ್ಸ್'ನ ಭಾಗವಾಗಿರುವ ವಾರ್​ 2 ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆಗೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ (ಏಜೆನ್ಸೀಸ್​).