Konkona Sensharma 
ಬಾಲಿವುಡ್

46 ನೇ ವಯಸ್ಸಿನಲ್ಲೂ ಫಿಟ್​ ಆಗಿ ಕಾಣಬೇಕೆ..? ಕೊಂಕಣ ಸೇನ್ ಶರ್ಮಾ ಅವರ ಸಲಹೆಯನ್ನೊಮ್ಮೆ ಪಾಲಿಸಿ ನೋಡಿ Konkona Sensharma

Konkona Sensharma: ನಟಿ ಕೊಂಕಣ ಸೇನ್ ಶರ್ಮಾ ಅವರು ಫಿಟ್ನೆಸ್, ಆರೋಗ್ಯ ಮತ್ತು ಆಹಾರ ಪದ್ಧತಿಯ ಬಗ್ಗೆ ತಮ್ಮ ವಿಕಸನಗೊಳ್ಳುತ್ತಿರುವ ವಿಧಾನದ ಕುರಿತು ಕೆಲವೊಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಟಿ ತಮ್ಮ ಜೀವನಶೈಲಿಯು ವರ್ಷಗಳಲ್ಲಿ ಹೇಗೆ ಬದಲಾಗಿದೆ ಎಂಬುದರ ಕುರಿತು ಮಾತನಾಡಿದ್ದು, ಯೌವನದಲ್ಲಿ ಏನನ್ನೂ ಮಾಡದೇ ಇರುವುದರಿಂದ 30-40 ರ ವಯಸ್ಸಿನಲ್ಲಿ ಯೋಗ, ಶಕ್ತಿ ತರಬೇತಿ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.
ಕೊಂಕಣ ಅವರು ತನ್ನ ಯೌವನದಲ್ಲಿ ಫಿಟ್ನೆಸ್ ಬಗ್ಗೆ ಹೆಚ್ಚು ಗಮನಹರಿಸಲಿಲ್ಲ ಎಂದು ಬಹಿರಂಗಪಡಿಸಿದರು. ದೀರ್ಘಕಾಲದವರೆಗೆ, ನನಗೆ ಸುಮಾರು 30 ವರ್ಷ ವಯಸ್ಸಾಗುವವರೆಗೆ, ನಾನು ಏನನ್ನೂ ಮಾಡಲಿಲ್ಲ. ಅದರ ಬಗ್ಗೆ ನನಗೆ ಹೆಚ್ಚಿನ ಅರಿವು ಕೂಡ ಇರಲಿಲ್ಲ ಎಂದು ಹೇಳಿದರು.
30ರ ದಶಕದ ಆರಂಭದಲ್ಲಿ ತಾಯಿಯಾದ ನಂತರ ನನ್ನ ಪರಿಸ್ಥಿತಿ ಬದಲಾಯಿತು. ಆ ಸಮಯದಲ್ಲಿ ನನಗೆ ಒಬ್ಬ ಮಗ ಜನಿಸಿದನು. ತಾಯಿಯಾದ ಬಳಿಕ ನಾನು ಯೋಗದಲ್ಲಿ ದೊಡ್ಡ ಪ್ರಮಾಣದಲ್ಲಿ ತೊಡಗಿಕೊಂಡೆ. ನಾನು 10-12 ವರ್ಷಗಳಿಂದ ಯೋಗ ಮಾಡುತ್ತಿದ್ದೇನೆ. ಅದರ ನಂತರ, ನನ್ನ 40ರ ದಶಕದಲ್ಲಿ, ನಾನು ಬಲ ತರಬೇತಿಯನ್ನು ಪ್ರಾರಂಭಿಸಿದ್ದೇನೆ. ಇದು ನಿಜವಾಗಿಯೂ ನನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಅದ್ಭುತ ರೀತಿಯಲ್ಲಿ ಬದಲಾಯಿಸಿವೆ ಎಂದರು.
ಪ್ರತಿ ವಾರ ಯೋಗ ಮತ್ತು ಶಕ್ತಿ ತರಬೇತಿಯನ್ನು ಸಮತೋಲನಗೊಳಿಸುವುದು ಕಷ್ಟಕರವಾಗಬಹುದು. ಆದರೆ, ಇದು ನನ್ನ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಇದು ತೂಕ ಇಳಿಸುವ ಬಗ್ಗೆ ಅಲ್ಲ. ಬದಲಿಗೆ ಸ್ನಾಯುಗಳನ್ನು ಬಲವಾಗಿಡುವುದು, ಮೆದುಳಿಗೆ, ಚಲನಶೀಲತೆ, ಚುರುಕುತನ ಮತ್ತು ಸಮತೋಲನಕ್ಕೆ ಒಳ್ಳೆಯದು. ಹಾಗೆಯೇ ಜನರು ತೂಕ ಇಳಿಸಿಕೊಳ್ಳಲು ಆಸಕ್ತಿ ಹೊಂದಿದ್ದರೆ, ನಿಜವಾಗಿಯೂ 80-85 ಪ್ರತಿಶತದಷ್ಟು ಆಹಾರಕ್ರಮವಾಗಿದೆ ಎಂದು ತಿಳಿಸಿದರು.
ತಮ್ಮ ಆಹಾರ ಪದ್ಧತಿಯ ಬಗ್ಗೆ ಮಾತನಾಡಿದ ಕೊಂಕಣ, ಇತ್ತೀಚಿನ ವರ್ಷಗಳಲ್ಲಿ ತಮ್ಮ ಆಹಾರಕ್ರಮವು ಹೆಚ್ಚು ಪೌಷ್ಟಿಕಾಂಶಗಳಿಂದ ಕೂಡಿದೆ ಎಂದರು. ಇಲ್ಲಿಯವರೆಗೂ ನಾನು ಎಂದಿಗೂ ಇಷ್ಟು ಆರೋಗ್ಯಕರವಾದ ಆಹಾರವನ್ನು ಸೇವಿಸಿಲ್ಲ. ಶಕ್ತಿ ತರಬೇತಿ, ಮೆಗ್ನೀಸಿಯಮ್ ಇತ್ಯಾದಿಗಳ ಪ್ರಯೋಜನಗಳ ಬಗ್ಗೆ ನನಗೆ ಈಗ ಹೆಚ್ಚು ಅರಿವಾಗಿದೆ. ಹಾಗಾಗಿ ನಾನು ಹೆಚ್ಚು ಹೆಚ್ಚಾಗಿ ಪ್ರೋಟೀನ್ ಸೇವನೆಯೊಂದಿಗೆ ಸೇವಿಸುತ್ತಿದ್ದೇನೆ. ಇದರ ಜೊತೆಗೆ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಕೂಡ ಸೇವಿಸುತ್ತೇನೆ ಎಂದರು.
ಪ್ರತಿನಿತ್ಯ ಆಹಾರ ಸೇವನೆಯ ಜೊತೆಗೆ ಬೀಜಗಳು, ಚಿಯಾ ಬೀಜಗಳು, ಅಗಸೆಬೀಜದ ಪುಡಿ, ಆ ರೀತಿಯ ವಸ್ತುಗಳು ಇರುವ ಹಣ್ಣುಗಳಿವೆ.
ಕೊಂಕಣ ವೈಯಕ್ತಿಕವಾಗಿ ಮಧ್ಯಂತರ ಉಪವಾಸವನ್ನು ಮಾಡುತ್ತಾರಂತೆ. ಆದರೆ ಇದನ್ನು ಎಲ್ಲರಿಗೂ ಶಿಫಾರಸ್ಸು ಮಾಡಲು ಹೇಳುವುದಿಲ್ಲ ಎಂದಿದ್ದಾರೆ. ನಾನು ಮಧ್ಯಂತರ ಉಪವಾಸವನ್ನು ಸಹ ಮಾಡುತ್ತೇನೆ. ಇದು ನನಗೆ ವೈಯಕ್ತಿಕವಾಗಿ ತುಂಬಾ ಸಹಾಯಕವಾಗಿದೆ ಎಂದು ನಾನು ಕಂಡುಕೊಂಡಿದ್ದೇನೆ. ನಾನು ತುಂಬಾ ಕಷ್ಟವಿರುವಂತಹ ಕೆಲಸವನ್ನು ಮಾಡುವುದಿಲ್ಲ. ಹೆಚ್ಚಾಗಿ ವಾರಕ್ಕೆ ನಾಲ್ಕರಿಂದ ಐದು ಬಾರಿ 14 ಗಂಟೆಗಳ ಉಪವಾಸವನ್ನು ಮಾಡುತ್ತೇನೆ. ನಾನು ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗದೇ ಇರುವಾಗ 12 ಗಂಟೆಗಳ ಉಪವಾಸವನ್ನು ಮಾಡುತ್ತೇನೆ ಇದು ಜೀರ್ಣಕ್ರಿಯೆಯ ಅಂತರವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ ಎಂದರು.
ಉಪವಾಸ ಮಾಡುವಾಗ ವ್ಯಾಯಾಮ ಮಾಡುವುದು ನನಗೆ ಇಷ್ಟ ಎಂದು ನಟಿ ಹೇಳಿದರು. ನನಗೆ ತುಂಬಾ ಹೆಚ್ಚಿನ ಶಕ್ತಿ ಇದೆ. ಅದು ನನಗೆ ಕೆಲಸ ಮಾಡುತ್ತದೆ. ನಾನು ಯಾರಿಗೂ ಸಲಹೆಯನ್ನು ನೀಡುವುದಿಲ್ಲ ಎಂದರು. ನಾನು ಹೆಚ್ಚಿನ ಸಮಯ ಉಪವಾಸ ವ್ಯಾಯಾಮ ಮಾಡುತ್ತೇನೆ. ಹಾಗಾಗಿ ಹೆಚ್ಚು ಬಲಶಾಲಿಯಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.