ಚಿತ್ರ Instagram 
ಬಾಲಿವುಡ್

ಇದು ಮೊದಲೇ ಸಿಗಬೇಕಿತ್ತು: ಪತಿ ಧರ್ಮೇಂದ್ರಗೆ ಸಂದ ಗೌರವದ ಬಗ್ಗೆ ಹೇಮಾ ಮಾಲಿನಿ ಭಾವುಕ ನುಡಿ Hema Malini

ಪ್ರಮುಖ ಮುಖ್ಯಾಂಶಗಳು

  • ನಟ ಧರ್ಮೇಂದ್ರ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದ ಸರ್ಕಾರ
  • ಈ ಮನ್ನಣೆ ಅವರಿಗೆ ಮೊದಲೇ ಸಿಗಬೇಕಿತ್ತು, ಆದರೆ ತಡವಾಗಿದೆ ಎಂದು ಅಭಿಪ್ರಾಯ ಸೂಚಿಸಿದ ಪತ್ನಿ ಹೇಮಾ ಮಾಲಿನಿ
  • ಈ ಪ್ರಶಸ್ತಿಯು ಕೇವಲ ಒಂದು ಕುಟುಂಬಕ್ಕೆ ಸೀಮಿತವಾದುದ್ದಲ್ಲ, ಧರ್ಮೇಂದ್ರ ಅವರನ್ನು ಪ್ರೀತಿಸುವ ಕೋಟ್ಯಾಂತರ ಅಭಿಮಾನಿಗಳ ಗೆಲುವು
Hema Malini: ನಟ ಧರ್ಮೇಂದ್ರ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದಕ್ಕೆ ಸಂತೋಷ ವ್ಯಕ್ತಪಡಿಸಿರುವ ಅವರ ಪತ್ನಿ ನಟಿ ಹೇಮಾ ಮಾಲಿನಿ, ಈ ಮನ್ನಣೆ ಅವರಿಗೆ ಮೊದಲೇ ಸಿಗಬೇಕಿತ್ತು, ಆದರೆ ತಡವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮರೊಂದಿಗೆ ಮಾತನಾಡಿದ ಹೇಮಾಮಾಲಿನಿ, ಈ ಪ್ರಶಸ್ತಿಯು ಕೇವಲ ಒಂದು ಕುಟುಂಬಕ್ಕೆ ಸೀಮಿತವಾದುದ್ದಲ್ಲ, ಧರ್ಮೇಂದ್ರ ಅವರನ್ನು ಪ್ರೀತಿಸುವ ಕೋಟ್ಯಾಂತರ ಅಭಿಮಾನಿಗಳ ಗೆಲುವು ಎಂದರು.
ಧರ್ಮೇಂದ್ರ ಅವರು ಬದುಕಿದ್ದಾಗಲೇ ಈ ಗೌರವ ದೊರೆತಿದ್ದರೆ ಸಾಧನೆಗೆ ಸಿಕ್ಕ ಮನ್ನಣೆಯನ್ನು ನೋಡಿ ಅವ ಆನಂದಕ್ಕೆ ಪಾರವೇ ಇರುತ್ತಿರಲಿಲ್ಲ. ಅದೇ ರೀತಿ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟ ಈ ಉನ್ನತ ಗೌರವ ಪಡೆಯುವುದನ್ನು ನೋಡುವ ಸೌಭಾಗ್ಯದಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.
ಪದ್ಮವಿಭೂಷಣ ಪ್ರಶಸ್ತಿ ಘೋಷಿಸುವ ಮೂಲಕ ಧರ್ಮೇಂದ್ರ ಅವರು ಚಲನಚಿತ್ರೋದ್ಯಮಕ್ಕೆ ನೀಡಿದ ಅಪಾರ ಕೊಡುಗೆಯನ್ನು ಸರ್ಕಾರ ಗುರುತಿಸಿದೆ. ಈ ವಿಚಾರ ತಿಳಿದ ಬಳಿಕ ತುಂಬಾ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.
ಧರ್ಮೇಂದ್ರ ಅವರಿಗೆ ಘೋಷಿಸಲಾದ ಮರಣೋತ್ತರ ಪದ್ಮವಿಭೂಷಣ ಗೌರವವು ಅವರ ಆರು ದಶಕಗಳ ಅದ್ವಿತೀಯ ಕಲಾ ಸೇವೆಯನ್ನು ಸ್ಮರಿಸುತ್ತದೆ. ಕೇಂದ್ರ ಗೃಹ ಸಚಿವಾಲಯವು 2026ರ ಗಣರಾಜ್ಯೋತ್ಸವದ ಮುನ್ನಾ ದಿನದಂದು ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಘೋಷಿಸಿತ್ತು. ಇದರಲ್ಲಿ ಧಮೇಂದ್ರ ಅವರ ಹೆಸರು ಪದ್ಮವಿಭೂಷಣ ಪಟ್ಟಿಯಲ್ಲಿ ಕಂಡುಬಂದಿದೆ.

ಬಾಲಿವುಡ್​ ಹೀಮ್ಯಾನ್​ ನಿಧನ

ಹಿರಿಯ ನಟ ಧರ್ಮೇಂದ್ರ ಅವರು ಕೆಲವು ತಿಂಗಳುಗಳ ಹಿಂದೆ ಭಾರೀ ಅನಾರೋಗ್ಯದಿಂದ ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಬಳಿಕ ಮನೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ನವೆಂಬರ್ 24 ರಂದು ತಮ್ಮ 89 ನೇ ವಯಸ್ಸಿನಲ್ಲಿ ನಿಧನರಾದರು. ತಮ್ಮ ಇಬ್ಬರು ಪತ್ನಿಯರಾದ ಪ್ರಕಾಶ್ ಕೌರ್ ಮತ್ತು ಹೇಮಾ ಮಾಲಿನಿ ಮತ್ತು ಸನ್ನಿ ಡಿಯೋಲ್, ಬಾಬಿ ಡಿಯೋಲ್ ಮತ್ತು ಇಶಾ ಡಿಯೋಲ್ ಸೇರಿದಂತೆ ಆರು ಮಕ್ಕಳನ್ನು ಅಗಲಿದ್ದಾರೆ. ಅವರ ಅಗಲಿಕೆಯ ನಂತರ ಅನೇಕ ಸೆಲೆಬ್ರಿಟಿಗಳು ಅವರಿಗೆ ಸಂತಾಪ ಸೂಚಿಸಿದರು (ಏಜೆನ್ಸೀಸ್​).