ನಟಿ ಹನ್ಸಿಕಾ ಮೋಟ್ವಾನಿ  
ಬಾಲಿವುಡ್

ನನ್ನ ಮುಖಕ್ಕೆ... ಡಿವೋರ್ಸ್​ ಬೆನ್ನಲ್ಲೇ ಮತ್ತೊಂದು ಶಾಕಿಂಗ್​ ವಿಚಾರಕ್ಕೆ ಸ್ಪಷ್ಟನೆ ಕೊಟ್ಟ ನಟಿ ಹನ್ಸಿಕಾ ಮೋಟ್ವಾನಿ

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗಷ್ಟೇ ಪತಿ ಸೊಹೇಲ್ ಖತುರಿಯಾ ಜೊತೆಗಿನ ದಾಂಪತ್ಯಕ್ಕೆ ಗುಡ್​ಬೈ
  • ಡಿವೋರ್ಸ್​ ಬಳಿಕ ಮತ್ತೊಂದು ವಿಚಾರಕ್ಕೆ ಸ್ಪಷ್ಟನೆ ಕೊಟ್ಟ ನಟಿ
  • ಇಂಜೆಕ್ಷನ್​ ತೆಗೆದುಕೊಳ್ಳುತ್ತಿದ್ದರು ಎಂಬ ಆರೋಪಕ್ಕೆ ಹನ್ಸಿಕಾ ಖಡಕ್ ಉತ್ತರ
ಮುಂಬೈ: ಇತ್ತೀಚೆಗಷ್ಟೇ ಪತಿ ಸೊಹೇಲ್ ಖತುರಿಯಾ ಜೊತೆಗಿನ ದಾಂಪತ್ಯವನ್ನು ಮುರಿದುಕೊಂಡ ಬಾಲಿವುಡ್​ ನಟಿ ಹನ್ಸಿಕಾ ಮೋಟ್ವಾನಿ ಈಗ ಮತ್ತೊಂದು ಹಳೆಯ ವಿವಾದಕ್ಕೆ ಪ್ರತಿಕ್ರಿಯಿಸುವ ಮೂಲಕ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. 
ಬಾಲ್ಯದಲ್ಲೇ 'ದೇಶಮುದುರು' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಹನ್ಸಿಕಾ, ಚಿಕ್ಕ ವಯಸ್ಸಿಗೆ ಬಣ್ಣ ಹಚ್ಚಿದ ಬ್ಯೂಟಿ. ತನ್ನ ನೋಟ​ ಮತ್ತು ಅಭಿನಯದ ಮೂಲಕ ಸಾಲು ಸಾಲು ಸಿನಿಮಾಗಳ ಅವಕಾಶ ಪಡೆದುಕೊಂಡ ನಟಿ, ದಾಂಪತ್ಯದ ಬಳಿಕ ಚಿತ್ರರಂಗದಿಂದ ದೂರ ಉಳಿದರು. ಆದರೆ, ಅವರ ಬಗ್ಗೆಗಿನ ಒಂದು ಆರೋಪ ಮತ್ತು ವದಂತಿಗಳು ಬಹಳ ಹಿಂದಿನಿಂದಲೂ ಹಾಗೆಯೇ ಇದೆ. ಈ ಕುರಿತು ಕಡೆಗೂ ಹನ್ಸಿಕಾ ತುಟಿ ಬಿಚ್ಚಿದ್ದಾರೆ.
16ನೇ ವಯಸ್ಸಿನಲ್ಲಿ ವೇಗವಾಗಿ ದೇಹದ ಬೆಳವಣಿಗೆಗೆ ಹನ್ಸಿಕಾ ಹಾರ್ಮೋನ್ ಇಂಜೆಕ್ಷನ್‌ಗಳನ್ನು ಬಳಸುತ್ತಿದ್ದರು ಮತ್ತು ಅವರ ತಾಯಿ ಆ ಇಂಜೆಕ್ಷನ್‌ಗಳನ್ನು ನೀಡುತ್ತಿದ್ದರು ಎಂಬ ವದಂತಿಗಳು ಹರಿದಾಡಿದ್ದವು. ಇದಕ್ಕೆ ಉತ್ತರಿಸಿದ ನಟಿ, ಮಾಧ್ಯಮಗಳು ಹೆಚ್ಚಾಗಿ ಗಮನಕ್ಕೆ ಬಾರದ ವಿಷಯಗಳನ್ನು ಸೃಷ್ಟಿಸುತ್ತವೆ. ಅಸಲಿಗೆ, ನಾನು ಬಾಲ್ಯದಿಂದಲೂ ಇಂಜೆಕ್ಷನ್‌ಗಳನ್ನು ಕಂಡರೆ ಭಯ ಪಡುತ್ತೇನೆ. ಈಗಲೂ ನನ್ನ ಆರೋಗ್ಯ ಸರಿಯಿಲ್ಲದಿದ್ದರೆ, ಇಂಜೆಕ್ಷನ್ ತೆಗೆದುಕೊಂಡರೆ ಅದು ಮಾಯುವವರೆಗೆ ಕಣ್ಣೀರಿಡುತ್ತೇನೆ ಎಂದಿದ್ದಾರೆ.

ನನ್ನ ಮುಖಕ್ಕೆ ಬೊಟಾಕ್ಸ್...

ನಾನು ದೇಹದ ಬೆಳವಣಿಗೆಗೆ ಹಾರ್ಮೋನ್​ಗಳನ್ನು ತೆಗೆದುಕೊಂಡಿದ್ದೇನೆ ಎಂಬ ಹೇಳಿಕೆ, ವದಂತಿಗಳು ಸಂಪೂರ್ಣ ಸುಳ್ಳು. ನನ್ನ ಮುಖಕ್ಕೆ ಬೊಟಾಕ್ಸ್ ಇಂಜೆಕ್ಷನ್ ಕೂಡ ಮಾಡಿಸಿಕೊಂಡಿದ್ದೇನೆ ಎಂದು ಹೇಳಲಾಗಿದೆ. ಅದು ಕೂಡ ಶುದ್ಧ ಸುಳ್ಳು. ನನ್ನ ಕಠಿಣ ಪರಿಶ್ರಮ ಮತ್ತು ನಟನೆಯಿಂದಲೇ ಹೆಚ್ಚೆಚ್ಚು ಅವಕಾಶಗಳು ನನಗೆ ಸಿಕ್ಕಿವೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).