- ಸಿದ್ಧಾರ್ಥ್ ಮತ್ತು ಕಿಯಾರಾ ಅಡ್ವಾಣಿ 2023 ರಲ್ಲಿ ವಿವಾಹವಾಗಿದ್ದರು
- 2025ರ ಜುಲೈ 15 ರಂದು ಇವರಿಗೆ ಹೆಣ್ಣು ಮಗು 'ಸಾರಾಯಾ ಮಲ್ಹೋತ್ರಾ' ಜನನ
- ನಾನು ಹೆಣ್ಣು ಮಗುವಿನ ತಂದೆ ಎಂದು ಕ್ಯೂಟ್ ಲುಕ್ ಕೊಟ್ಟ ಸಿದ್ದಾರ್ಥ್ ಮಲ್ಹೋತ್ರ
Sidharth Malhotra: ಪರಮ್ ಸುಂದರಿ, ಶೇರ್ ಶಾ. ಏಕ್ ವಿಲನ್ ಸಿನಿಮಾಗಳಿಂದ ಮಹಿಳೆಯರ ಮನ ಕದ್ದಿದ್ದ ಬಾಲಿವುಡ್‌ನ ಸ್ಟೈಲಿಶ್ ನಟ ಸಿದ್ಧಾರ್ಥ್ ಮಲ್ಹೋತ್ರ ಸದ್ಯ ಎಲ್ಲ ಅಮ್ಮಂದಿರ ಮನವನ್ನು ಗೆದ್ದುಕೊಂಡಿದ್ದಾರೆ. ಕಳೆದ ವರ್ಷ ಪತ್ನಿ ಕಿಯಾರಾ ಅಡ್ವಾಣಿ ಅವರೊಂದಿಗೆ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದ ಸಿದ್ಧಾರ್ಥ್, ಇದೀಗ ತಮ್ಮ ಮಗಳ ಜೊತೆಗಿನ ಆಪ್ತ ಕ್ಷಣವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ
ಬುಧವಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಸಿದ್ಧಾರ್ಥ್ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಬಿಳಿ ಬಣ್ಣದ ಕ್ಲಿಪ್ ತಲೆಗೆ ಹಾಕಿಕೊಂಡು, ಬಿಳಿ ಬಣ್ಣದ ಟೀ ಶರ್ಟ್ ಧರಿಸಿಕೊಂಡು ಮುಗುಳ್ನಕ್ಕು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮಗಳೊಂದಿಗೆ ಆಟವಾಡುವಾಗ ಆಕೆಯ ಆ ಕ್ಲಿಪ್ ಅನ್ನು ತಲೆಗೆ ಹಾಕಿರುವ ಆ ಕ್ಷಣವನ್ನು ಅವರು ಆನಂದಿಸಿದ್ದಾರೆ.
ನಾನು ಹೆಣ್ಮಗು ತಂದೆ
ಫೋಟೋಗೆ ನಾನೊಬ್ಬ ಹೆಣ್ಣು ಮಗುವಿನ ತಂದೆಯೆಂದು ಹೇಳೋದಿಲ್ಲ. ಆದರೆ, ಈ ಮೂಲಕ ನಾನು ಹೆಣ್ಣುಮಗುವಿನ ತಂದೆ ಎಂದು ಸಾಬೀತು ಪಡಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರು ಏನಂದ್ರು?
ಎಂತ ಅದ್ಭುತ ಲೈನ್ಸ್ ಮತ್ತು ಕ್ಯೂಟ್ ಪಿಕ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಹೆಣ್ಣು ಮಗು ಎಷ್ಟು ಮುದ್ದಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆಯಾಗಿ ಸಿದ್ಧಾರ್ಥ್ ಅವರ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಮಗಳೇ ನನ್ನ ಸ್ಟಾರ್
ಮಗಳೇ ಸುಪರ್ ಸ್ಟಾರ್ ಎನ್ನುವ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಿದ್ದಾರ್ಥ್, "ನನ್ನ ಮಗಳು ಸಾರಾಯಾ ಬಂದ ಮೇಲೆ ಮನೆಯ ಹೀರೋ ನಾನಲ್ಲ, ಅವಳೇ ಸುಪರ್ ಸ್ಟಾರ್. ಅವಳಿಗೆ ಈಗ ಮಾತು ಬರಲ್ಲ, ಆದರೂ ಅವಳ ಎದುರು ನಾನು ವಾದದಲ್ಲಿ ಸೋಲುತ್ತಿದ್ದೇನೆ ಎಂದು ಖುಷಿ ಹಂಚಿಕೊಂಡಿದ್ದರು
ಸಿದ್ಧಾರ್ಥ್ ಅವರು 2012ರಲ್ಲಿ 'ಸ್ಟೂಡೆಂಟ್ ಆಫ್ ದಿ ಇಯರ್' ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟರು. ಶೇರ್ ಶಾ, ಏಕ್ ವಿಲನ್ ಇವರಿಗೆ ಹೆಚ್ಚು ಹೆಸರು ತಂದುಕೊಟ್ಟ ಸಿನಿಮಾಗಳು. 2023ರಲ್ಲಿ ಇವರು ಕೈರಾ ಅಡ್ವಾನಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2025ರಲ್ಲಿ ಹೆಣ್ಣು ಮಗು 'ಸಾರಾಯಾ'ಳ ತಂದೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ, (ಏಜೆನ್ಸೀಸ್).