- ಶಾರುಖ್ ಖಾನ್ ಕಿಂಗ್ ಚಿತ್ರೀಕರಣದ ಸಮಯದಲ್ಲಿದ್ದಾಗ ಪುತ್ರ ಆರ್ಯನ್ ಖಾನ್ ಮಾದಕವಸ್ತು ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು.
- ಈ ವಿಚಾರದಿಂದ ಬಹಳ ಒತ್ತಡಕ್ಕೆ ಸಿಲುಕಿದ ಶಾರುಖ್ 3-4 ತಿಂಗಳು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಲಿಲ್ಲ
- ಈ ಸಮಯದಲ್ಲಿ ನಾನು ಶಾರುಖ್ ಅವರನ್ನು ತುಂಬಾ ಸಮಯ ನೋಡಲಿಲ್ಲ: ಗಿರಿಜಾ ಓಕ್
Shah Rukh Khan: ಬಾಲಿವುಡ್ ನಟ ಶಾರುಖ್ ಖಾನ್ ಕಿಂಗ್ ಚಿತ್ರೀಕರಣದ ಸಮಯದಲ್ಲಿದ್ದಾಗ ಪುತ್ರ ಆರ್ಯನ್ ಖಾನ್ ಮಾದಕವಸ್ತು ಪ್ರಕರಣದಲ್ಲಿ ಸಿಲುಕಿಕೊಂಡಿದ್ದು, ಈ ವಿಚಾರದಿಂದ ಬಹಳ ಒತ್ತಡಕ್ಕೆ ಸಿಲುಕಿದ ಶಾರುಖ್ 3-4 ತಿಂಗಳು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಲಿಲ್ಲ. ಹಾಗೆಯೇ ಜವಾನ್ಗಾಗಿ ಚಿತ್ರೀಕರಣ ಮಾಡಲಿಲ್ಲ ಎಂದು ನಟಿ ಗಿರಿಜಾ ಓಕ್ ಬಹಿರಂಗಪಡಿಸಿದ್ದಾರೆ.
ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂಭಾಷಣೆಯಲ್ಲಿ ಮಾತನಾಡಿದ ಗಿರಿಜಾ, ಈ ಘಟನೆಯಿಂದ ನಾನು ಶಾರುಖ್ ಅವರನ್ನು ತುಂಬಾ ಸಮಯ ನೋಡಲಿಲ್ಲ. ಆ ಸಮಯದಲ್ಲಿ ಅವರನ್ನು ಭೇಟಿಯಾಗಲು ಯಾರಿಗೂ ಅವಕಾಶ ಇರಲಿಲ್ಲ. ಸ್ವಲ್ಪ ದಿನಗಳ ನಂತರ ಶೂಟಿಂಗ್ನ್ನು ಪುನಾರಂಭಿಸಿದಾಗ ನಾನು ಅವರನ್ನು ಭೇಟಿಯಾದೆ. ಈ ಹೊತ್ತಿಗೆ ಬಹುತೇಕ ಪ್ರಕರಣ ಮುಗಿದುಹೋಗಿದ್ದು, ಅವರು ಮೊದಲಿನಂತೆ ಆಕರ್ಷಕವಾಗಿ ಕಾಣಿಸುತ್ತಿದ್ದರು ಎಂದರು.
ಶಾರುಖ್ ಖಾನ್ ತಮ್ಮ ವೈಯಕ್ತಿಕ ಜೀವನಲ್ಲಾದ ಘಟನೆಗಳನ್ನು ವೃತ್ತಿಪರ ಕೆಲಸಗಳ ಮೇಲೆ ಪರಿಣಾಮ ಬೀರಲು ಎಂದಿಗೂ ಬಿಡಲಿಲ್ಲ. ಹಾಗಾಗಿ ಇವರು ತಮ್ಮ ಕೆಲಸಗಳನ್ನು ತುಂಬಾ ಕಟ್ಟುನಿಟ್ಟಾಗಿ ನಿರ್ವಹಿಸುತ್ತಿದ್ದರು. ಇದು ವ್ಯಕ್ತಿ ತನ್ನ ಕೆಲಸದ ಮೇಲೆ ಇರುವ ಗೌರವ ಎಂದು ಶ್ಲಾಘಿಸಿದರು.
ಆರ್ಯನ್ ಖಾನ್ ವಿವಾದದ ನಂತರ ಜನರು ಅವರ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸಲು ಪ್ರಾರಂಭಿಸಿದರು. ಇದೆಲ್ಲವೂ ತುಂಬಾ ಕೆಟ್ಟದಾಗಿ ಕಾಣಿಸುತ್ತಿತ್ತು. ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದರೂ, ಅವರು ಯಾರ ಮೇಲೂ ಕೂಗಾಡುತ್ತಿರಲಿಲ್ಲ, ಶಾಂತಿ ಕಳೆದುಕೊಳ್ಳುತ್ತಿರಲಿಲ್ಲ. ಬದಲಾಗಿ ಸರಿಯಾದ ಸಮಯಕ್ಕೆ ಬಂದು ತಮ್ಮ ಪಾತ್ರಗಳಲ್ಲಿ ಚೆನ್ನಾಗಿ ಅಭಿನಯಿಸುತ್ತಿದ್ದರು ಎಂದು ಗಿರಿಜಾ ತಿಳಿಸಿದ್ದಾರೆ.
ಆರ್ಯನ್ ಖಾನ್ ಪ್ರಕರಣದ ಬಗ್ಗೆ
2021ರ ಅಕ್ಟೋಬರ್ 2 ರಂದು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮುಂಬೈ ಕಡಲ ತೀರದಲ್ಲಿ ಐಷಾರಾಮಿ ಕ್ರೂಸ್ ಶಿಪ್ ನಲ್ಲಿ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಗಳು ಹಡಗಿನ ಮೇಲೆ ದಾಳಿ ನಡೆಸಿ ಹಲವು ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡರು.
ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಒಂದು ದಿನದ ನಂತರ (ಅ. 03) ಆರ್ಯನ್ ಖಾನ್ , ಸ್ನೇಹಿತ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಸೇರಿದಂತೆ 20 ಜನರನ್ನು ಬಂಧಿಸಲಾಯಿತು. ಈ ಸಮಯದಲ್ಲಿ ಆರ್ಯನ್ ಬಳಿ ಡ್ರಗ್ಸ್ ಸಿಗಲಿಲ್ಲ. ಆದರೆ, ವಾಟ್ಸಾಪ್ ಚಾಟ್‌ಗಳು ಮತ್ತು ಸ್ನೇಹಿತರ ಬಳಿ ಸಿಕ್ಕ ಡ್ರಗ್ಸ್ ಆಧಾರದಲ್ಲಿ ಅಂತರರಾಷ್ಟ್ರೀಯ ಡ್ರಗ್ ಜಾಲಕ್ಕೆ ಸಂಪರ್ಕ ಎಂದು NCB ಆರೋಪ ಮಾಡಿತು.
ಈ ಘಟನೆ ನಡೆದ ನಂತರ ಆರ್ಯನ್ ಖಾನ್‌ಗೆ 25 ದಿನಗಳ ಕಾಲ ಜೈಲಿನಲ್ಲೇ ಕಾಲ ಕಳೆದರು. ಇದಾದ ನಂತರ ಮೇ 2022 ರಲ್ಲಿ, ಖಾನ್ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಡಲಾಯಿತು. ಆದಾಗ್ಯೂ, ಬ್ಲ್ಯಾಕ್‌ಮೇಲ್ ಆರೋಪದ ನಂತರ ವಾಂಖೆಡೆ ಅವರನ್ನು ಪ್ರಕರಣದಿಂದ ವಜಾಗೊಳಿಸಲಾಯಿತು (ಏಜೆನ್ಸೀಸ್).