ಗಿರಿಜಾ ಓಕ್ (Girija Oak) 
ಬಾಲಿವುಡ್

ನೀಲಿ ಸೀರೆ ಉಟ್ಟು ಮಿಂಚಿದ ಬೆಡಗಿಗೆ ಡೀಪ್‌ಫೇಕ್ ಭಯ: ಗಿರಿಜಾ ಓಕ್​ಗೆ ಬಂದ ಸಂದೇಶಗಳೇನು? Girija Oak

Girija Oak: ಇತ್ತೀಚೆಗೆ ನೀಲಿ ಸೀರೆಯುಟ್ಟು ಸಾಮಾಜಿಕ ಜಾಲತಾಣದಲ್ಲಿ ಹೊಸ ಕ್ರಶ್​ ಆಗಿ ಹೊರಹೊಮ್ಮಿದ್ದ ನಟಿ ಗಿರಿಜಾ ಓಕ್​ ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್​ ಆದ ನಂತರ ಆಕೆ ಅನುಭವಿಸಿದ ಲೈಂಗಿಕ ಹಿಂಸೆಗಳ ಬಗ್ಗೆ ಬಹಿರಂಗಪಡಿಸಿದ್ದಾರೆ.
ಎರಡು ದಶಕಗಳಿಗೂ ಹೆಚ್ಚು ಕಾಲ ನಟನೆಯಲ್ಲಿ ತೊಡಗಿರುವ ನಟಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನೀಲಿ ಸೀರೆ ಉಟ್ಟು ಕಾಣಿಸಿಕೊಂಡಿದ್ದರು. ಸಂದರ್ಶನದ ಚಿತ್ರಗಳು ಮತ್ತು ತುಣುಕುಗಳು ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಆಕೆಯ ಸೌಂದರ್ಯದ ಬಗ್ಗೆ ಇಂಟರ್ನೆಟ್​ ಗಮನ ಸೆಳೆಯಲು ಆರಂಭಿಸಿತು.
ಆದಾಗ್ಯೂ, ಅವರ ಹೊಸ ಖ್ಯಾತಿಯ ಜೊತೆಗೆ ಅವರ AI- ಮಾರ್ಫಿಂಗ್ ಮಾಡಿದ ಅಶ್ಲೀಲ ಫೋಟೋಗಳು ಸ್ವಲ್ಪ ಸಮಯದ ನಂತರ ಆನ್‌ಲೈನ್‌ನಲ್ಲಿ ಪ್ರಸಾರವಾಗಲು ಪ್ರಾರಂಭಿಸಿದವು. ಇದು ಗಿರಿಜಾ ಅವರನ್ನು ಆರಾಮಕ್ಕಿಂತಲೂ, ಹೆಚ್ಚು ಲೈಂಗಿಕವಾಗಿ ಕಿರುಕುಳ ನೀಡುವಂತೆ ಭಾಸವಾದವು ಎಂದು ಹೇಳಿದ್ದಾರೆ.
ಖ್ಯಾತಿಯ ಇನ್ನೊಂದು ಮುಖವೇ ಸಂಕಷ್ಟ. ಅದನ್ನು ಹೇಗೆ ನಿಭಾಯಿಸುತ್ತೀರಿ ಎಂದು ಕೇಳಿದಾಗ, ನಾನು ಸಿನಿಮಾ ರಂಗದಲ್ಲಿ 20-25 ವರ್ಷಗಳಿಂದ ನಟಿಸಲು ಪ್ರಾರಂಭಿಸಿದ್ದೇನೆ. ಕೆಲವು ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಬದಲಿಗೆ ಒಂದು ಚಿಟಿಕೆ ಉಪ್ಪು ಎಂದು ಪರಿಗಣಿಸುತ್ತೇನೆ ಎಂದು ಹೇಳಿದರು.
ಆದರೆ, ಈ ಬಾರಿ ನನಗೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದರೆ, ಅದು ಸುಳ್ಳು. ನಾನು ಕೂಡ ಸೂಕ್ಷ್ಮವಾದ ವ್ಯಕ್ತಿ, ಕಲ್ಲು ಹೃದಯದವಳಲ್ಲ ಇಂತಹ ವಿಚಾರಗಳು ನೋವುಂಟು ಮಾಡುತ್ತವೆ. ಅವುಗಳನ್ನೆಲ್ಲಾ ಬಿಟ್ಟು ನೀವು ಅದರ ಸುತ್ತಲೂ ನಿಮ್ಮ ತನವನ್ನು ಬಿಟ್ಟು ಕೊಡದೇ ಕೆಲಸ ಮಾಡಬೇಕು. ಕೆಲವೊಮ್ಮೆ ಪುರುಷರ ಸಂದೇಶಗಳು ನನಗೆ ಆಶ್ಚರ್ಯವನ್ನುಂಟು ಮಾಡಿದರೆ, ಇದು ತುಂಬಾ ತಮಾಷೆಯಾಗಿದೆ ಎಂದು ನಟಿ ತಿಳಿಸಿದ್ದಾರೆ.

ಗಿರಿಜಾ ಓಕ್ ಯಾರು?

ಗಿರಿಜಾ ಓಕ್  ಒಬ್ಬ ಪ್ರಸಿದ್ಧ ಭಾರತೀಯ ನಟಿ ಮತ್ತು ಉದ್ಯಮಿ. 1987 ರಲ್ಲಿ ರ ಡಿಸೆಂಬರ್ 27 ರಂದು ನಾಗಪುರದಲ್ಲಿ ಜನಿಸಿದರು. ಇವರು ಮರಾಠಿ ಮತ್ತು ಹಿಂದಿ ಸಿನಿಮಾ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ.
15 ನೇ ವರ್ಷದಲ್ಲಿದ್ದಾಗ ಮಾನಿನಿ ಚಿತ್ರದೊಂದಿಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಹಿಂದಿ ಸಿನಿಮಾಗಳಲ್ಲಿ ತಾರೆ ಜಮೀನ್ ಪಾರ್, ಶಾರ್ ಇನ್ ದಿ ಸಿಟಿ' ,ಜಾವಾನ್, ಕಲಾ, ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮರಾಠಿ ಚಿತ್ರಗಳಾದ 'ಚಿಂಗಿ', 'ಹುಪ್ಪ ಹುಯ್ಯಾ', 'ಬಾಜಿ', '2 ಪ್ರೇಮಿ ಪ್ರೇಮಾಚೆ'ಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ (ಏಜೆನ್ಸೀಸ್​).