- ಮುಂಬೈನಲ್ಲಿ ನಡೆದ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಅವರ 'ಒನ್ ಆಫ್ ಒನ್' ಟೂರ್ ಸಂಗೀತ ಕಾರ್ಯಕ್ರಮ
- ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ವೀರ್ ಪಹರಿಯಾ ಹಾಗೂ ಅವರ ಗೆಳತಿ ತಾರಾ ಸುತಾರಿಯಾ ಉಪಸ್ಥಿತಿ
- ಧಿಲ್ಲೋನ್, ತಾರಾರನ್ನು ವೇದಿಕೆಗೆ ಆಹ್ವಾನಿಸುತ್ತಿರುವ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್
Veer Pahariya: ಮುಂಬೈನಲ್ಲಿ ಶುಕ್ರವಾರ (ಡಿ.26) ರಾತ್ರಿ ನಡೆದ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಅವರ 'ಒನ್ ಆಫ್ ಒನ್' ಟೂರ್ ಸಂಗೀತ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ವೀರ್ ಪಹರಿಯಾ ಹಾಗೂ ಅವರ ಗೆಳತಿ ತಾರಾ ಸುತಾರಿಯಾ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಮಯದಲ್ಲಿ ಧಿಲ್ಲೋನ್, ತಾರಾರನ್ನು ವೇದಿಕೆಗೆ ಆಹ್ವಾನಿಸುತ್ತಿರುವ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಕಪ್ಪು ಬಣ್ಣದ ಬಟ್ಟೆ ತೊಟ್ಟಿದ್ದ ತಾರಾ ಸುತಾರಿಯಾ, ವೇದಿಕೆಯಲ್ಲಿ ಧಿಲ್ಲೋನ್ ಜೊತೆ ಸೇರಿ 'ಎಕ್ಸ್‌ಕ್ಯೂಸ್' ಹಾಡನ್ನು ಹಾಡುತ್ತಾ ಕೆನ್ನೆಗೆ ಮುತ್ತಿಟ್ಟು ನೃತ್ಯ ಮಾಡುತ್ತಿರುವುದನ್ನು ನಾವು ಕಾಣಬಹುದು. ಇತ್ತ ವೀರ್ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನಸೆಳೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದೇನು?
ಎಪಿ ಧಿಲ್ಲೋನ್ ಜೊತೆ ವೇದಿಕೆಗೆ ಬಂದಾಗ ವೀರ್ ಪಹರಿಯಾ ತನ್ನ ಗೆಳತಿ ತಾರಾಳನ್ನು ದಿಟ್ಟಿಸಿ ನೋಡುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಈ ವೇಳೆ ನಟಿ ಎಪಿಯ ಹಾಡುಗಳಿಗೆ ಲಿಪ್ ಸಿಂಕ್ ಮಾಡುತ್ತಿದ್ದಾರೆ. ಆದರೆ, ಅನೇಕ ಸಾಮಾಜಿಕ ಬಳಕೆದಾರರು ವೀರ್ ಪಹರಿಯಾ ತುಂಬಾ ಒತ್ತಡದಿಂದ ಕಾಣುತ್ತಿದ್ದಾರೆ ಎಂದು ಕಾಮೆಂಟ್ಗಳ ರಾಶಿಯನ್ನೇ ಹಾಕಿದ್ದಾರೆ.
ನೆಟಿಜನ್ ಪ್ರತಿಕ್ರಿಯೆ ಏನು?
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಅನೇಕ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ತಾರಾ ಹಾಗೂ ವೀರ್ ಪಹರಿಯಾ ಇಬ್ಬರೂ ಅನಾನುಕೂಲರಾಗಿ ಕಾಣುತ್ತಿದ್ದಾರೆ. ಎಪಿ ನಟಿಯಿಂದ ಅಂತರ ಕಾಯ್ದುಕೊಳ್ಳಬೇಕಿತ್ತು ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ ಎಪಿ ಧಿಲ್ಲೋನ್ ಅವಳ ಹತ್ತಿರ ಬರಲು ಪ್ರಯತ್ನಿಸುತ್ತಿರುವುದನ್ನು ನೋಡಿ ವೀರ್ಗೆ ಸ್ವಲ್ಪ ಮುಜುಗರ ತಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ತಾರಾ ಮತ್ತು ವೀರ್ ಸಂಬಂಧ
ಈ ವರ್ಷದ ಆಗಸ್ಟ್‌ನಲ್ಲಿ ತಾರಾ ಸುತಾರಿಯಾ ನಟ ವೀರ್ ಪಹರಿಯಾ ಅವರೊಂದಿಗಿನ ಸಂಬಂಧದ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬಹಿರಂಗಪಡಿಸಿದರು. ಇತ್ತೀಚೆಗೆ ಟ್ರಾವೆಲ್ ಲೀಷರ್ ಇಂಡಿಯಾಗೆ ನೀಡಿದ ಸಂದರ್ಶನವೊಂದರಲ್ಲಿ ಸಂಬಂಧದ ಬಗ್ಗೆ ಮಾತನಾಡುತ್ತಾ, ನಾವು ಮೊದಲ ಬಾರಿಗೆ ಭೇಟಿಯಾಗಿದಾಗಿನಿಂದಲೂ ನಮ್ಮ ಪ್ರೀತಿಯನ್ನು ಬಹಿರಂಗವಾಗಿ ಸ್ವೀಕರಿಸಿದ್ದೇವೆ. ನಮ್ಮ ಭಾವನೆಗಳನ್ನು ತೋರಿಸಲು ಎಂದಿಗೂ ಹಿಂಜರಿಯುವುದಿಲ್ಲ ಎಂದು ಅಭಿಪ್ರಾಯ ಸೂಚಿಸಿದ್ದರು (ಏಜೆನ್ಸೀಸ್).