ಸಾಮ್ರಾಟ್​ ಪೃಥ್ವಿರಾಜ್​ನ ಪಾತ್ರದಲ್ಲಿ ಮಿಂಚಿದ್ದ ಅಕ್ಷಯ್​ ಕುಮಾರ್​ 
ಬಾಲಿವುಡ್

ಪೃಥ್ವಿರಾಜ್ ಸಿನಿಮಾದಲ್ಲಿ ನಕಲಿ ಮೀಸೆ ವಿವಾದ: ಕೊನೆಗೂ ಮೌನ ಮುರಿದ ಅಕ್ಷಯ್! ಕಿಲಾಡಿ ಕುಮಾರ್ ನೀಡಿದ ಸ್ಪಷ್ಟನೆ ಏನು? Akshay Kumar on Samrat Prithviraj

ಪ್ರಮುಖ ಮುಖ್ಯಾಂಶಗಳು

  • ಸಾಮ್ರಾಟ್​ ಪೃಥ್ವಿರಾಜ್​ನ ಪಾತ್ರದಲ್ಲಿ ಮಿಂಚಿದ್ದ ಅಕ್ಷಯ್​ ಕುಮಾರ್​
  • ನಕಲಿ ಮೀಸೆ ಅಂಟಿಸಿಕೊಂಡಿದ್ದಕ್ಕೆ ಉಂಟಾಗಿದ್ದ ವಿವಾದ
  • ನನ್ನಿಂದ ನೋವಾಗಿದ್ದರೆ ಕ್ಷಮಿಸಿ ಎಂದ ಕಿಲಾಡಿ ಕುಮಾರ್​
ಮುಂಬೈ: ಬಾಲಿವುಡ್​ನ ಕಿಲಾಡಿ ಖ್ಯಾತಿಯ ಅಕ್ಷಯ್​ ಕುಮಾರ್​​ ಇತ್ತೀಚೆಗೆ ಯೂಟ್ಯೂಬ್​ ಚಾನಲ್​ವೊಂದರ ಪಾಡ್​ಕಾಸ್ಟ್​​ನಲ್ಲಿ 2022 ರಲ್ಲಿ ತೆರೆಕಂಡಿದ್ದ ಸಾಮ್ರಾಟ್​ ಪೃಥ್ವಿರಾಜ್​ (Akshay Kumar on Samrat Prithviraj) ಸಿನಿಮಾದ ಕುರಿತು ಅಂದು ಭುಗಿಲೆದಿದ್ದ ವಿವಾದದ ಬಗ್ಗೆ ಈಗ ಮೌನ ಮುರಿದಿದ್ದಾರೆ.

ಏನಿದು ಮೀಸೆ ವಿವಾದ?

2022 ರಲ್ಲಿ ತೆರೆಕಂಡಿದ್ದ ಅಕ್ಷಯ್​ ಕುಮಾರ್ ನಟನೆಯ ಸಾಮ್ರಟ್​ ಪೃಥ್ವಿರಾಜ್ ಸಿನಿಮಾದಲ್ಲಿ ರಜಪೂತರ ಆರಾಧ್ಯ ದೈವದಂತಿರುವ ಮಹಾರಾಜ ಪೃಥ್ವಿರಾಜ್ ಚೌಹಾಣನ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿತ್ತು.
ಆದರೆ ಈ ಸಿನಿಮಾದಲ್ಲಿ ಅಕ್ಷಯ್​, ಪೃಥ್ವಿರಾಜನ ಪಾತ್ರವನ್ನು ಸರಿಯಾಗಿ ನಿರ್ವಹಿಸದೆ ಇರುವುದು ಜನರ ಬೇಸರಕ್ಕೆ ಕಾರಣವಾಗಿತ್ತು. ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ನಕಲಿ ಮೀಸೆ ಧರಿಸಿ ಅಭಿನಯಿಸಿದ್ದು, ರಜಪೂತರ ಕೋಪಕ್ಕೆ ಕಾರಣವಾಗಿತ್ತು. ಇದರಿಂದಲೇ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಫ್ಲಾಪ್​ ಆಯಿತೆಂದೂ ಹೇಳಲಾಗುತ್ತದೆ.

ಅಕ್ಷಯ್​ ನೀಡಿರುವ ಸ್ಪಷ್ಟನೆ ಏನು?

ಪಾಡ್​ಕಾಸ್ಟ್​ನಲ್ಲಿ ಸಂದರ್ಶಕ ಈ ನಕಲಿ ಮೀಸೆಯ ವಿಷಯ ಎತ್ತಿದಾಗ ಅಕ್ಷಯ್​ ಕುಮಾರ್​, ನಾನು ಆ ಸಮಯದಲ್ಲಿ ಹಲವಾರು ಸಿನಿಮಾಗಳಲ್ಲಿ ನಿರತನಾಗಿದ್ದೆ, ಒಂದೇ ಸಿನಿಮಾಗೆ ನನ್ನ ಶೇ.100 ಕೊಡಲು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ಆ ಪಾತ್ರಕ್ಕೆ ಬೇಕಾದ ರೀತಿಯ ಮೀಸೆ ನನ್ನ ಮುಖದ ಮೇಲೆ ನೈಸರ್ಗಿಕವಾಗಿ ಬೆಳೆಯದ ಕಾರಣ, ಕೃತಕ ಮೀಸೆಯನ್ನು ಬಳಸಿಕೊಳ್ಳಲಾಯಿತು. ಈ ಪಾತ್ರ ಜನರಿಗೆ ಇಷ್ಟವಾಗಿಲ್ಲ ಅಂದರೆ ನಾನು ಖಂಡಿತವಾಗಿ ಕ್ಷಮೆ ಕೇಳುತ್ತೇನೆ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.
ಸಾಮ್ರಾಟ್​ ಪೃಥ್ವಿರಾಜ್​ ಸಿನಿಮಾ ಬಗ್ಗೆ
ಡಾ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಈ ಐತಿಹಾಸಿಕ ಚಲನಚಿತ್ರವು 2022 ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾವು 12ನೇ ಶತಮಾನದ ಭಾರತದ ಧೀರ ಹಿಂದೂ ರಾಜ ಪೃಥ್ವಿರಾಜ್ ಚೌಹಾಣ್ ಅವರ ಜೀವನ ಮತ್ತು ಪರಾಕ್ರಮವನ್ನು ಆಧರಿಸಿತ್ತು.. ಬಾಲಿವುಡ್ ನಟ ಅಕ್ಷಯ್ ಕುಮಾರ್ ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದ ಮೂಲಕ ಮಾಜಿ ವಿಶ್ವ ಸುಂದರಿ ಮನುಷಿ ಚಿಲ್ಲರ್ (ಸಂಯೋಗಿತಾ ಪಾತ್ರದಲ್ಲಿ) ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
ಚಂದ್ ಬರ್ದಾಯಿ ಬರೆದ ಪೃಥ್ವಿರಾಜ್ ರಾಸೋ ಎಂಬ ಮಹಾಕಾವ್ಯವನ್ನು ಆಧರಿಸಿ ಈ ಚಿತ್ರವನ್ನು ತೆರೆಗೆ ತರಲಾಗಿದ್ದು, ಮೊಹಮ್ಮದ್ ಘೋರಿಯ ಆಕ್ರಮಣದ ವಿರುದ್ಧ ಪೃಥ್ವಿರಾಜ್ ಅವರು ತೋರಿದ ಧೈರ್ಯ, ತರೈನ್ ಯುದ್ಧದ ವೈಭವ ಮತ್ತು ರಾಜಕುಮಾರಿ ಸಂಯೋಗಿತಾ ಅವರೊಂದಿಗಿನ ಪ್ರೇಮಕಥೆಯನ್ನು ಇದು ಒಳಗೊಂಡಿದೆ. ಸಂಜಯ್ ದತ್ ಮತ್ತು ಸೋನು ಸೂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು,(ಏಜನ್ಸೀಸ್​).