ಬಾಲಿವುಡ್ ತಾರಾದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕುಶಾಲ್
- ನವೆಂಬರ್ 7 ರಂದು ಗಂಡು ಮಗುವಿಗೆ ಜನ್ಮ ನೀಡಿದ ಕತ್ರಿನಾ ಕೈಫ್
- ಮೊದಲ ಮಗುವನ್ನು ಸ್ವಾಗತಿಸಿರುವ ತಾರಾದಂಪತಿ ಕತ್ರಿನಾ ಮತ್ತು ವಿಕ್ಕಿ ಕುಶಾಲ್
- ಮಗುವಿನ ಮುಖ ಪರಿಚಯ ಮಾಡಿದ್ದಾರೆನ್ನಲಾದ ಫೋಟೋ ಸಿಕ್ಕಾಪಟ್ಟೆ ವೈರಲ್
ಮುಂಬೈ: ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ( Katrina Kaif and Vicky Kaushal ) ನವೆಂಬರ್ 7 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಗೊತ್ತೇ ಇದೆ. ತಾರಾದಂಪತಿಯಾದ ಕತ್ರಿನಾ ಮತ್ತು ವಿಕ್ಕಿ ಕುಶಾಲ್ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ತಮ್ಮ ಸಾಮಾಜಿಕ ಜಾಲತಾಣ ಮೂಲಕ ಬಹಿರಂಗಪಡಿಸಿದರು.
ತಾಜಾ ಸಂಗತಿ ಏನೆಂದರೆ, ಫೋಟೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆ ಫೋಟೋದಲ್ಲಿ ಎಡಭಾಗದಲ್ಲಿ ಕತ್ರಿನಾ ಮತ್ತು ಬಲಭಾಗದಲ್ಲಿ ವಿಕ್ಕಿ ಕುಳಿತಿದ್ದರೆ, ಮಧ್ಯದಲ್ಲಿ ಕತ್ರಿನಾ ಅಥವಾ ವಿಕ್ಕಿಯ ತಾಯಿ ಮಗುವನ್ನು ಹಿಡಿದಿದ್ದಾರೆ. ಅದರಲ್ಲಿ ಮಗುವಿನ ಮುಖ ಸ್ಪಷ್ಟವಾಗಿ ಕಾಣುತ್ತದೆ. ತಾರಾ ದಂಪತಿ ತಮ್ಮ ಮಗುವಿನ ಮುಖ ಪರಿಚಯ ಮಾಡಿದ್ದಾರೆ ಎಂದು ಹೇಳಿ ಫೋಟೋವನ್ನು ವೈರಲ್ ಮಾಡಲಾಗಿದೆ.
ಮೂಡಿದ ಅನುಮಾನ
ನಿಮಗೆ ಗೊತ್ತು ಇದು ಡಿಜಿಟಲ್ ಜಮಾನ. ತುಂಬಾ ನೈಜತೆಯಿಂದ ಕೂಡಿದ ಫೋಟೋವನ್ನು ತಯಾರಿಸುವುದು ತುಂಬಾ ಸುಲಭ. ಕೃತಕ ಬುದ್ಧಿಮತ್ತೆ ಸಹಾಯದಿಂದ ಏನು ಬೇಕಾದರೂ ಕ್ರಿಯೇಟ್ ಮಾಡಬಹುದು. ಹೀಗಾಗಿ ವೈರಲ್ ಆಗಿರುವ ಫೋಟೋ ಬಗ್ಗೆ ಒಂದು ಸಣ್ಣ ಅನುಮಾನ ಮೂಡಿದೆ. ಅದೇನೆಂದರೆ, ನಿಜವಾಗಿಯೂ ವಿಕ್ಕಿ ಮತ್ತು ಕತ್ರಿನಾ ಅವರೇ ಮಗುವಿನ ಫೋಟೋ ಶೇರ್ ಮಾಡಿದ್ರಾ ಅನ್ನೋದು.
ಒಂದಲ್ಲ ಎರಡು ಫೋಟೋ
ಫೋಟೋವನ್ನು ಕತ್ರಿನಾ ಫ್ಯಾನ್ಸ್ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ. ಒಂದು ಫೋಟೋದಲ್ಲಿ, ವಿಕ್ಕಿ ಕೌಶಲ್ ಅವರು ತಮ್ಮ ಮಗನನ್ನು ಕೈಗಳಲ್ಲಿ ಹಿಡಿದುಕೊಂಡಿದ್ದರೆ, ಹಳದಿ ಉಡುಗೆ ಧರಿಸಿರುವ ಕತ್ರಿನಾ ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇಬ್ಬರು ಅಕ್ಕಪಕ್ಕದಲ್ಲಿ ಕುಳಿತಿದ್ದು, ಇಬ್ಬರ ಮಧ್ಯೆ ವಿಕ್ಕಿ ಅಥವಾ ಕತ್ರಿನಾ ಅವರ ತಾಯಿ ಮೊಮ್ಮಗನನ್ನು ಹಿಡಿದುಕೊಂಡಿರುವ ಪೋಸ್ ನೀಡುತ್ತಿರುವುದನ್ನು ಕಾಣಬಹುದು.
ನಿಜಕ್ಕೂ ಫೋಟೋ ಶೇರ್ ಮಾಡಿದ್ರಾ?
ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ಅವರು ಈ ತಿಂಗಳ ಆರಂಭದಲ್ಲಿ ಅಂದರೆ, ನವೆಂಬರ್ 7ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕತ್ರಿನಾ ಅವರು ತಮ್ಮ ಗರ್ಭಧಾರಣೆಯನ್ನು ಅಧಿಕೃತವಾಗಿ ಘೋಷಿಸಿದರು. ತಾರಾದಂಪತಿ ಹಂಚಿಕೊಂಡ ಫೋಟೋದಲ್ಲಿ, ವಿಕಿ ಕೌಶಲ್ ಅವರು ಕತ್ರಿನಾ ಅವರ ಬೇಬಿ ಬಂಪ್ ಅನ್ನು ಪ್ರೀತಿಯಿಂದ ಹಿಡಿದಿರುವ ದೃಶ್ಯವಿತ್ತು. ಅಂದಹಾಗೆ, ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ಒಂದು ವರ್ಷ ಡೇಟಿಂಗ್ ಮಾಡಿದ ನಂತರ 2021 ರಲ್ಲಿ ವಿವಾಹವಾದರು. ಇಬ್ಬರ ವಿವಾಹ ಸಮಾರಂಭ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ನಡೆಯಿತು, (ಏಜೆನ್ಸೀಸ್).