ಚಿತ್ರ Instagram 
ಬಾಲಿವುಡ್

ತುಂಬಾ ಭಯವಾಯ್ತು...ವಿದೇಶದಿಂದ ವಾಪಸ್ಸಾದ ನಟಿ...ಪರಿಸ್ಥಿತಿ ನಿಭಾಯಿಸಿದ ಅಧಿಕಾರಿಗಳಿಗೆ ಧನ್ಯವಾದ ಎಂದ ಇಶಾ ಗುಪ್ತಾ Esha Gupta

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿದ ಮಿಲಿಟರಿ ಕಾರ್ಯಾಚರಣೆ ವೇಳೆ ನಟಿ ಇಶಾ ಗುಪ್ತಾ ಲಾಕ್​
  • ನಾವೆಲ್ಲರೂ ಎದುರಿಸಿದ ಪರಿಸ್ಥಿತಿಯಲ್ಲಿ ಇರುವುದು ತುಂಬಾ ಕಷ್ಟಕರವಾಗಿತ್ತು. ಇಂದು ನಾವು ಸುರಕ್ಷಿತವಾಗಿದ್ದೇವೆ
  • ಈ ಸಂಕಷ್ಟದ ಸಮಯದಲ್ಲಿ ನೆರವಾದ ಅಬುಧಾಬಿ ವಿಮಾನ ನಿಲ್ದಾಣ ಅಧಿಕಾರಿಗಳನ್ನು ಶ್ಲಾಘಿಸಿದ ನಟಿ
Esha Gupta: ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿದ ಮಿಲಿಟರಿ ಕಾರ್ಯಾಚರಣೆ ವೇಳೆ ಅಬುಧಾಬಿಯಲ್ಲಿ ಸಿಲುಕಿಕೊಂಡಿದ್ದ ಬಾಲಿವುಡ್ ನಟಿ ಇಶಾ ಗುಪ್ತಾ, ಕೊನೆಗೂ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘವಾದ ಮತ್ತು ಭಾವನಾತ್ಮಕ ಟಿಪ್ಪಣಿಯನ್ನು ಹಂಚಿಕೊಳ್ಳುವ ಮೂಲಕ ಅವರು ತಮ್ಮ ಕಷ್ಟದ ದಿನಗಳನ್ನು ವಿವರಿಸಿದ್ದಾರೆ.

ಪೋಸ್ಟ್​ನಲ್ಲೇನಿದೆ?

ಮನೆಗೆ ಹಿಂತಿರುಗಿದ್ದೇನೆ. ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಶುಭಾಶಯಗಳಿಗೆ ಧನ್ಯವಾದಗಳು. ನಾವೆಲ್ಲರೂ ಎದುರಿಸಿದ ಪರಿಸ್ಥಿತಿಯಲ್ಲಿ ಇರುವುದು ತುಂಬಾ ಕಷ್ಟಕರವಾಗಿತ್ತು. ಇಂದು ನಾವು ಸುರಕ್ಷಿತವಾಗಿದ್ದೇವೆ ಎಂದರೆ, ಅದು ದೇವರ ಆಶೀರ್ವಾದ.
ನಾನು ಶನಿವಾರ (ಫೆ.28) ವಿಮಾನ ನಿಲ್ದಾಣದಲ್ಲಿದ್ದಾಗ ಈ ಘಟನೆ ಪ್ರಾರಂಭವಾಯಿತು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ವಿಮಾನ ನಿಲ್ದಾಣಗಳು ಮುಚ್ಚಲ್ಪಟ್ಟವು. ಈ ವೇಳೆ ಏನಾಗಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ನಂತರ ಕ್ಷಿಪಣಿ ದಾಳಿಯ ಸುದ್ದಿ ಬರಲು ಪ್ರಾರಂಭಿಸಿದವು. ಈ ವೇಳೆ ಅಪರಿಚಿತರು ಪರಸ್ಪರ ಸಮಾಧಾನಪಡಿಸಿಕೊಳ್ಳುತ್ತಿದ್ದರು.
ಈ ಸಂಕಷ್ಟದ ಸಮಯದಲ್ಲಿ ನೆರವಾದ ಅಬುಧಾಬಿ ವಿಮಾನ ನಿಲ್ದಾಣ ಅಧಿಕಾರಿಗಳನ್ನು ಶ್ಲಾಘಿಸಿದ ಇಶಾ, ಇಲ್ಲಿ, ನಾನು ನೋಡಿದ್ದು ಯುಎಇ ಎಂಬ ದೇಶದ ಶಕ್ತಿ. ಏಕೆಂದರೆ, ನಾವೆಲ್ಲರೂ, ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದೆವು. ಈ ವೇಳೆ ಸಿಬ್ಬಂದಿ ತಕ್ಷಣವೇ ತಮ್ಮ ಕಾರ್ಯವನ್ನು ನಿರ್ವಹಿಸಲು ಸಿದ್ಧರಾದರು. ನಾನು ಮರಳಿ ಹೋಟೆಲ್​ಗೆ ಹೊರಟೆ ಎಂದರು.
ಮೊದಲು, ಅವರು ಎಲ್ಲಾ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಆಹಾರಕ್ಕಾಗಿ ಹಣವನ್ನು ನೀಡಿದರು. ಎಲ್ಲರ ಲಗೇಜುಗಳನ್ನು ಪಡೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಇದಾದ ನಂತರ ಅವರೆಲ್ಲರಿಗೂ ಅಬುಧಾಬಿಯಲ್ಲಿ ಲಭ್ಯವಿರುವ ಹೋಟೆಲ್​ಗಳಲ್ಲಿ ವಸತಿ ನೀಡಲಾಯಿತು.
ರಾತ್ರಿ 9 ಗಂಟೆಯ ಸುಮಾರಿಗೆ, ನಗರ ಮತ್ತು ದ್ವೀಪದಾದ್ಯಂತ ವಿವಿಧ ಹೋಟೆಲ್‌ಗಳಿಗೆ ವರ್ಗಾವಣೆಗಾಗಿ ಬಸ್‌ಗಳು ಸಿದ್ಧವಾಗಿದ್ದವು. ಮಾಧ್ಯಮಗಳಲ್ಲಿ ಈ ವಿಷಯ ಪ್ರಕಟವಾಗುವ ಮೊದಲೇ ಸರ್ಕಾರವು ಎಲ್ಲಾ ಹೋಟೆಲ್‌ಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕರಿಗೆ ವಸತಿ ಮತ್ತು ಆಹಾರವನ್ನು ಒದಗಿಸುವಂತೆ ಆದೇಶಿಸಿತ್ತು.
ಆಶ್ರಯ ಪಡೆಯಲು ಯುಎಇಯ ಆಂತರಿಕ ಸಚಿವಾಲಯದಿಂದ ಎಲ್ಲಾ ಪ್ರಯಾಣಿಕರಿಗೂ ಫೋನ್​ಗಳಲ್ಲಿ ಅಧಿಸೂಚನೆಯನ್ನು ಕಳುಹಿಸಿದರು. ಪರಿಸ್ಥಿತಿ ಶಾಂತವಾಗಿದ್ದಾಗ ನಮಗೆ ಭರವಸೆಯ ಎಚ್ಚರಿಕೆಗಳನ್ನು ಸಹ ನೀಡುತ್ತಿದ್ದರು. ಆದಾಗ್ಯೂ, ಅಗತ್ಯದ ಸಮಯದಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡಿದ ಭಾರತ ಮತ್ತು ಯುಎಇ ಸರ್ಕಾರಗಳಿಗೆ ಧನ್ಯವಾದ ನಾವು ಸುರಕ್ಷಿತವಾಗಿ ನಮ್ಮ ಮನೆಗೆ ತೆರಳಿದ್ದೇವೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಇಶಾ ಗುಪ್ತಾ ಮಾಡೆಲಿಂಗ್ ಲೋಕದಿಂದ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದವರು. ಇವರು 2007ರಲ್ಲಿ 'ಮಿಸ್ ಇಂಡಿಯಾ ಇಂಟರ್ನ್ಯಾಷನಲ್' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ರುಸ್ತಮ್, ಬಾದ್‌ಶಹೋ, ರಾಜ್ 3, ಆಶ್ರಮ್ ಚಿತ್ರಗಳಲ್ಲಿ ಅವರ ನಟನೆ ಬಹಳ ಅದ್ಭುತವಾಗಿತ್ತು (ಏಜೆನ್ಸೀಸ್​).