- ಥಾಯ್ನ ಒನ್ ಡೇ ರಿಮೇಕ್ ಈ ಏಕ್ ದಿನ್ ಸಿನಿಮಾ
- ಜುನೈದ್ ಖಾನ್ ನಟನೆಯ ಮೊದಲ ಸಿನಿಮಾ ಏಕ್ ದಿನ್
- 39 ದಿನಕ್ಕೂ ಮೊದಲೇ ಟಿಕೆಟ್ ಬುಕ್ಕಿಂಗ್ ಆರಂಭಿಸಿದ್ದು ಈ ಕಾರಣಕ್ಕಂತೆ
Ek Din: ಸುನೀಲ್ ಪಾಂಡೆ ನಿರ್ದೇಶನದ ಹಿಂದಿ ರೊಮ್ಯಾಂಟಿಕ್ ಸಿನಿಮಾ ಏಕ್ ದಿನ್ ರೀಲೀಸ್ಗಾಗಿ ಸಿನಿಮಾ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ನಟನೆಯ ಮಿಂಚಿದ್ದಾರೆ. 2016ರ ಥಾಯ್ನ ಒನ್ ಡೇ ರಿಮೇಕ್ ಆಗಿದ್ದು, ಅಮೀರ್ ಖಾನ್ರ ಪ್ರೊಡಕ್ಷನ್ ನಿರ್ಮಿಸಿದ ಚಿತ್ರ ಇದಾಗಿದೆ.
ಡಿನೋ ಪಾತ್ರದಲ್ಲಿ ಜುನೈದ್ ಮತ್ತು ಮೀರಾ ಪಾತ್ರದಲ್ಲಿ ಸಾಯಿಪಲ್ಲವಿ ಬಣ್ಣ ಹಚ್ಚಿದ್ದು, ಮೇ1ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಸದ್ಯ ಚರ್ಚಾಸ್ಪದಕ್ಕೆ ಕಾರಣವಾಗಿರುವ ವಿಚಾರ ಎಂದರೆ, ಮಿಸ್ಟರ್ ಪರ್ಫೆಕ್ಟ್ ಅಮೀರ್ಖಾನ್ ಅವರು, ಚಿತ್ರ ರಿಲೀಸ್ ಆಗಲು 39 ದಿನ ಬಾಕಿ ಇರುವಾಗಕೇ ಟಿಕೆಟ್ ಬುಕ್ಕಿಂಗ್ ಆರಂಭಿಸಿರುವ ಬಗ್ಗೆ.
ಮಿಸ್ಟರ್ ಪರ್ಫೆಕ್ಟ್ ಹೇಳಿದ್ದಿಷ್ಟು..!
ಹೌದು, ಮಿಸ್ಟರ್ ಪರ್ಫೆಕ್ಸ್ ಅಮೀರ್ ಖಾನ್ ಅವರು ತಮ್ಮ ಪರಿಕಲ್ಪನೆ ಬಗ್ಗೆ ಜಸ್ಟ್ ಟೂ ಫಿಲ್ಮಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಹೊಸ ಮುಖಗಳನ್ನು ಪರಿಚಯಿಸಲಾಗಿದೆ. ಈ ಸಿನಿಮಾದ ಮೂಲಕ ಜುನೈದ್ ಖಾನ್ ಏಕ್ ದಿನ್ ಮೂಲಕ ಸಿನಿಮಾ ರಂಗ ಪ್ರವೇಶಿಸುತ್ತಿದ್ದರೆ, ಸಾಯಿಪಲ್ಲವಿ ಮೊದಲ ಬಾರಿಗೆ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಇಬ್ಬರು ಹೊಸಬರೇ ಎಂದು ಅಮೀರ್ ಹೇಳಿದ್ದಾರೆ.
ಮುಂದುವರೆದು, ಏಕ್ ದಿನ್ ಸಿನಿಮಾ ರಿಲೀಸ್ ಆಗುವ 39 ದಿನದ ಮೊದಲೇ ಟಿಕೆಟ್ ಬುಕ್ಕಿಂಗ್ಗೆ ಅವಕಾಶ ಕೊಟ್ಟಿದ್ದಾರೆ. ಇದು "ಸೈಕಲಾಜಿಕಲ್ ರಿಲೀಸ್ ಸ್ಟ್ರಾಟಜಿ" ಬಳಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದರೆ, ಸಿನಿಮಾ ಬಿಡುಗಡೆಗೂ ಮುನ್ನವೇ ಜನರ ಕುತೂಹಲ ಹೇಗಿದೆ. ಯಾವ ರೀತಿ ರಿಯಾಕ್ಷನ್ಸ್ ಇದೆ. ಎಷ್ಟು ಟಿಕೆಟ್ ಬುಕ್ ಆಗ್ತಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಉದ್ದೇಶವಾಗಿದೆ.
520ಕ್ಕೂ ಹೆಚ್ಚು ಟಿಕೆಟ್ ಮಾರಾಟ
ಇದು ಕೇವಲ ಟಿಕೆಟ್ ಮಾರಾಟ ಮಾಡುವ ವಿಚಾರವಲ್ಲ ಬದಲಿಗೆ ಸಿನಿಮಾ ಬಗ್ಗೆ ಚರ್ಚೆಗಳನ್ನು ಹುಟ್ಟು ಹಾಕುವ ತಂತ್ರವಾಗಿದೆ. ಈಗಾಗಲೇ ದೇಶದಾದ್ಯಂತ 520ಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿದೆ. ಇದು ಸಿನಿಮಾಕ್ಕೆ ಒಂದೊಳ್ಳೆ ರೆಸ್ಪಾನ್ಸ್ ಸಿಕ್ಕಂತೆ ಎಂದು ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).