ಒಂದೇ ಹೆರಿಗೆಯಲ್ಲಿ 3 ಮಕ್ಕಳನ್ನು ಹೆತ್ತ ನಟಿ  
ಬಾಲಿವುಡ್

ತನಗಿಂತ 8 ವರ್ಷ ಕಿರಿಯ ವ್ಯಕ್ತಿಯನ್ನು ಪ್ರೀತಿಸಿ 3 ರೀತಿ ಮದ್ವೆಯಾಗಿ ಒಂದೇ ಹೆರಿಗೆಯಲ್ಲಿ 3 ಮಕ್ಕಳನ್ನು ಹೆತ್ತ ನಟಿ ಈಕೆ! Actress

ಪ್ರಮುಖ ಮುಖ್ಯಾಂಶಗಳು

  • ಸಿನಿಪ್ರಿಯರಿಗೆ ನಟ-ನಟಿಯರ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇರುತ್ತದೆ
  • ಬಣ್ಣದ ಜಗತ್ತಿನಷ್ಟೇ ಕಲಾವಿದರ ಬದುಕು ಸಹ ವೈವಿಧ್ಯಮಯವಾಗಿರುತ್ತದೆ
  • ಬಾಲಿವುಡ್​ ನಟಿಯ ಜೀವನ ಕತೆ ಒಂದು ಸಿನಿಮಾ ಮಾಡುವಷ್ಟರಮಟ್ಟಿಗೆ ರೋಚಕವಾಗಿದೆ
Actress : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ವೈವಾಹಿಕ ಜೀವನ ಹೇಗಿದೆ? ಎಷ್ಟು ಮಕ್ಕಳಿದ್ದಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಬಣ್ಣದ ಜಗತ್ತಿನಷ್ಟೇ ಕಲಾವಿದರ ಬದುಕು ವೈವಿಧ್ಯಮಯವಾಗಿರುತ್ತದೆ. ಅದಕ್ಕೆ ಸಾಕ್ಷಿ ನಾವಿಂದು ಹೇಳ ಹೊರಟಿರುವ ಬಾಲಿವುಡ್​ ನಟಿಯ ಕತೆ.
ಬಾಲಿವುಡ್​ನ ಈ ಖ್ಯಾತ ನಟಿ ತನಗಿಂತ 8 ವರ್ಷ ಕಿರಿಯ ವ್ಯಕ್ತಿಯನ್ನು ಪ್ರೀತಿಸಿ, ಅವನನ್ನು ಮೂರು ರೀತಿಯಲ್ಲಿ ಮದುವೆಯಾಗಿ, ಒಂದೇ ಹೆರಿಗೆಯಲ್ಲಿ ಮೂರು ಮಕ್ಕಳನ್ನು ಹೆತ್ತ ನಟಿ. ಅಷ್ಟಕ್ಕೂ ಆ ನಟಿ ಯಾರು ಅಂತಿರಾ... ಅವರೇ ಬಾಲಿವುಡ್​ನ ಎವರ್​ಗ್ರೀನ್​ ಬ್ಯೂಟಿ ಫರ್ಹಾ​ ಖಾನ್​.

ಎಲ್ಲ ಕ್ಷೇತ್ರದಲ್ಲೂ ಯಶಸ್ಸು

ಬಾಲಿವುಡ್​ಗೆ ಡಾನ್ಸ್​ ಕೊರಿಯೋಗ್ರಾಫರ್​ ಆಗಿ ಕಾಲಿಟ್ಟ ಫರ್ಹಾ, ತಮ್ಮ ಸಿನಿಮಾ ಅನುಭವಗಳಿಂದ ಕೇವಲ ಡಾನ್ಸ್​ಗೆ ಸೀಮಿತವಾಗದೆ, ನಟಿಯಾಗಿ, ನಿರ್ದೇಶಕಿಯಾಗಿ ಹಾಗೂ ನಿರ್ಮಾಪಕಿಯಾಗಿ ವಿವಿಧ ಅವತಾರಗಳನ್ನು ಎತ್ತಿದ್ದಾರೆ. ಸಿನಿಮಾ ರಂಗದಲ್ಲಿ ತಮ್ಮದೇಯಾದ ವಿಶೇಷ ಛಾಪು ಮೂಡಿಸಿರುವ ಫರ್ಹಾ, ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. ಫರಾ ಖಾನ್ ಅವರು 'ಮೈ ಹೂ ನಾ', 'ಓಂ ಶಾಂತಿ ಓಂ' ಮತ್ತು 'ಹ್ಯಾಪಿ ನ್ಯೂ ಇಯರ್'ನಂತಹ ಭರ್ಜರಿ ಹಿಟ್ ಸಿನಿಮಾಗಳನ್ನು ಸಹ ನಿರ್ದೇಶಿಸಿದ್ದಾರೆ. ಈ ಮೂಲಕ ನಿರ್ದೇಶಕಿಯಾಗಿ ಭರ್ಜರಿ ಯಶಸ್ಸನ್ನು ಕೂಡ ಸಾಧಿಸಿದ್ದಾರೆ.
ಡಾನ್ಸರ್​, ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿಯಾಗಿ ಎಲ್ಲ ಕ್ಷೇತ್ರಗಳಲ್ಲಿ ಫರ್ಹಾ ಸಾಧನೆ ಮಾಡಿದ್ದಾರೆ. ಆದರೆ, ಅವರ ಸಾಧನೆ ಹಾದಿಯಲ್ಲಿ ವೈಯಕ್ತಿಕ ಜೀವನವು ಕೂಡ ಎಲ್ಲರ ಗಮನ ಸೆಳೆದಿದೆ. ಫರ್ಹಾ ಅವರ ಜೀವನ ಕತೆಯನ್ನೇ ಒಂದು ಸಿನಿಮಾ ಮಾಡುಬಹುದು. ಅಷ್ಟರಮಟ್ಟಿಗೆ ಅವರ ವೈಯಕ್ತಿಕ ಜೀವನ ರೋಚಕವಾಗಿದೆ.

ಚಿಗುರಿದ ಪ್ರೇಮ

ಫರ್ಹಾ ಅವರು 2004ರಲ್ಲಿ ತೆರೆಕಂಡ ಮೈ ಹೂ ನಾ ಸಿನಿಮಾವನ್ನು ನಿರ್ದೇಶನ ಮಾಡಿದರು. ಈ ಚಿತ್ರಕ್ಕೆ ಶಿರೀಶ್ ಗುಂಡಾರ್ ಎಂಬುವರು ಎಡಿಟರ್​ ಆಗಿದ್ದರು. ಸಿನಿಮಾ ವಿಚಾರಕ್ಕೆ ಆರಂಭದಲ್ಲಿ ಇಬ್ಬರು ತುಂಬಾ ಕಿತ್ತಾಡುತ್ತಿದ್ದರು. ಶಿರೀಶ್​ ಅವರು ಫರ್ಹಾ, ಬಯಸಿದ ರೀತಿಯಲ್ಲಿ ಎಡಿಟಿಂಗ್​ ಮಾಡುತ್ತಿರಲಿಲ್ಲ. ಬದಲಾಗಿ ತಮ್ಮದೇ ರೀತಿಯಲ್ಲಿ ಎಡಿಟಿಂಗ್​ ಮಾಡುತ್ತಿದ್ದರು. ಇದು ಫರ್ಹಾ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಇದರಿಂದ ಇಬ್ಬರ ನಡುವೆ ವಾಗ್ವಾದಗಳು ನಡೆಯುತ್ತಿತ್ತು. ಒಂದು ಹಂತದಲ್ಲಂತೂ ನೀವು ಸರಿಯಾಗಿ ಕೆಲಸ ಮಾಡದಿದ್ದರೆ ಕೆಲಸದಿಂದಲೇ ತೆಗೆಯುತ್ತೇನೆ ಎಂದು ಫರ್ಹಾ, ಶಿರೀಶ್ ಅವರಿಗೆ ಬೆದರಿಕೆ ಹಾಕಿದ್ದರು. ಆದರೆ, ಅಷ್ಟರಲ್ಲಾಗಲೇ ಫರ್ಹಾ ಅವರ ಮೇಲೆ ಶಿರೀಶ್​ಗೆ ಲವ್​ ಆಗಿತ್ತು. ಫರ್ಹಾ ಅವರ ಧೈರ್ಯ, ಸೆಟ್​ನಲ್ಲಿ ಎಲ್ಲರನ್ನು ಆಕೆ ಮುನ್ನಡೆಸುತ್ತಿದ್ದ ರೀತಿ ಶಿರೀಶ್​ ಅವರನ್ನು ಸೆಳೆಯಿತು ಮತ್ತು ಆಕೆಯ ಪ್ರೀತಿಯ ಬಲೆಯಲ್ಲಿ ಬೀಳುವಂತೆ ಮಾಡಿತು.
ಹೀಗಿರುವಾಗ, ಶಿರೀಶ್ ಅವರು ಒಂದು ನಿರ್ಧಾರಕ್ಕೆ ಬಂದರು. ಅದೇನೆಂದರೆ, ತನ್ನ ಪ್ರೀತಿಯನ್ನು ಮುಚ್ಚಿಟ್ಟುಕೊಳ್ಳಬಾರದು ಅಂತ ನಿರ್ಧಾರ ಮಾಡಿದ ಶಿರೀಶ್, ಒಂದು ಪಾರ್ಟಿಯಲ್ಲಿ ತನ್ನ ಪ್ರೀತಿಯನ್ನು ಆಕೆಯ ಮುಂದೆ ತುಂಬಾ ನೇರವಾಗಿ ವ್ಯಕ್ತಪಡಿಸಿದನು. ನನ್ನನ್ನು ಮದುವೆಯಾಗುವ ಉದ್ದೇಶವಿದ್ದರೆ ಮಾತ್ರ ನನ್ನೊಂದಿಗೆ ಮಾತನಾಡಿ ಇಲ್ಲದಿದ್ದರೆ ನನ್ನೊಂದಿಗೆ ಮಾತನಾಡಬೇಡಿ ಎಂದನು. ಇದನ್ನು ಕೇಳಿ ಶಿರೀಶ್​ಗೆ ಒಂದು ಕ್ಷಣ ಅಚ್ಚರಿಯಾಯಿತು. ಆದರೆ, ಶಿರೀಶ್ ಅವರ ನೇರ ನುಡಿ ಅವರಿಗೆ ಇಷ್ಟವಾಯಿತು. ಆರಂಭದಲ್ಲಿ ಫರ್ಹಾ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಂತರದ ದಿನಗಳಲ್ಲಿ ಶಿರೀಶ್​ ಅವರನ್ನು ಹೆಚ್ಚು ಗಮನಿಸಲು ಮುಂದಾದರು. ಶಿರೀಶ್ ಅವರ ಪ್ರಾಮಾಣಿಕತೆ, ಆತನ ಬುದ್ಧಿವಂತಿಕೆ ಫರ್ಹಾ ಅವರಿಗೆ ಇಷ್ಟವಾಯಿತು. ಅಂತಿಮವಾಗಿ ಫರ್ಹಾ, ಶಿರೀಶ್ ​ ಅವರ ಪ್ರೀತಿಯನ್ನು ಒಪ್ಪಿಕೊಂಡಳು.

ಮೂರು ರೀತಿ ಮದುವೆ

ಅಂದಹಾಗೆ, ಶಿರೀಶ್ ಅವರು ಫರ್ಹಾಗಿಂತ 8 ವರ್ಷ ಚಿಕ್ಕವರು. ಫರ್ಹಾ ಮುಸ್ಲಿಂ ಮತ್ತು ಶಿರೀಶ್ ಬ್ರಾಹ್ಮಣ ಸಮುದಾಯದವರು. ಆದರೆ, ತಮ್ಮ ಪ್ರೀತಿಗೆ ಯಾವುದೇ ವಿರೋಧಗಳು ವ್ಯಕ್ತವಾಗಲಿಲ್ಲ. ಇಬ್ಬರು 2004, ಡಿಸೆಂಬರ್ 9ರಂದು ವಿವಾಹವಾದರು. ಆ ಸಮಯದಲ್ಲಿ ಅವರಿಬ್ಬರ ವಿವಾಹ ಎಲ್ಲರ ಗಮನ ಸೆಳೆಯಿತು. ಇಬ್ಬರು ಆರಂಭದಲ್ಲಿ ಕಾನೂನುಬದ್ಧವಾಗಿ ನೋಂದಾಯಿತ ಮದುವೆ ಮಾಡಿಕೊಂಡರು. ಇದಾದ ಬಳಿಕ, ಇಸ್ಲಾಂ ಪ್ರಕಾರ ನಿಖಾ ಆದರು. ನಂತರದಲ್ಲಿ ತಾಳಿ ಕಟ್ಟುವ ಮೂಲಕ ಹಿಂದೂ ಸಂಪ್ರದಾಯದಂತೆ ಮದುವೆ ಆದರು. ಮದುವೆಯಾದ ನಾಲ್ಕು ವರ್ಷಗಳ ಬಳಿಕ 2008 ರಲ್ಲಿ, ಒಂದೇ ಹೆರಿಗೆಯಲ್ಲಿ ಮೂವರು ಮಕ್ಕಳು ಜನಿಸಿದರು. ಓರ್ವ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು ಜನಿಸಿದರು.
ಮಕ್ಕಳಿಗೆ ತ್ಸಾರ್, ದಿವಾ ಮತ್ತು ಅನ್ಯಾ ಎಂದು ಹೆಸರಿಸಲಾಗಿದೆ. ಮೂವರು ಮಕ್ಕಳು ಈಗ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ ಮತ್ತು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಮದುವೆಯ ಸಮಯದಲ್ಲಿ ಫರ್ಹಾ ಅವರಿಗೆ 39 ವರ್ಷ ವಯಸ್ಸಾಗಿತ್ತು ಮತ್ತು ಶಿರೀಶ್​ಗೆ 31 ವರ್ಷ ವಯಸ್ಸಾಗಿತ್ತು. ಆ ಸಮಯದಲ್ಲಿ, ಹಿರಿಯ ಮಹಿಳೆಯನ್ನು ಮದುವೆಯಾಗುವುದು ಬಾಲಿವುಡ್‌ನಲ್ಲಿ ದೊಡ್ಡ ಚರ್ಚೆಯಾಗಿತ್ತು. ಆದರೆ ಈ ದಂಪತಿ ಕಳೆದ 21 ವರ್ಷಗಳಿಂದ ಯಶಸ್ವಿ ದಾಂಪತ್ಯ ಜೀವನದ ಮೂಲಕ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ, (ಏಜೆನ್ಸೀಸ್​).