ಸಾಂದರ್ಭಿಕ ಚಿತ್ರ 
ಬಾಲಿವುಡ್

ರಾಕಿ ಭಾಯ್ ರೆಕಾರ್ಡ್ ಬ್ರೇಕ್! 31ನೇ ದಿನಕ್ಕೆ ಹೊಸ ಹಿಸ್ಟರಿ ಬರೆದ ಧುರಂಧರ್​! Ranveer Singh

ಪ್ರಮುಖ ಮುಖ್ಯಾಂಶಗಳು

  • ರಣವೀರ್ ಸಿಂಗ್ ಅವರ ಧುರಂಧರ್ ಸಿನಿಮಾ ಬಿಡುಗಡೆಯಾಗಿ 31 ದಿನಗಳನ್ನು ಪೂರೈಸಿದೆ
  • ಈ ಚಿತ್ರವು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ 5 ಟಾಪ್​ ಭಾರತೀಯ ಚಿತ್ರಗಳಲ್ಲಿ ಒಂದಾಗಿದೆ
  • ಧುರಂಧರ್ ಯಶ್​ ಅಭಿನಯದ ಕೆಜಿಎಫ್​ 2 ರ ಆಳ್ವಿಕೆಯನ್ನು ಮೊಟಕುಗೊಳಿಸಿದೆ
  • ಭಾನುವಾರ ಅದ್ಭುತ ಜಿಗಿತವನ್ನು ತೋರಿಸುವ ಮೂಲಕ ಈ ಚಿತ್ರವು ವಿಶ್ವಾದಾದ್ಯಂತ 1200 ಕೋಟಿ ದಾಟಿದೆ
Ranveer Singh : ರಣವೀರ್ ಸಿಂಗ್ ಮತ್ತು ಅಕ್ಷಯ್ ಖನ್ನಾ ಅಭಿನಯದ, ಧುರಂಧರ್ ಸಿನಿಮಾ ಬಿಡುಗಡೆಯಾಗಿ 31 ದಿನಗಳನ್ನು ಪೂರೈಸಿದ್ದು, ಬಾಕ್ಸ್​ ಆಫೀಸ್​ನಲ್ಲಿ ಅದರ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಆದಿತ್ಯ ಧರ್ ಅವರ ಈ ಚಿತ್ರವು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ 5 ಟಾಪ್​ ಭಾರತೀಯ ಚಿತ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆದಾಗ್ಯೂ, ಈ ಚಿತ್ರವು ಯಶ್​ ಅಭಿನಯದ ಕೆಜಿಎಫ್​ 2 ರ ಆಳ್ವಿಕೆಯನ್ನು ಮೊಟಕುಗೊಳಿಸಿದೆ. ಧುರಂಧರ್​ ಐದನೇ ಶುಕ್ರವಾರದ ಕುಸಿತದ ಹೊರತಾಗಿಯೂ ಈ ಸಿನಿಮಾವು ಭಾನುವಾರ ಅದ್ಭುತ ಜಿಗಿತವನ್ನು ತೋರಿಸುವ ಮೂಲಕ ಈ ಚಿತ್ರವು ವಿಶ್ವಾದಾದ್ಯಂತ 1200 ಕೋಟಿ ರೂಗಳನ್ನು ದಾಟಿದೆ.
ಸ್ಯಾಕ್ನಿಲ್ಕ್ ವರದಿ ಪ್ರಕಾರ, ಧುರಂಧರ್ ತನ್ನ 31 ನೇ ದಿನದಂದು ಭಾರತದಲ್ಲಿ 12.75 ಕೋಟಿ ರೂ. ಗಳಿಸಿದೆ. ಇದರಿಂದಾಗಿ ದೇಶೀಯ ಒಟ್ಟು ಮೌಲ್ಯ 772.25 ಕೋಟಿ ರೂ. ತಲುಪಿದೆ. ಧುರಂಧರ್​ 30 ನೇ ದಿನದವರೆಗೆ ವಿಶ್ವಾದ್ಯಂತ 1186.25 ಕೋಟಿ ರೂ. ಗಳಿಕೆ ಮಾಡಿದ್ದು, ವಿಶ್ವಾದ್ಯಂತ 1200 ಕೋಟಿ ರೂ. ಗಡಿ ದಾಟಿದೆ. ಅಂದಹಾಗೇ, ಐದನೇ ಭಾನುವಾರದಂದು ವಿದೇಶಿ ಗಳಿಕೆ ಸುಮಾರು 15-19 ಕೋಟಿ ರೂ. ಹೆಚ್ಚಾಗಲಿದ್ದು, ವಿಶ್ವಾದ್ಯಂತ ಗಳಿಕೆ 1200-1216 ಕೋಟಿ ರೂ. ತಲುಪಲಿದೆ.

ಯಶ್ ರನ್ನು ಹಿಂದಿಕ್ಕಿದ ರಣವೀರ್ ಸಿಂಗ್!

ಹೌದು, ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಸಿಂಗ್ ಅವರ ಧುರಂಧರ್ ಚಿತ್ರವು ಯಶ್ ಅವರ ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನು ಮೀರಿಸಿ ಹೊಸ ಇತಿಹಾಸ ಸೃಷ್ಟಿಸಿದೆ. ಧುರಂಧರ್​ ಬಿಡುಗಡೆಯಾಗಿ 31 ದಿನಗಳಲ್ಲಿ ವಿಶ್ವದಾದ್ಯಂತ ಒಟ್ಟು 1218 ಕೋಟಿ ರೂ.ಗಳನ್ನು ಗಳಿಕೆ ಮಾಡಿದ್ದು, ಕೆಜಿಎಫ್​-2 ರ ಕಲೆಕ್ಸನ್​ ಅನ್ನು ಮೀರಿಸಿದೆ. ಇದು ಭಾರತದಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ 5 ನೇ ಚಿತ್ರವಾಗಿ ಹೊರಹೊಮ್ಮಿದೆ.
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವವರು ಆಮಿರ್ ಖಾನ್ ಅವರ ದಂಗಲ್ ಚಿತ್ರವು ವಿಶ್ವಾದ್ಯಂತ 2000 ಕೋಟಿ ರೂ. ಗಳನ್ನು ತಲುಪಿದ್ದು, ಈ ಮೈಲಿಗಲ್ಲು ಸಾಧಿಸಿದ ಏಕೈಕ ಚಿತ್ರವಾಗಿದೆ. ಆದಾಗ್ಯೂ, ದಂಗಲ್ ನಂತರ, ಪ್ರಭಾಸ್ ಅವರ ಬಾಹುಬಲಿ-2 1788.06 ಕೋಟಿಯೊಂದಿಗೆ 2 ನೇ ಸ್ಥಾನವನ್ನು ಪಡೆದುಕೊಂಡಿದೆ. ನಂತರ ಪುಷ್ಪ-2 1742.1 ಕೋಟಿ ಹಾಗೂ ಆರ್​ ಆರ್​ ಆರ್​ 1230 ಕೋಟಿಯನ್ನು ಬಾಕ್ಸ್​​ ಆಫೀಸ್​ನಲ್ಲಿ ಪಡೆದುಕೊಂಡಿದೆ.
ಆದಿತ್ಯ ಧರ್​ ಅವರ ಮುಂದಿನ ಗುರಿ ಎಸ್.ಎಸ್. ರಾಜಮೌಳಿ ಅವರ ಆರ್ ಆರ್ ಆರ್ ಚಿತ್ರವನ್ನು ಬಾಕ್ಸ್ ಆಫೀಸ್ ನಲ್ಲಿ ಸೋಲಿಸುವುದಾಗಿದೆ. ಈ ಟ್ರೆಂಡ್​ ಜೊತೆಗೆ ಮುಂದುವರೆದರೆ, ಈ ಮೈಲಿಗಲ್ಲು ಸಾಧಿಸಬಹುದಾದಂತೆ ಕಾಣುತ್ತಿದೆ. ಆದಾಗ್ಯೂ, ಧುರಂಧರ್​ ನಂತರ ಧುರಂಧರ್​ ಭಾಗ 2 ಮಾರ್ಚ್​ನಲ್ಲಿ 2026 ರಲ್ಲಿ ತೆರೆಕಾಣಲಿದ್ದು, ಇನ್ನೂ ಹೆಚ್ಚಿನ ದಾಖಲೆಗಳ ನಿರೀಕ್ಷೆಯಿದೆ. ಯಶ್ ಅವರ ಟಾಕ್ಸಿಕ್ ಕೂಡ 2026ರಲ್ಲಿ ರಿಲೀಸ್ ಆಗಲಿದ್ದು, ಬಾಕ್ಸ್ ಆಫೀಸ್‌ನಲ್ಲಿ ಮತ್ತೊಂದು ಭರ್ಜರಿ ಕಾಳಗ ನಡೆಯಬಹುದು ಎಂದು ಊಹಿಸಬಹುದು (ಏಜೆನ್ಸೀಸ್​).