ವೈರಲ್​ ಆಗುತ್ತಿರುವ ಸಲ್ಮಾನ್ ಖಾನ್​ ಫೋಟೊ, ಧುರಂಧರ್​ 2 ಪೋಸ್ಟರ್​​  
ಬಾಲಿವುಡ್

Dhurandhar 2: ಬಡೇ ಸಾಬ್' ಆಗಿ ಬರ್ತಾರಾ ಸಲ್ಮಾನ್ ಖಾನ್? ವೈರಲ್ ಫೋಟೋ ಹಿಂದಿರುವ ಅಸಲಿ ಸತ್ಯವೇನು?

ಪ್ರಮುಖ ಮುಖ್ಯಾಂಶಗಳು

  • ಈ ವರ್ಷದ ಬಹು ನೀರಿಕ್ಷಿತ ಸಿನಿಮಾ ಧುರಂಧರ್​ 2
  • ಬಡೇ ಸಾಬ್​ ಪಾತ್ರದಲ್ಲಿ ಸಲ್ಮಾನ್​ ಖಾನ್​ ನಟಿಸಲಿದ್ದಾರೆ ಎಂಬ ವದಂತಿ
  • ಧುರಂಧರ್​ 2 ಮಾರ್ಚ್​ 19 ರಂದು ಬಿಡುಗಡೆ
  • ಇದೇ ದಿನ ಯಶ್​ ಅಭಿನಯದ ಟಾಕ್ಸಿಕ್​​ ಸಿನಿಮಾ ಸಹ ತೆರೆಕಾಣಲಿದೆ
ಬಾಲಿವುಡ್​: ಈಗ ಸದ್ಯ ಭಾರತದ ಪ್ರತಿ ಸಿನಿಮಾ ಪ್ರೇಮಿ ತುದಿಗಾಲಿನಿಂದ ನೀರಿಕ್ಷೆ ಮಾಡುತ್ತಿರುವ ಸಿನಿಮಾ ಯಾವುದೆಂದರೆ ಧುರಂಧರ್​ 2 (Dhurandhar 2), ಮಂಗಳವಾರ (ಫೆ.3) ಈ ಸಿನಿಮಾದ ಟೀಸರ್​ ರಿಲೀಸ್​ ಆಗಿದ್ದು ಮಾರ್ಚ್​ 19 ರಂದು ವಿಶ್ವದಾದ್ಯಂತ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಈ ಸಿನಿಮಾದ ಕುರಿತಂತೆ ಹಲವಾರು ವಿಷಯಗಳು ಚರ್ಚೆಯಲ್ಲಿವೆ, ಆದರೆ ಈ ಒಂದು ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಇದೇನಾದರೂ ನಿಜವಾದರೆ ಸಿನಿಮಾದ ಮೊದಲ ಭಾಗಕ್ಕಿಂತ ಹೆಚ್ಚಿನ ಗಳಿಕೆ ಕಟ್ಟಿಟ್ಟ ಬುತ್ತಿ ಎಂದು ಸಿನಿ ಪ್ರೀಯರು ಹೇಳುತ್ತಿದ್ದಾರೆ.
ಅಷ್ಟಕ್ಕೂ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿರುವ ಸಂಗತಿ ಏನೆಂದರೆ ಬಾಲಿವುಡ್​ ಖ್ಯಾತ ನಟ ಸಲ್ಮಾನ್​ ಖಾನ್ ಧುರಂಧರ್​ 2 ಸಿನಿಮಾದಲ್ಲಿ 'ಬಡೇ ಸಾಬ್​' ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಈ ಸಿನಿಮಾದ ಮೊದಲ ಭಾಗದಲ್ಲಿ ಅಭಿನಯಿಸಿದ್ದ ಅರ್ಜುನ್ ರಾಂಪಾಲ್ (ಇಲಿಯ್ಯಾಸ್​ ಕಶ್ಮೀರಿ) ​ ಮತ್ತು ಸಂಜಯ್​ ದತ್ತ್ ( ಚೌಧರಿ ಅಸ್ಲಂ) ಜತೆಗೆ ಸಲ್ಮಾನ್​ ಖಾನ್​ ಇರುವ ಫೋಟೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಆದರೆ ಈ ವದಂತಿಗೆ ಧುರಂಧರ್​ ಚಿತ್ರತಂಡವಾಗಲಿ ಅಥವಾ ಸಲ್ಮಾನ್​ ಖಾನ್​ ಆಗಲಿ ಯಾವುದೇ ಸ್ಪಷ್ಟನೆಯನ್ನು ಇಲ್ಲಿಯವರೆಗೆ ನೀಡಿಲ್ಲ. ಕೆಲವರಂತೂ ಇದು ಶುದ್ಧ ಸುಳ್ಳು ವೈರಲ್​ ಆಗುತ್ತಿರುವ ಫೋಟೊ ಎಐ ಯಿಂದ ರಚಿತವಾಗಿದೆ ಎಂದು ಹೇಳುತ್ತಿದ್ದಾರೆ. ಮತ್ತೊಂದು ಗುಂಪಿನ ಜನರು ಸಲ್ಮಾನ್​ ಖಾನ್​ ಈ ಸಿನಿಮಾದಲ್ಲಿ ಕೆಮಿಯೋ ರೋಲ್​ ಅಂದರೆ ಅತಿಥಿ ಪಾತ್ರದಲ್ಲಿ ಅಭಿನಯಿಸಬಹುದು ಎಂದೂ ಹೇಳುತ್ತಿದ್ದರೆ. ಈ ಎಲ್ಲಾ ಅಂತೆ-ಕಂತೆಗಳಿಗೆ ಮಾರ್ಚ್​ 19 ರಂದು ಸಿನಿಮಾ ಮಂದಿರದಲ್ಲೇ ಉತ್ತರ ದೊರೆಯಲಿದೆ ಎನ್ನುವುದು ಸಿನಿಮಾ ತಜ್ಞರ ಅಭಿಪ್ರಾಯವಾಗಿದೆ.

ಯಾರು ಈ ಬಡೇ ಸಾಬ್​ ?

ಧುರಂಧರ್​ ಸಿನಿಮಾದ ಬಹು ಚರ್ಚಿತ ಪಾತ್ರವೆಂದರೆ ಈ ಬಡೇ ಸಾಬ್​ ಪಾತ್ರವಾಗಿದೆ. ಸಿನಿಮಾದ ಮೊದಲ ಭಾಗದ ಹಲವಾರು ಸನ್ನಿವೇಶಗಳಲ್ಲಿ ಈ ಪಾತ್ರದ ಕುರಿತು ವಿವರಣೆಗಳನ್ನು ನೀಡಲಾಗಿದೆ. ಆದರೆ ಈ ಪಾತ್ರ ನೈಜ ಜೀವನದ ಯಾವ ವ್ಯಕ್ತಯನ್ನು ಆಧರಿಸಿದೆ ಎಂದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಆದರೆ ಈ ಪಾತ್ರದ ಕುರಿತು ಸಿನಿಮಾದಲ್ಲಿ ನೀಡಲಾದ ವಿವಿರಣೆಯ ಪ್ರಕಾರ ಈ ಪಾತ್ರವು ಭೂಗತ ಪಾತಕಿ ದಾವೂದ್​ ಇಬ್ರಾಹಿಂನನ್ನು ಆಧಾರವಾಗಿಟ್ಟುಕೊಂಡು ಹೆಣೆಯಲಾದ ಪಾತ್ರವೆಂದು ಹೇಳಲಾಗುತ್ತಿದೆ.

ಧುರಂಧರ್ 2 ಟೀಸರ್ ಬಿಡುಗಡೆ

ಮಂಗಳವಾರ (ಫೆ.3) ರಣವೀರ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಮುಂಬರುವ ಸೀಕ್ವೆಲ್‌ನ ಟೀಸರ್​ನ್ನು ಬಿಡುಗಡೆ ಮಾಡಿದ್ದಾರೆ. ಈ ಟೀಸರ್‌ನಲ್ಲಿ ರಣವೀರ್ ಸಿಂಗ್ ಅವರ ಹಮ್ಜಾ ಪಾಕಿಸ್ತಾನದಲ್ಲಿ ಭಾರತದ ಶತ್ರುಗಳ ವಿರುದ್ಧ ಹೋರಾಡುವ ಹಲವಾರು ಝಲಕ್‌ಗಳಿವೆ. ಅವರು ಯೇ ನಯಾ ಹಿಂದೂಸ್ತಾನ್ ಹೈ ಯೇ ಘರ್ ಮೇ ಗುಸೇಗಾ ಭಿ ಔರ್ ಮಾರೇಗಾ ಭಿ ಎಂದು ಹೇಳುವುದನ್ನು ನಾವು ಕೇಳಬಹುದಾಗಿದೆ. ಈ ಟೀಸರ್​ನಲ್ಲಿ ಅರ್ಜುನ್ ರಾಂಪಾಲ್, ಆರ್. ಮಾಧವನ್ ಮತ್ತು ಸಂಜಯ್ ದತ್ ಅವರ ಝಲಕ್‌ಗಳಿವೆ.
ಆದಿತ್ಯ ಧರ್ ನಿರ್ದೇಶನದ ಧುರಂಧರ್ 2 ಮಾರ್ಚ್ 19, 2026 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದ್ದು, ಇದೇ ದಿನ ಯಶ್ ಅವರ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್ ಕೂಡ ಬಿಡುಗಡೆಯಾಗಲಿದೆ. ಅಂದರೆ ಈ ದಿನ ಭಾರತೀಯ ಸಿನಿಮಾ ರಂಗದಲ್ಲಿ ಎರಡು ಮಧಗಜಗಳ ಕಾಳಗ ನಡೆಯುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.(ಏಜನ್ಸೀಸ್​).