ಈ ಸಿನಿಮಾ ಒಂದು ಪ್ರೊಪಗಾಂಡಾ: ವಾರಿಸ್​ ಪಠಾಣ್​ 
ಬಾಲಿವುಡ್

ಧುರಂಧರ್​ 2 ಇದೊಂದು ಪ್ರೊಪಗಾಂಡಾ ಸಿನಿಮಾ: ಇದರಲ್ಲಿ ತೋರಿಸಿರುವುದೆಲ್ಲಾ ಸುಳ್ಳು: AIMIM ವಕ್ತಾರ ವಾರಿಸ್ ಪಠಾಣ್ ಆಕ್ರೋಶ! Waris Pathan on Dhurandhar 2

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್​ 2
  • ಮೊದಲ ದಿನ ಬರೊಬ್ಬರಿ 143 ಕೋಟಿ ಬಾಚಿದ ಸಿನಿಮಾ
  • ಈ ಸಿನಿಮಾ ಒಂದು ಪ್ರೊಪಗಾಂಡಾ: ವಾರಿಸ್​ ಪಠಾಣ್​
  • ಈ ಸಿನಿಮಾದಲ್ಲಿ ತೋರಿಸಿರುವುದೆಲ್ಲಾ ಸುಳ್ಳು: ಎಐಎಮ್​ಐಎಮ್ ವಕ್ತಾರ
ಹೈದರಾಬಾದ್​: ಗುರುವಾರ (ಮಾರ್ಚ್​ 19) ಧುರಂಧರ್​ 2: ದಿ ರಿವೆಂಜ್​ ಸಿನಿಮಾ ತೆರೆಕಂಡ ಬೆನ್ನಲ್ಲೇ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಲು ಪ್ರಾರಂಭಿಸಿದೆ. ತೆರೆಕಂಡ ಮೊದಲ ದಿನವೇ ಸುಮಾರು 143 ಕೋಟಿ ಗಳಿಸುವ ಮೂಲಕ ಅತ್ಯಧಿಕ ಹಣ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಸಿನಿಮಾ ಎಷ್ಟು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆಯೋ ಅಷ್ಟೇ ವಿರೋಧವನ್ನು ಸಹ ಎದುರಿಸುತ್ತಿದೆ. ಈಗ ಈ ಸಿನಿಮಾ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಎಐಎಮ್​ಐಎಮ್​ ಪಕ್ಷದ ವಕ್ತಾರ ವಾರಿಸ್ ಪಠಾಣ್ (Waris Pathan on Dhurandhar 2), ಈ ಧುರಂಧರ್​ ಸಿನಿಮಾ ಒಂದು ಪ್ರೊಪಗಾಂಡಾವಗಿದ್ದು ಇದನ್ನು ಕೂಡಲೇ ಬ್ಯಾನ್​ ಮಾಡಬೇಕೆಂದು ಆಕ್ರೋಶ ಹೊರಹಾಕಿದ್ದಾರೆ.

ಈ ಸಿನಿಮಾ ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತಿದೆ!

ಧುರಂಧರ್ 2 ಸಿನಿಮಾ ಬಗ್ಗೆ ತಮ್ಮ ಆಕ್ರೋಶ ವ್ಯಕ್ತ ಪಡಿಸಿರುವ ವಾರಿಸ್ ಪಠಾಣ್, ಕೆಲ ತುಚ್ಚ ಮನಸ್ಥಿತಿಯುಳ್ಳ ಜನರು ಬಿಡಿಗಾಸನ್ನು ಸಂಪಾದಿಸುವ ಸಲುವಾಗಿ ಈ ರೀತಿಯ ಸಿನಿಮಾವನ್ನು ನಿರ್ಮಿಸುತ್ತಾರೆ. ಇವರಿಗೆ ಸುಳ್ಳು ಸುದ್ದಿಯನ್ನು ಹರಡುವುದನ್ನು ಬಿಟ್ಟು ಬೇರೇನೂ ತಿಳಿದಿಲ್ಲ, ಸರ್ಕಾರ ಈ ಕೂಡಲೇ ಈ ಸಿನಿಮಾವನ್ನು ನಿಷೇಧಿಸಬೇಕೆಂದು ಪಠಾಣ್ ಒತ್ತಾಯಿಸಿದ್ದಾರೆ.
ಇದು ಬಿಜೆಪಿ ಸಿನಿಮಾ!
ವಾರಿಸ್ ಪಠಾಣ್​ಗೂ ಮೊದಲು ಈ ಸಿನಿಮಾದ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್​ ಸಂಸದ ತಾರೀಕ್​ ಅನ್ವರ್​, ಈ ಧುರಂಧರ್​ ಸಿನಿಮಾ ಬಿಜೆಪಿ ಪ್ರಾಯೋಜಿತ ಸಿನಿಮಾವಾಗಿದೆ. ಈ ಸಿನಿಮಾ ಕೇವಲ ಕೋಮು ದ್ವೇಷವನ್ನು ಜನರಲ್ಲಿ ಹರಡುತ್ತಿದ್ದು, ಇದು ದೇಶಕ್ಕೆ ಮುಂದಿನ ದಿನಗಳಲ್ಲಿ ಭಾರಿ ಪೆಟ್ಟನ್ನು ನೀಡಲಿದೆ ಎಂದು ಅವರು ಹೇಳಿದ್ದಾರೆ.

ಸತ್ಯ ಹೇಳಿದರೆ ಮೈಯೆಲ್ಲಾ ಉರಿಯುತ್ತದೆ

ಜಮ್ಮು-ಕಾಶ್ಮೀರದ ಮಾಜಿ ಪೊಲೀಸ್​ ಮಹಾ ನಿರ್ದೇಶಕ ಎಸ್​.ಪಿ. ವೈದ್​, ಧುರಂಧರ್​ ಸಿನಿಮಾದಲ್ಲಿ ತೋರಿಸಿರುವ ಬಹುತೇಕ ಘಟನೆಗಳು ಸತ್ಯಾಂಶದಿಂದ ಕೂಡಿದೆ. ಈ ಸಿನಿಮಾ ಕಟು ಸತ್ಯವನ್ನು ಹೇಳಿರುವ ಕಾರಣ ಕೆಲವೊಬ್ಬರಿಗೆ ಇದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಈ ಸಿನಿಮಾದಲ್ಲಿ ತೋರಿಸಿದಂತೆ ಅತೀಕ್​ ಅಹ್ಮದ್​ ಒಬ್ಬ ರೌಡಿ ಶೀಟರ್​, ವೆಪನ್​ ಡೀಲರ್​. ಅವನಿಗೆ ಪಾಕಿಸ್ತಾನದೊಂದಿಗೆ ಸಂಬಂಧವಿತ್ತು ಎಂದು ಭಾರತವೇ ದೃಢ ಪಡಿಸಿದೆ ಎಂದು ವೈದ್​ ಹೇಳಿದ್ದಾರೆ.

ಧುರಂಧರ್​ 2 ಬಗ್ಗೆ

ಧುರಂಧರ್​ 2 ಇದು ಧುರಂಧರ್​ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ರಾಕೇಶ್​ ಬೇಡಿ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಡ್ಯಾನಿಶ್​ ಇಕ್ಬಾಲ್​, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾದ ನಿರ್ದೇಶಕ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್​).