'ಧುರಂಧರ್​ 2' ಚಿತ್ರದ ಪೋಸ್ಟರ್​ 
ಬಾಲಿವುಡ್

113 ವರ್ಷಗಳಲ್ಲಿ ಇದೇ ಮೊದಲು... ಬಾಕ್ಸ್ ಆಫೀಸ್​ ಮಾತ್ರವಲ್ಲ! ಚಿತ್ರರಂಗದಲ್ಲಿಯೂ ದಾಖಲೆ ಬರೆದ 'ಧುರಂಧರ್​ 2' | Dhurandhar 2

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ ಸಿನಿಮಾ ಕ್ಷೇತ್ರದಲ್ಲೇ ಕ್ರಾಂತಿ ಸೃಷ್ಟಿಸಿದ ಧುರಂಧರ್​ 2 ಸಿನಿಮಾ
  • ಆಸ್ಟ್ರೇಲಿಯಾ, ಕೆನಡಾ ಸೇರಿ ನಾನಾ ಭಾಗದ ಸಿನಿ ಪ್ರಿಯರಿಂದ ಮೆಚ್ಚುಗೆ
  • ಮೊದಲ ದಿನವೇ 236.63 ಕೋಟಿ ರೂ. ಗಳಿಸಿದ ರಣವೀರ್ ಸಿಂಗ್​ ಚಿತ್ರ
ಮುಂಬೈ: 2025ರ ಡಿಸೆಂಬರ್​ನಲ್ಲಿ ಬಾಲಿವುಡ್‌ ಅಂಗಳದಲ್ಲಿ ಬಿಡುಗಡೆಯಾಗಿ, ಜಾಗತಿಕ ಮಟ್ಟದಲ್ಲಿ ಸಖತ್​ ಸದ್ದು ಮಾಡಿದ್ದ ಸ್ಪೈ-ಥ್ರಿಲ್ಲರ್ 'ಧುರಂಧರ್' (Dhurandhar) ಸಿನಿಮಾದ ಎರಡನೇ ಭಾಗವು ಸದ್ಯ ಬ್ಲಾಕ್​ಬಸ್ಟರ್​ ಹಿಟ್​ ಆಗುವತ್ತ ಸಾಗಿದೆ. ತೆರೆಕಂಡ ಮೊದಲ ದಿನವೇ ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ 238 ಕೋಟಿ ರೂ. ಕಬಳಿಸಿದ ಚಿತ್ರ, ಸಿನಿಪ್ರಿಯರಿಂದ ವ್ಯಾಪಕ ಮೆಚ್ಚುಗೆ, ಪ್ರಶಂಸೆ ಮತ್ತು ಉತ್ತಮ ವಿಮರ್ಶೆಗಳನ್ನು ಸ್ವೀಕರಿಸುತ್ತಿದೆ. ರಣವೀರ್​ ಸಿಂಗ್ ನಟನಾಗಿ ಅಭಿನಯಿಸಿರುವ ಈ ಚಿತ್ರಗಳ ಯಶಸ್ಸಿನ ಹಿಂದೆ ನಿರ್ದೇಶಕ ಆದಿತ್ಯ ಧರ್ ಅವರ ಪಾತ್ರವು ಪ್ರಮುಖವಾಗಿದೆ ಎಂಬುದು ಇಲ್ಲಿ ಗಮನಾರ್ಹ. ​

113 ವರ್ಷಗಳ ಹಿಂದಿ ಚಿತ್ರರಂಗದಲ್ಲಿ...

'ಪದ್ಮಾವತ್', 'ರಾಮಲೀಲಾ', 'ಬಾಜಿ ರಾವ್​ ಮಸ್ತಾನಿ' ಸೇರಿದಂತೆ ಬಾಲಿವುಡ್​ನಲ್ಲಿ ಹಲವು ಹಿಟ್​​ ಸಿನಿಮಾಗಳನ್ನು ನೀಡಿರುವ ರಣವೀರ್​ ಸಿಂಗ್, 'ಧುರಂಧರ್'​ ಮೂಲಕ ಇದೀಗ ಹಿಂದಿ ಚಿತ್ರೋದ್ಯಮದಲ್ಲಿ ಹೊಸ ಅಲೆಯನ್ನೇ ತಂದಿದ್ದಾರೆ.​ 113 ವರ್ಷಗಳ ಹಿಂದಿ ಚಿತ್ರರಂಗದಲ್ಲಿ, ಈ ಮಟ್ಟಿಗಿನ ಓಪನಿಂಗ್​ ಪಡೆದ ಮೊದಲ ಚಿತ್ರ ಧುರಂಧರ್ ಆಗಿದೆ. ಇದು ಬಾಲಿವುಡ್ ​ಅಂಗಳದಲ್ಲಿ ಸದ್ಯ ಹೊಸ ಕ್ರಾಂತಿ ಸೃಷ್ಟಿಸಿದೆ. ಕೇವಲ ಹಿಂದಿ ಮಾತ್ರವಲ್ಲ, ಬೇರೆ ಭಾಷೆಯ ಸಿನಿಮಾ ಗಳಿಕೆಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ.
ಸಾಮಾನ್ಯವಾಗಿ ಬಹುತೇಕ ಸಿನಿಮಾಗಳ ಎರಡನೇ ಭಾಗವನ್ನು ಪ್ರೇಕ್ಷಕರು ಅಷ್ಟಾಗಿ ಒಪ್ಪಿಕೊಳ್ಳಲ್ಲ. ಮೆಚ್ಚಲೇಬೇಕು ಎಂದಾದರೆ, ಒಳ್ಳೆಯ ಕಥೆಯನ್ನು ಹೆಣೆಯಬೇಕು. ಅದಕ್ಕೆ ತಕ್ಕಂತೆ, ಕನೆಕ್ಟಿವಿಟಿಯನ್ನು ನೀಡಬೇಕು. ಆ ಕೆಲಸವನ್ನು 'ಧುರಂಧರ್' ಚಿತ್ರದ ಎರಡು ಭಾಗಗಳು ಯಶಸ್ವಿಯಾಗಿ ಮಾಡಿವೆ. 'ಆರ್‌ಆರ್‌ಆರ್' (ಮೊದಲ ದಿನ, 223 ಕೋಟಿ ರೂ.), 'ಬಾಹುಬಲಿ 2' (214 ಕೋಟಿ ರೂ.), 'ಕಲ್ಕಿ 2898 ಎಡಿ' (174 ಕೋಟಿ ರೂ.) ಮತ್ತು 'ಕೆಜಿಎಫ್ 2' (159 ಕೋಟಿ ರೂ.) ಸೇರಿದಂತೆ ಹಲವು ಸ್ಟಾರ್​ ನಟರ ಚಿತ್ರಗಳ ದಾಖಲೆಯನ್ನು ಉಡೀಸ್​ ಮಾಡಿದೆ.

ಎಲ್ಲೆಲ್ಲಿ ಡಿಮಾಂಡ್​?

ಅಮೆರಿಕ, ಯುಕೆ, ಕೆನಡಾ, ಆಸ್ಟ್ರೇಲಿಯಾ, ಯುರೋಪ್​ ಸೇರಿ ಏಷ್ಯಾದಲ್ಲಿ ಸಿನಿ ಪ್ರಿಯರಿಂದ ಭರ್ಜರಿ ಪ್ರತಿಕ್ರಿಯೆ ಕೇಳಿಬಂದಿದೆ. ವಿದೇಶದಲ್ಲಿ ಭರ್ಜರಿ ಓಪನಿಂಗ್​ ಕಂಡ ಮೊದಲ ಸಿನಿಮಾ ಇದಾಗಿದ್ದು, ಎಂದಿನಂತೆ ಕೆಲವು ದೇಶಗಳಲ್ಲಿ ಚಿತ್ರವನ್ನು ನಿಷೇಧಿಸಲಾಗಿದೆ,(ಏಜೆನ್ಸೀಸ್).