ಬಾಲಿವುಡ್ ನನ್ನನ್ನು ಮರೆತಿದೆ: ರಾಹುಲ್ ದೇವ್
- ಬಾಲಿವುಡ್ ನನ್ನನ್ನು ಮರೆತಿದೆ: ರಾಹುಲ್ ದೇವ್
- ಒಂದು ಕಾಲದಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದ ರಾಹುಲ್ ದೇವ್
- ನನ್ನ ಹೆಂಡತಿ ಸಾವಿನಿಂದ ನಾನು ಬಾಲಿವುಡ್ನಿಂದ ದೂರವಾದೆ
- 80 ಸಿನಿಮಾಗಳಲ್ಲಿ ಅಭಿನಯಿಸಿದ್ದರು ಒಂದು ಅವಕಾಶ ಸಿಗುತ್ತಿಲ್ಲ
ಮುಂಬೈ: ಒಂದು ಕಾಲದಲ್ಲಿ ಬಾಲಿವುಡ್ನ ಬಹುತೇಕ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಮಿಂಚುತ್ತಿದ್ದ ರಾಹುಲ್ ದೇವ್ (Rahul Dev on Bollywood), ಈಗ ನನಗೆ ಒಂದೇ ಒಂದು ಸಿನಿಮಾದಲ್ಲಿ ಚಿಕ್ಕ ಪಾತ್ರವು ದೊರೆಯುತ್ತಿದ್ದ ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ಬಾಲಿವುಡ್ ನನ್ನನ್ನು ಮರೆತಿದೆ!
ಹಿಂದಿ ಸೇರಿದಂತೆ ಬಹುತೇಕ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಸಿನಿಮಾಗಳಲ್ಲಿ ಹೆಚ್ಚಿನದಾಗಿ ಖಳನಾಯಕನ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿದ್ದ ರಾಹುಲ್ ದೇವ್ ದಿಢೀರಾಗಿ ಬಣ್ಣದ ಲೋಕದಿಂದ ಮರೆಯಾಗಿ ಬಿಟ್ಟರು.
ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನನ್ನ ಹೆಂಡತಿ ಒಮ್ಮಲೆ ಆಸ್ಪತ್ರೆಗೆ ದಾಖಲಾಗಿ ಹಾಗೆಯೇ ಸಾವನ್ನಪ್ಪಿದಳು. ಆಗ ನಾನು ಬಾಲಿವುಡ್ನಲ್ಲಿ ಸಕ್ರೀಯನಾಗಿದ್ದೆ, ಅಲ್ಲಿವರೆಗೆ ಸುಮಾರು 80 ಸಿನಿಮಾಗಳಲ್ಲಿ ಅಭಿನಯಿಸಿದ್ದೆ. ಆದರೆ ಮಗನನ್ನು ನೋಡಿಕೊಳ್ಳುವ ಉದ್ದೇಶದಿಂದ ಬಾಲಿವುಡ್ನಿಂದ ದೂರ ಸರಿದೆ. ಈಗ ಬಾಲಿವುಡ್ ನನ್ನನ್ನು ಮರೆತು ಬಿಟ್ಟಿದೆ ಎಂದು ಹೇಳಿದ್ದಾರೆ.
ನೀನು ಮತ್ತೆ ಸಿನಿಮಾಗೆ ಮರಳಬೇಡ
ನನ್ನ ಮಗ ಈಗ ದೊಡ್ಡವನಾಗಿದ್ದಾನೆ, ಅವನು ಈಗ ಲಂಡನ್ನಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾನೆ. ಹೀಗಾಗಿ ನಾನು ಮತ್ತೆ ಸಿನಿಮಾ ಕ್ಷೇತ್ರಕ್ಕೆ ಮರಳಲು ಮನಸ್ಸು ಮಾಡಿದ್ದೆ. ಆದರೆ ನನ್ನ ಗುರುಗಳು ನೀನು ಮತ್ತೆ ಬಾಲಿವುಡ್ಗೆ ಬರಬೇಡ, ಈಗ ಮೊದಲಿದ್ದ ಸ್ಥಿತಿ ಇಲ್ಲ ಎಂದು ಹೇಳಿದ್ದರು. ಆದರೂ ನಾನು ಮತ್ತೆ ಬಣ್ಣದ ಲೋಕಕ್ಕೆ ಮರಳಬೇಕೆಂದು ಮನಸ್ಸು ಮಾಡಿದ್ದೆ.
ಆದರೆ ನಾನು 80 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರೂ ಸಹ ಕಳೆದ 4 ವರ್ಷಗಳಿಂದ ಒಂದೇ ಒಂದು ಚಿಕ್ಕ ಪಾತ್ರ ಸಹ ದೊರೆಯುತ್ತಿಲ್ಲ. ಇದು ಬಾಲಿವುಡ್ನ ತಪ್ಪೆಂದು ನಾನು ಹೇಳುವುದಿಲ್ಲ. ಆದರೆ ನನ್ನನ್ನು ಮತ್ತು ನಾನು ಮಾಡಿದ ಪಾತ್ರಗಳನ್ನು ಬಾಲಿವುಡ್ ಮತ್ತು ಜನ ಮರೆತು ಹೋದರು ಎಂದು ಅನ್ನಿಸುತ್ತದೆ ಎಂದು ರಾಹುಲ್ ದೇವ್ ಹೇಳಿದ್ದಾರೆ, (ಏಜನ್ಸೀಸ್).