Deepika Padukone ಚಿತ್ರ Instagram
- ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಎರಡನೇ ಮಗುವಿನ ಆಗಮನದ ಸುದ್ದಿ ಹಂಚಿಕೊಂಡಿದ್ದಾರೆ
- ಮೊದಲ ಬಾರಿಗೆ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದ್ದಾರೆ
- ಮುಂಬೈ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ಈ ಭೇಟಿಯ ದೃಶ್ಯಗಳು ಎಲ್ಲೆಡೆ ವೈರಲ್
Deepika Padukone: ಬಾಲಿವುಡ್‌ನ ಸ್ವೀಟ್ ಕಪಲ್ಸ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಎರಡನೇ ಮಗುವಿನ ಆಗಮನದ ಸುದ್ದಿಯನ್ನು ಹಂಚಿಕೊಂಡ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದ್ದಾರೆ. ಆದಾಗ್ಯೂ, ಮಂಗಳವಾರ (ಏ.28) ಮುಂಬೈ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ಈ ಭೇಟಿಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿವೆ.
ದೀಪಿಕಾ ತನ್ನ ಏರ್‌ಪೋರ್ಟ್ ಲುಕ್ ಅನ್ನು ಸರಳವಾಗಿ ಮತ್ತು ಸ್ಟೈಲಿಶ್ ಆಗಿ ಇರಿಸಿಕೊಂಡಿದ್ದು, ಸಡಿಲವಾದ ಮತ್ತು ಆರಾಮದಾಯಕವಾದ ಕೋಬಾಲ್ಟ್ ನೀಲಿ ಬಣ್ಣದ 'ಕೋ-ಆರ್ಡ್ ಸೆಟ್' ಧರಿಸಿದ್ದರು. ಇದು ದೊಡ್ಡ ಗಾತ್ರದ ಬಟನ್-ಡೌನ್ ಶರ್ಟ್ ಮತ್ತು ನೇರ-ಕಟ್ ಪ್ಯಾಂಟ್ ಆಗಿತ್ತು. ಅವರು ಹಳದಿ ಬಣ್ಣದ ಸ್ನೀಕರ್ಗಳೊಂದಿಗೆ ಉಡುಪನ್ನು ಜೋಡಿಸಿದ್ದು, ತಮ್ಮ ಕೈಯಲ್ಲಿ ಸರಳವಾದ ಕಪ್ಪು ಬ್ಯಾಗ್ ಹಿಡಿದು ಆರಾಮವಾಗಿ ನಡೆದು ಬರುತ್ತಿದ್ದರು.
ದೀಪಿಕಾ ಹಿಂದೆಯೇ ರಣವೀರ್ ಸಿಂಗ್ ಹೆಜ್ಜೆ ಹಾಕಿದ್ದು, ಓವರ್ ಸೈಜ್ ಬಿಳಿ ಟೀ ಶರ್ಟ್ ಮತ್ತು ಬ್ಯಾಗಿ ಕಾರ್ಗೋ ಜೀನ್ಸ್ ಧರಿಸಿದ್ದರು. ಜೊತೆಗೆ ಕಪ್ಪು ಬಣ್ಣದ ಕ್ರಾಸ್‌ಬಾಡಿ ಬ್ಯಾಗ್ ಮತ್ತು ಡಾರ್ಕ್ ಸನ್ಗ್ಲಾಸ್ನೊಂದಿಗೆ ತಮ್ಮ ಲುಕ್ನ್ನು ಅಲಂಕರಿಸಿದ್ದರು.
ಎರಡನೇ ಬಾರಿಗೆ ತಾಯಿಯಾಗುತ್ತಿರುವ ದೀಪಿಕಾ!
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಎರಡನೇ ಗರ್ಭಧಾರಣೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿ ಪೋಸ್ಟ್ ಮಾಡುವ ಮೂಲಕ ಶುಭ ಸುದ್ದಿಯನ್ನು ಹಂಚಿಕೊಂಡರು. ಚಿತ್ರದಲ್ಲಿ ಅವರ ಮಗಳು ದುವಾ ಗರ್ಭದಾರಣೆಯ ಕಿಟ್ ಪರೀಕ್ಷಿಸುತ್ತಿರುವ ಚಿತ್ರವನ್ನು ತೋರಿಸಲಾಗಿದೆ. ಇದು ಎರಡು ನೀಲಿ ರೇಖೆಗಳನ್ನು ಒಳಗೊಂಡಿದ್ದು, ದುವಾ ಅಕ್ಕನಾಗಳಿದ್ದಾಳೆ ಎಂದು ಹಂಚಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬಗ್ಗೆ
ಆರು ವರ್ಷಗಳ ಕಾಲ ಗುಟ್ಟಾಗಿ ಪ್ರೀತಿಸಿದ ಈ ಜೋಡಿ, 2018ರಲ್ಲಿ ಇಟಲಿಯ ಲೇಕ್ ಕೊಮೊದಲ್ಲಿ ಅದ್ಧೂರಿಯಾಗಿ ವಿವಾಹವಾದರು. ಅವರ ವಿವಾಹವು ಸಿಂಧಿ ಮತ್ತು ಸಾಂಪ್ರದಾಯಿಕ ಕೊಂಕಣಿ ಆಚರಣೆಗಳನ್ನು ಒಳಗೊಂಡಿತ್ತು. ನಂತರ ದಂಪತಿಗಳು ಮುಂಬೈ ಮತ್ತು ಬೆಂಗಳೂರಿನಲ್ಲಿ ಭವ್ಯವಾದ, ತಾರಾಬಳಗದ ಆರತಕ್ಷತೆಯನ್ನು ಆಯೋಜಿಸಿದರು (ಏಜೆನ್ಸೀಸ್).