ಚಿತ್ರ Instagram 
ಬಾಲಿವುಡ್

ತಾಯಿಯಾಗಲು ಮದುವೆಯೇ ಬೇಕಿಲ್ಲ; ಸಂಪ್ರದಾಯದ ಕಟ್ಟುಪಾಡು ಮುರಿದ ಬಾಲಿವುಡ್ ಬೆಡಗಿ ಡೈಸಿ ಶಾ! Daisy Shah

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್‌ ನಟಿ ಡೈಸಿ ಶಾ ತಮ್ಮ ನಟನೆಯ ಮೂಲಕ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ
  • ಕೇವಲ ಮಕ್ಕಳನ್ನು ಪಡೆಯುವ ಉದ್ದೇಶಕ್ಕಾಗಿ ಮದುವೆಯಾಗುವುದು ಅನಿವಾರ್ಯವಲ್ಲ
  • ನಾನು ಮದುವೆಯಾಗಲು ಬಯಸುತ್ತೇನೆ. ಆದರೆ, ಕೇವಲ ಮಕ್ಕಳನ್ನು ಪಡೆಯುವುದಕ್ಕಾಗಿ ಅಲ್ಲ
  • ಮದುವೆ ಎಂಬುದು ಪ್ರೀತಿ ಮತ್ತು ಒಡನಾಟಕ್ಕಿರಬೇಕೇ ಹೊರತು ಕೇವಲ ವಂಶೋದ್ಧಾರಕ್ಕಾಗಿ ಆಗಬಾರದು
ಮುಂಬೈ: ಬಾಲಿವುಡ್‌ ನಟಿ ಡೈಸಿ ಶಾ (Daisy Shah) ತಮ್ಮ ನಟನೆಯ ಮೂಲಕ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಮದುವೆ ಮತ್ತು ತಾಯ್ತನದ ಬಗ್ಗೆ ಮುಕ್ತ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಕೇವಲ ಮಕ್ಕಳನ್ನು ಪಡೆಯುವ ಉದ್ದೇಶಕ್ಕಾಗಿ ಮದುವೆಯಾಗುವುದು ಅನಿವಾರ್ಯವಲ್ಲ ಎನ್ನುವ ಹೇಳಿಕೆ ಸಧ್ಯ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಗೆ ನಾಂದಿ ಹಾಡಿದೆ.

ಮದುವೆಯ ಬಗ್ಗೆ ಸ್ಪಷ್ಟ ನಿಲುವು

39 ವರ್ಷದ ನಟಿ ಡೈಸಿ ಶಾ, ಮದುವೆಯ ಬಗ್ಗೆ ಸಮಾಜದ ಸಾಂಪ್ರದಾಯಿಕ ದೃಷ್ಟಿಕೋನವನ್ನು ಪ್ರಶ್ನಿಸಿದ್ದಾರೆ. ಆದಾಗ್ಯೂ, ನಾನು ಮದುವೆಯಾಗಲು ಬಯಸುತ್ತೇನೆ. ಆದರೆ, ಕೇವಲ ಮಕ್ಕಳನ್ನು ಪಡೆಯುವುದಕ್ಕಾಗಿ ಅಲ್ಲ. ಮದುವೆ ಎಂಬುದು ಪ್ರೀತಿ ಮತ್ತು ಒಡನಾಟಕ್ಕಿರಬೇಕೇ ಹೊರತು ಕೇವಲ ವಂಶೋದ್ಧಾರಕ್ಕಾಗಿ ಆಗಬಾರದು ಎಂದು ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದಂಪತಿ ಬೇರ್ಪಡುವುದು ಅಥವಾ ಆಘಾತಕಾರಿ ಡ್ರಮ್​ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇವುಗಳನ್ನು ನೋಡುವುದು ತುಂಬಾ ಭಯಾನಕವಾಗಿದೆ. ಆದರೆ, ಇಂತಹ ಸುದ್ದಿಗಳು ನನ್ನ ಮೇಲೆ ಹೇಗೆ ಪರಿಣಾಮ ಬೀರುತ್ತವೆಯೋ ಎಂಬುದರ ಬಗ್ಗೆ ನಾನು ಹೆಚ್ಚಾಗಿ ಯೋಚಿಸಿಲ್ಲ ಎಂದರು.
ತಾಯ್ತನದ ಬಗ್ಗೆ ಮಾತನಾಡಿದ ನಟಿ, ಈಗಾಗಲೇ ನಾನು ನನ್ನ ಮೊಟ್ಟೆಗಳನ್ನು ಫ್ರೀಜ್ ಮಾಡಿದ್ದೇನೆ, ಆದ್ದರಿಂದ ನಾನು ಬಯಸಿದಾಗಲೆಲ್ಲಾ ತಾಯಿಯಾಗಬಹುದು. ನನಗೆ ನನ್ನದೇ ಆದ ಮಗು ಇದೆ ಎಂದು ತಿಳಿಸಿದರು.
ನಾನು ನನಗಾಗಿ ಸಾಕಷ್ಟು ಸಂಪಾದಿಸುತ್ತೇನೆ, ಇಲ್ಲಿ ವಿಷಯ ಹಣದ ಬಗ್ಗೆ ಅಲ್ಲ. ಆದರೆ, ನಾನು ಮದುವೆಯಾಗುವ ವ್ಯಕ್ತಿ ಕೂಡ ಒಂದು ನಿರ್ದಿಷ್ಟ ಮಟ್ಟದಲ್ಲಿ ಸಂಪಾದನೆ ಮಾಡಬೇಕು. ಒಬ್ಬ ವಯಸ್ಕ ಪುರುಷನಿಗೆ ನಾನು ತಾಯಿಯಂತೆ ಜವಾಬ್ದಾರಿ ಹೊರಲು ಸಾಧ್ಯವಿಲ್ಲ. ಆದಾಗ್ಯೂ, ಪ್ರೀತಿಯಲ್ಲಿ ಮೊದ ಮೊದಲು ಎಲ್ಲವೂ ಚೆನ್ನಾಗಿ ಇರುತ್ತದೆ. ಅವು ಹೊಟ್ಟೆ ತುಂಬಿಸುವುದಿಲ್ಲ. ಹಾಗಾಗಿ ಪ್ರತಿಯೊಬ್ಬರಿಗೂ ಆರ್ಥಿಕ ಭದ್ರತೆ ಮುಖ್ಯ ಎಂದು ಅಭಿಪ್ರಾಯ ಪಟ್ಟರು.
ಡೈಸಿ ಶಾ, ಪಲಾಶ್ ಮುಚ್ಚಲ್ ಅವರ ನಿರ್ದೇಶನದ ಚಿತ್ರ ಶ್ರೇಯಸ್ ತಲ್ಪಡೆ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ (ಏಜೆನ್ಸೀಸ್​).