- ನಟ ರಣದೀಪ್ ಹೂಡಾ ಮತ್ತು ಅವರ ಪತ್ನಿ ಲೈಶ್ರಾಮ್ ತಮ್ಮ ಬದುಕಿನ ಹೊಸ ಅಧ್ಯಾಯನಕ್ಕೆ ಕಾಲಿಡುತ್ತಿದ್ದಾರೆ
- ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ದಂಪತಿ ಮನೆಗೆ ಪುಟ್ಟ ಅತಿಥಿಯ ಆಗಮನಕ್ಕೆ ಕ್ಷಣಗಣನೆ ಆರಂಭ
- ರಣದೀಪ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಆಸ್ಪತ್ರೆಯ ಫೋಟೋವೊಂದನ್ನು ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ
Randeep Hooda: ಬಾಲಿವುಡ್ ನಟ ರಣದೀಪ್ ಹೂಡಾ ಮತ್ತು ಅವರ ಪತ್ನಿ ಲೈಶ್ರಾಮ್ ತಮ್ಮ ಬದುಕಿನ ಹೊಸ ಅಧ್ಯಾಯನಕ್ಕೆ ಕಾಲಿಡುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ದಂಪತಿ ಮನೆಗೆ ಪುಟ್ಟ ಅತಿಥಿಯ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಟ ಸಂತೋಷದ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಮಗುವಿನ ಆಗಮನ ಹತ್ತಿರವಾಗುತ್ತಿದ್ದಂತೆಯೇ ರಣದೀಪ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಆಸ್ಪತ್ರೆಯ ಫೋಟೋವೊಂದನ್ನು ಹಂಚಿಕೊಂಡಿದ್ದು, ನಮ್ಮ ಪುಟ್ಟ ಮಗುವಿನ ಆಗಮನಕ್ಕಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ. ಈ ಕ್ಷಣವನ್ನು ವಿವರಿಸಲು ಪದಗಳಿಲ್ಲ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಮಂಗಳವಾರ (ಮಾ.10) ರಣದೀಪ್ ಮತ್ತು ಲೈಶ್ರಾಮ್ ತಮ್ಮ ಬೇಬಿ ಬಂಪ್ ಪೋಟೋವನ್ನು ಜಂಟಿ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮಗುವಿನ ಆಗಮನದ ಸುದ್ದಿಯನ್ನು ಬಹಿರಂಗಗೊಳಿಸಿದರು.
ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದು, ಅವರಿಬ್ಬರಿಗೂ ಶುಭ ಕೋರಿದ್ದಾರೆ.
ಹಿನ್ನಲೆ
ಮಾನ್ಸೂನ್ ವೆಡ್ಡಿಂಗ್' ಚಿತ್ರದ ಮೂಲಕ ಎಂಟ್ರಿ ಕೊಟ್ಟ ರಣದೀಪ್, 'ಸರಬ್‌ಜಿತ್', 'ಹೈವೇ', 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ' ಮತ್ತು 'ಸ್ವತಂತ್ರ್ಯ ವೀರ್ ಸಾವರ್ಕರ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ನವೆಂಬರ್ 29 ರಂದು ಮಾಡೆಲ್ ಲಿನ್ ಲೈಶ್ರಾಮ್ ಅವರನ್ನು ಪ್ರೀತಿಸಿ ಮದುವೆಯಾದರು. ಈಗ ಈ ದಂಪತಿ ತಮ್ಮ ಬದುಕಿನ ಸುಂದರ ಘಟ್ಟದಲ್ಲಿದ್ದು, ಮಾರ್ಚ್ 2026ರ ಈ ಹೊತ್ತಿಗೆ ಇವರು ತಮ್ಮ ಮೊದಲ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ (ಏಜೆನ್ಸೀಸ್).