Anjuman Saxena 
ಬಾಲಿವುಡ್

ಸಂಪ್ರದಾಯದ ಹೆಸರಲ್ಲಿ ನಡೆಯುತ್ತಿರುವ 'ಮೆರಿಟಲ್​ ರೇಪ್'​ ಸರಿಪಡಿಸೋದು ಹೇಗೆ?; 'ಚಿರೈಯಾ' ವೆಬ್​ಸಿರೀಸ್​ ಯಶಸ್ವಿ ನಂತ್ರ ನಟಿ ಹೇಳಿದ್ದಿಷ್ಟು..Anjuman Saxena

ಪ್ರಮುಖ ಮುಖ್ಯಾಂಶಗಳು

  • ಸಂಪ್ರದಾಯದ ಹೆಸರಲ್ಲಿ ನಡೆಯುವ ತಪ್ಪುಗಳನ್ನು ಸರಿಪಡಿಸೋದು ಹೇಗೆ?: ಅಂಜುಮಾನ್​ ಸಕ್ಸೇನಾ
  • ಚಿರೈಯಾ ಸಕ್ಸಸ್​ ನಂತರ ಮಾತನಾಡಿದ ಅಂಜುಮಾನ್​ ಸಕ್ಸೇನಾ
  • ವೆಬ್​ ಸೀರಿಸ್​ ಮೂಲಕ ಸಮಾಜಕ್ಕೆ ನೀಡಬಹುದಾದ ಒಂದು ಪ್ರಬಲ ಸಂದೇಶ ಇದಾಗಿದೆ
Anjuman Saxena: ಓಟಿಟಿ ಫ್ಲಾಟ್​ಫಾರಂನಲ್ಲಿ ಸದ್ಯ ಹೆಚ್ಚು ಚರ್ಚೆಗೆ ಗ್ರಾಸವಾಗಿರೋ ಸಿನಿಮಾ ಎಂದರೆ ಅದು ಚಿರೈಯಾ. ಭಾರತದ ಕಾನೂನಿನಲ್ಲಿ ಅಂದರೆ (IPC ಸೆಕ್ಷನ್ 375 ಅಡಿಯಲ್ಲಿ) ಮದುವೆಯಾದ 18 ವರ್ಷದ ಹೆಣ್ಣು ಮಕ್ಕಳು ಗಂಡನಿಂದ ಅನುಭವಿಸುವ ಲೈಂಗಿಕ ಕಿರುಕುಳವು ಅಪರಾಧವಲ್ಲ ಎನ್ನಲಾಗುತ್ತದೆ. ಇದನ್ನೇ ಆಧಾರವನ್ನಾಗಿಟ್ಟುಕೊಂಡು.. ನಿರ್ದೇಶಕ ಶುಶಾಂತ್​ ಶಾ ಅವರು ವೆಬ್​ಸೀರಿಸ್​ಗೆ ಚಿತ್ರಕತೆಯನ್ನು ಬರೆದಿದ್ದಾರೆ.

ಚಿರೈಯಾ ವೆಬ್​ಸರಣಿಯಲ್ಲೇನಿದೆ?

ಭಾರತದಂತಹ ಸಂಪ್ರದಾಯಿಕ ರಾಷ್ಟ್ರ ಹಾಗೂ ಪಿತೃಪ್ರಧಾನ ಕುಟಂಬದಂತಹ ಸಮಾಜದಲ್ಲಿ ಮದುವೆಯಾದ ಮಹಿಳೆಯರು ತಮ್ಮ ಘನತೆ ಉಳಿಸಿಕೊಳ್ಳಲು ನಡೆಸುವ ಹೋರಾಟ. ಹಾಗೂ ಇಷ್ಟವಿಲ್ಲದಿದ್ದರೂ ಗಂಡನೊಂದಿಗೆ ಲೈಂಗಿಕತೆಗೆ ಬಲವಂತವಾಗಿ ಸ್ಪಂದಿಸುವುದು. ಇದನ್ನು Marital Rape ಎಂದು ಕರೆಯಲಾಗಿದೆ.
ಜೊತೆಗೆ ಕಾನೂನೂ ಹೋರಾಟದಲ್ಲಿ ಸಮಾಜ ಇದನ್ನು ಒಪ್ಪಿಕೊಳ್ಳುವ ರೀತಿಯನ್ನು ವೆಬ್​ ಸೀರಿಸ್​ನಲ್ಲಿ ವರ್ಣಿಸಲಾಗಿದೆ. ದಿವ್ಯಾ ದತ್ತಾ, ಪ್ರಸನ್ನ ಬಿಶ್ತ್, ಅಂಜುಮಾನ್ ಸಕ್ಸೇನಾ ಸೇರಿದಂತೆ ದೊಡ್ಡ ತಾರಾಂಗಣವೇ ವೆವ್​ಸೀರಿಸನ ಭಾಗವಾಗಿದೆ. ಇನ್ನು ಈ ಸಿನಿಮಾದಲ್ಲಿ ನಾಯಕಿ ಪೂಜಾಳ ತಾಯಿ ಪಾತ್ರ ಮಾಡಿರುವ ಹಿರಿಯ ನಟಿ ಅಂಜುಮನ್ ಸಕ್ಸೇನಾ ಅವರು 'ಜೂಮ್' ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೆಲವು ಮುಖ್ಯ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಅರೇಂಜ್ಡ್​ ಮ್ಯಾರೇಜ್​ ಎನ್ನುವ ಕಟ್ಟುಪಾಡು

ಹಲವು ದಶಕಗಳಿಂದಲೂ ಅರೇಂಜ್ಡ್​ ಮ್ಯಾರೇಜ್​ನಲ್ಲಿ ಒಂದು ಪದ್ಧತಿ ರೂಢಿಸಿಕೊಳ್ಳಲಾಗಿದೆ. ಮದುವೆಗೂ ಮುನ್ನ ಹುಡುಗಿ ನೋಡುವ ಶಾಸ್ತ್ರದಲ್ಲಿ, ಎರಡು ಮನೆತನದವರು ಭೇಟಿಯಾಗುತ್ತಾರೆ. ಕಾಫಿ-ಚಹಾ ತಿಂಡಿ ತೀರ್ಥ ಎಲ್ಲ ಮುಗಿದ ನಂತರ, ಹುಡುಗಿಗೆ ಪರೀಕ್ಷೆಗಳನ್ನು ವಿಧಿಸಲಾಗುತ್ತದೆ. ನಂತರ ಬೇಕೋ ಬೇಡವೋ ಎನ್ನುವುದನ್ನ ನಿರ್ಧರಿಸಲಾಗುತ್ತದೆ. ಆಪ್ತವಾಗಿ ಏನನ್ನು ಮಾತನಾಡದೇ. ಮದುವೆ ಮಾಡಿಸಿ. ಅಂದಿನ ಮೊದಲ ದಿನವೇ ನೇರವಾಗಿ ದೈಹಿಕ ಸಂಬಂಧದ ಒತ್ತಡಕ್ಕೆ ಒಳಗಾಗುತ್ತಾರೆ. ಇದು ಸರಿಯಲ್ಲ ಎಂದು ಹೇಳಿದರು.

ಒಬ್ಬರಿಗೊಬ್ಬರು ಕೊಟ್ಟುಕೊಳ್ಳುವ ಗೌರವ ಮುಖ್ಯ

ಮುಂದುವರೆದು, ಯುವತಿ ತನಗೆ ಆರಾಮಿಲ್ಲ ಅಥವಾ ಇಷ್ಟವಿಲ್ಲ ಎಂದು ದೈಹಿಕ ಸಂಪರ್ಕದಂತಹ ವಿಚಾರ ಮುಂದೂಡುವಾಗ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇರಬೇಕು. ನಿನಗೆ ತಾಳಿ ಕಟ್ಟಿದ್ದೇನೆ. ನೀನಿನ್ನು ನನ್ನ ವಸ್ತು ಅನ್ನೋದು ಸರಿಯಲ್ಲ. ಇಂದು ಸಾಕಷ್ಟು ಬದಲಾವಣೆಯಾಗಿದೆ. ಹುಡುಗ-ಹುಡುಗಿ ಪರಸ್ಪರ ಮಾತನಾಡಿಕೊಳ್ಳುತ್ತಾರೆ. ಇಬ್ಬರು ಒಬ್ಬರಿಗೊಬ್ಬರ ಅಭಿಪ್ರಾಯಕ್ಕೆ ಗೌರವ ಕೊಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ನಾನು ಈ ಸರಣಿಯಲ್ಲಿ ನಟಿಸಲು ಒಪ್ಪಿಕೊಂಡಿದ್ದು. ಇದು ಸಮಾಜಕ್ಕೆ ನೀಡುವ ಪ್ರಬಲ ಸಂದೇಶವಾಗಿದೆ. ಸಂಪ್ರದಾಯದ ಹೆಸರಲ್ಲಿ ತಪ್ಪಾಗುತ್ತಿದ್ದರೆ ಅದನ್ನು ಸರಿಪಡಿಸೋದು ಎಲ್ಲಿ? ಹೇಳೋದ್ಯಾರಿಗೆ. ಇದರಲ್ಲಿ ನನ್ನ ಪಾತ್ರ ಪ್ರಬಲವಾಗಿತ್ತು. ಹೀಗಾಗಿ ಒಪ್ಪಿಕೊಂಡೆ. ಈ ಮೂಲಕ್ಕೆ ಸಮಾಜಕ್ಕೆ ಒಂದೊಳ್ಳೆ ಸಂದೇಶ ರವಾನೆಯಾಗುತ್ತದೆ ಎಂದು ತಮ್ಮ ಪಾತ್ರದ ಬಗ್ಗೆ ಹೆಮ್ಮೆ ಪಟ್ಟುಕೊಂಡರು, (ಏಜೆನ್ಸೀಸ್​).