ಭಾರತದ ಬಹು ನಿರೀಕ್ಷಿತ ಸಿನಿಮಾ ಧುರಂಧರ್​ 2 (Dhurandhar 2) 
ಬಾಲಿವುಡ್

ಸಿನಿಮಾ ರಿಲೀಸ್ ಮುನ್ನವೇ ಬಾಕ್ಸ್ ಆಫೀಸ್ ಧೂಳಿಪಟ: ಧುರಂಧರ್ 2 ಅಡ್ವಾನ್ಸ್ ಬುಕ್ಕಿಂಗ್ ಕಂಡು ಬೆಚ್ಚಿಬಿದ್ದ ಬಾಲಿವುಡ್​! Dhurandhar 2

ಪ್ರಮುಖ ಮುಖ್ಯಾಂಶಗಳು

  • ಭಾರತದ ಬಹು ನಿರೀಕ್ಷಿತ ಸಿನಿಮಾ ಧುರಂಧರ್​ 2
  • ಬಿಡುಗಡೆ ಮುನ್ನವೇ 18 ಕೋಟಿ ರೂಪಾಯಿ ಟಿಕೆಟ್​ ಮಾರಿದ ಸಿನಿಮಾ
  • ರಣವೀರ್​ ಸಿಂಗ್​ ನಟನೆಯ, ಆದಿತ್ಯ ಧರ್​ ನಿರ್ದೇಶನ ಸಿನಿಮಾ ಧುರಂಧರ್​ 2
ಬಾಲಿವುಡ್​: ಭಾರತದಾದ್ಯಂತ ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿರುವ ಸಿನಿಮಾ ಎಂದರೆ ಅದು ಧುರಂಧರ್​ 2 (Dhurandhar 2). ರಣವೀರ್​ ಸಿಂಗ್​ ಮುಖ್ಯ ಭೂಮಿಕೆಯಲ್ಲಿ ಹಾಗೂ ಅದಿತ್ಯ ಧರ್​ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಮಾರ್ಚ್​ 19 ರಂದು ಬಿಡುಗಡೆಯಾಗಲಿದೆ. ಆದರೆ ಈ ಚಿತ್ರ ಬಿಡಗಡೆ ಮೊದಲೇ ಸಿನಿಮಾ ನೋಡಲು 18 ಕೋಟಿ ರೂಪಾಯಿ ಮುಂಗಡ ಬುಕ್ಕಿಂಗ್​ ಆಗಿದೆ ಎಂದು ತಿಳಿದುಬಂದಿದೆ.

ಅಮೆರಿಕದಲ್ಲೇ ಅತಿ ಹೆಚ್ಚು ಬುಕ್ಕಿಂಗ್​!

ಧುರಂಧರ್​ ಹವಾ ಕೇವಲ ಭಾರತಕ್ಕೆ ಸೀಮಿತವಾಗಿರದೆ, ಪ್ರಪಂಚದಾದ್ಯಂತ ಕ್ರೆಜ್​ ಹೆಚ್ಚುತ್ತಿದ್ದು, ಅಮೆರಿಕದಲ್ಲಿ ಪ್ರೀಮಿಯರ್​ ಶೋ ನೋಡಲು ಸುಮಾರು 6,18,911 ಡಾಲರ್​ ಅಂದರೆ ಸರಿ ಸುಮಾರು 5 ಕೋಟಿ ರೂಪಾಯಿಗಳ ಟಿಕೆಟ್​ ಮಾರಾಟವಾಗಿದೆ. ಅಮೆರಿಕಸ ಒಟ್ಟು 557 ಸ್ಥಳಗಳಲ್ಲಿ ಸುಮಾರು 1036 ಶೋಗಳನ್ನು ನೋಡಲು ಈ ಬುಕ್ಕಿಂಗ್​ ನಡೆದಿದೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಹೆಚ್ಚಾದ ಧುರಂಧರ್​ ಕ್ರೇಜ್​
ಭಾರತದಲ್ಲಿ ಸಹ ಧುರಂಧರ್​ ಜ್ವರ ನೆತ್ತಿಗೇರುತ್ತಿದ್ದು, ಮಾ.18 ನಡೆಯಲಿರುವ ಪೇಯ್ಡ್​ ಶೋ ನೋಡಲು ಇಲ್ಲಿವರೆಗೆ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಟಿಕೆಟ್​ಗಳು ಮಾರಾಟವಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಮುಂಗಡ ಬುಕ್ಕಿಂಗ್​ ರೆಕಾರ್ಡ್​ ಮುರಿದ ಧುರಂಧರ್​ 2
ಭಾರತದ ಸಿನಿಮಾ ಇತಿಹಾಸದಲ್ಲಿ ಪೂರ್ವವೀಕ್ಷಣೆ ಪ್ರದರ್ಶನ (Preview Shows) ಕ್ಕಾಗಿ ಅತೀ ಹೆಚ್ಚು ಹಣ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆ ಸ್ರ್ತೀ 2 ಸಿನಿಮಾದಾಗಿತ್ತು. ಈ ಸಿನಿಮಾವು ಸುಮಾರು 10 ಕೋಟಿ ಮೌಲ್ಯದ ಪೂರ್ವವೀಕ್ಷಣೆ ಪ್ರದರ್ಶನ ಟಿಕೆಟ್​ಗಳನ್ನು ಮಾರಾಟ ಮಾಡಿತ್ತು. ಅದರೆ ಈದೀಗ ಸುಮಾರು 18 ಕೋಟಿ ಮೌಲ್ಯದ ಟಿಕೆಟ್​ಗಳನ್ನು ಮಾರಾಟ ಮಾಡುವ ಮೂಲಕ ಈ ದಾಖಲೆಯನ್ನು ಧುರಂಧರ್ 2​ ಪುಡಿಪುಡಿ ಮಾಡಿದೆ.

ಧುರಂಧರ್​ ಬಗ್ಗೆ

ಧುರಂಧರ್​ ಇದೊಂದು ಸ್ಪೈ-ತ್ರಿಲ್ಲರ್​ ಸಿನಿಮಾವಾಗಿದ್ದು, ಪಾಕಿಸ್ತಾನದಲ್ಲಿ ಭಾರತೀಯ ಗೂಢಚರ ಹೇಗೆ ಕೆಲಸ ಮಾಡುತ್ತಾನೆ ಎನ್ನುವುದೇ ಈ ಸಿನಿಮಾದ ಕಥಾ ವಸ್ತುವಾಗಿದೆ. ಈ ಸಿನಿಮಾದ ಮೊದಲ ಭಾಗವು 2025 ರ ಡಿಸೆಂಬರ್​ನಲ್ಲಿ ತೆರೆಕಂಡು ಸುಮಾರು 1,000 ಕೋಟಿ ಕಲೆಕ್ಷನ್​ ಮಾಡಿತ್ತು.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ಅಕ್ಷನ್​ ಖನ್ನಾ,ಆರ್.ಮಾಧವನ್​, ಅರ್ಜುನ್​ ರಾಂಪಾಲ್​, ಸಂಜಯ್​ ದತ್ತ್, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಉರಿ ಖ್ಯಾತಿಯ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ,(ಏಜನ್ಸೀಸ್​).