- 2025ರಲ್ಲಿ ತೆರೆಕಂಡ ಬಾಲಿವುಡ್ನ ಹಲವು ಸೀಕ್ವೆಲ್ ಚಿತ್ರಗಳು ಫ್ಲಾಪ್
- ಹಿಂದಿನ ಚಿತ್ರಗಳ ಟೈಟಲ್ ಬಳಸಿದ್ದೇ ಆದರೂ ಕಥೆಯಲ್ಲಿ ಬಲವಿಲ್ಲ
- ಸೋಲಿನ ಸರಮಾಲೆ ಅನುಭವಿಸಿದ ಹಿಂದಿ ಚಿತ್ರೋದ್ಯಮ
ಮುಂಬೈ: ಕಳೆದ ವರ್ಷ 'ಸ್ತ್ರೀ 2', 'ಫೈಟರ್', 'ಅನಿಮಲ್' 'ಸಿಂಗಂ ಅಗೈನ್' ಸೇರಿ ಒಂದಷ್ಟು ಬಹುನಿರೀಕ್ಷಿತ ಸಿನಿಮಾಗಳು ಮಾತ್ರ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದ್ದು ಬಿಟ್ಟರೆ, ಉಳಿದೆಲ್ಲ ಚಿತ್ರಗಳು ಫ್ಲಾಪ್ ಸಾಲಿಗೆ ಸೇರಿತು. ಲಾಭವನ್ನು ಕಾಣಬೇಕಿದ್ದ ಬಾಲಿವುಡ್, ಒಂದಷ್ಟು ಸಿನಿಮಾಗಳನ್ನು ಹೊರತುಪಡಿಸಿದರೆ, ನಿರೀಕ್ಷೆಗೆ ತಕ್ಕಂತೆ ಆದಾಯವನ್ನು ಗಳಿಸುವಲ್ಲಿ ವಿಫಲವಾಗಿದೆ ಎಂಬುದರಲ್ಲಿ ಅನುಮಾನವೇ ಬೇಡ. ಹೆಚ್ಚೆಚ್ಚು ಆ್ಯಕ್ಷನ್ ಫಿಲಂಗಳ ಹಿಂದೆ ಬಿದ್ದಿರುವ ಹಿಂದಿ ಚಿತ್ರೋದ್ಯಮ ಸದ್ಯ ಸೀಕ್ವೆಲ್ಗಳಲ್ಲಿಯೂ ಫ್ಲಾಪ್ ಆಗಿವೆ.
ಬಾಲಿವುಡ್‌ನಲ್ಲಿ ಆರಂಭದಿಂದಲೂ ಸೀಕ್ವೆಲ್ ಸಿನಿಮಾಗಳು ಹೆಚ್ಚಾಗಿ ಮೂಡಿಬರುತ್ತಿವೆ. ಹೆಸರಿಗೆ ಮಾತ್ರ ಅದು ಸೀಕ್ವೆಲ್! ಆದರೆ, ಮೊದಲ ಭಾಗ ಮತ್ತು ಅದರ ಮುಂದುವರಿದ ಭಾಗದ ಚಿತ್ರದ ನಡುವೆ ಯಾವುದೇ ಸಂಬಂಧವಿರುವುದಿಲ್ಲ. ಹಿಟ್ ಚಿತ್ರಗಳ ಟೈಟಲ್ ಬಳಸಿಕೊಳ್ಳುವ ಚಿತ್ರತಂಡಗಳು, ಕಥೆಯ ಬಗ್ಗೆ ಹೆಚ್ಚು ಗಮನಹರಿಸಿದ ಕಾರಣ ಸಿನಿಮಾಗಳು ತೀರ ಸಂಕಷ್ಟಕ್ಕೆ ಸಿಲುಕುತ್ತಿವೆ.
ಹೀಗಾಗಿಯೇ, ಉತ್ತರ ಭಾಗದಲ್ಲಿ ಹಲವು ಸೀಕ್ವೆಲ್ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆಗುವಲ್ಲಿ ವಿಫಲವಾಗುತ್ತಿವೆ. ಇನ್ನು ಉದಾಹರಣೆ ಮೂಲಕ ಹೇಳುವುದಾದರೆ, ಈ ವರ್ಷ ತೆರೆಕಂಡ 'ಸಿತಾರೆ ಜಮೀನ್ ಪರ್' ಹೊರತುಪಡಿಸಿದರೆ, ಉಳಿದೆಲ್ಲ ಚಿತ್ರಗಳು ಅಂತಹ ಕಮಾಲ್ ಮಾಡಲಿಲ್ಲ. ಭಾರೀ ಬಜೆಟ್ ಮತ್ತು ಸಾಕಷ್ಟು ಹೈಪ್ ಸೃಷ್ಡಿಸಿದ 'ವಾರ್ 2' ಕೂಡ ಬಾಕ್ಸ್ಆಫೀಸ್ನಲ್ಲಿ ಹಾಗೂ ಸಿನಿಪ್ರಿಯರ ನಿರೀಕ್ಷೆಗಳನ್ನು ಪೂರೈಸುವಲ್ಲಿ ಮುಗ್ಗರಿಸಿತು. ಇದು ನಿರ್ಮಾಪಕರಿಗೂ ದೊಡ್ಡ ಹೊಡೆತ ನೀಡಿತು.
ಇನ್ನು ಬಾಲಿವುಡ್ನ ಸ್ಟಾರ್ ಹೀರೋ ಅಕ್ಷಯ್ ಕುಮಾರ್ ಅಭಿನಯದ ಕಾಮಿಡಿ, ಡ್ರಾಮಾ ಜಾನರ್ನ 'ಹೌಸ್‌ಫುಲ್ 5' ಚಿತ್ರವು, ದೊಡ್ಡ ತಾರಾಬಳಗವನ್ನು ಹೊಂದಿದ್ದರೂ, ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಎಡವಿತು. 180 ಕೋಟಿ ರೂ.ಗಿಂತ ಹೆಚ್ಚು ಬಜೆಟ್‌ನಲ್ಲಿ ನಿರ್ಮಿಸಲಾದ ಈ ಸಿನಿಮಾ 'ಹೌಸ್‌ಫುಲ್ 4' ಕಲೆಕ್ಷನ್ ಮೀರಿಸಲು ಸೋತಿತು. ಇದೇ ರೀತಿ 'ಕೇಸರಿ 2' ಮತ್ತು 'ಜಾಲಿ LLB 3' ಕೂಡ ಫ್ಲಾಪ್ ಸಾಲಿಗೆ ಸೇರಿತು.
'ಧಡಕ್ 2' ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಂಡರೆ, 'ಸೈಯಾರ' ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿತು. ಇದಾದ ಬಳಿಕ, ಸೆ.5ರಂದು ಬಿಡುಗಡೆಯಾದ ಟೈಗರ್ ಶ್ರಾಫ್ ನಟನೆಯ 'ಬಾಘಿ 4' ಕನಿಷ್ಠ ಕಲೆಕ್ಷನ್ ಮೂಲಕ ಬಾಕ್ಸ್ ಆಫೀಸ್ನಲ್ಲಿ ವಿಫಲವಾಯಿತು. ಇದೇ ಇದರ ಹಿಂದಿನ ಬಾಘಿ ಸರಣಿಯ ಸಿನಿಮಾಗಳು ಆ್ಯಕ್ಷನ್ ಕಮ್ ಲವ್ ಸ್ಟೋರಿಯಿಂದ ಭರ್ಜರಿ ಯಶಸ್ಸನ್ನು ಕಂಡಿತು. ಆದರೆ, ಬಾಘಿ 4 ಕೇವಲ ಆ್ಯಕ್ಷನ್‌ಗೆ ಮಾತ್ರ ಸೀಮಿತವಾಗಿತ್ತು. ಪ್ರಾಯಶಃ ಪ್ರೇಕ್ಷಕರಿಗೆ ಇದು ಹಿಡಿಸಲಿಲ್ಲ,(ಏಜೆನ್ಸೀಸ್).