ದ ಡರ್ಟಿ ಪಿಕ್ಚರ್ ಪೋಸ್ಟರ್ 
ಬಾಲಿವುಡ್

The Dirty Picture 2 - ಬರಲಿದೆ ಮತ್ತೊಂದು ಡರ್ಟಿ ಪಿಕ್ಚರ್​!

ದೊಡ್ಡ ಸ್ಟಾರ್​ಗಳಿಲ್ಲದೇ, ಮಧ್ಯಮ ಬಜೆಟ್​ನಲ್ಲಿ ಮೂಡಿಬಂದು, ಬಾಕ್ಸಾಫಿಸಿನಲ್ಲಿ ₹100 ಕೋಟಿಗೂ ಅಧಿಕ ಗಳಿಕೆ ಮಾಡಿಕೊಂಡ ಮಹಿಳಾ ಪ್ರಧಾನ ಬಯೋಪಿಕ್​ "ದ ಡರ್ಟಿ ಪಿಕ್ಚರ್​' (2011). ಹೀಗಾಗಿಯೇ ಬಾಲಿವುಡ್​ನಲ್ಲಿ ಬಯೋಪಿಕ್​ಗಳಿಗೆ, ಮಹಿಳಾ ಪ್ರಧಾನ ಚಿತ್ರಗಳ ಹೊಸ ಯುಗ ಆರಂಭಿಸಿದ ಹೆಗ್ಗಳಿಕೆ ಈ ಚಿತ್ರಕ್ಕೆ ಸಲ್ಲುತ್ತದೆ.

ದೊಡ್ಡ ಸ್ಟಾರ್​ಗಳಿಲ್ಲದೇ, ಮಧ್ಯಮ ಬಜೆಟ್​ನಲ್ಲಿ ಮೂಡಿಬಂದು, ಬಾಕ್ಸಾಫಿಸಿನಲ್ಲಿ ₹100 ಕೋಟಿಗೂ ಅಧಿಕ ಗಳಿಕೆ ಮಾಡಿಕೊಂಡ ಮಹಿಳಾ ಪ್ರಧಾನ ಬಯೋಪಿಕ್​ "ದ ಡರ್ಟಿ ಪಿಕ್ಚರ್​' (2011). ಹೀಗಾಗಿಯೇ ಬಾಲಿವುಡ್​ನಲ್ಲಿ ಬಯೋಪಿಕ್​ಗಳಿಗೆ, ಮಹಿಳಾ ಪ್ರಧಾನ ಚಿತ್ರಗಳ ಹೊಸ ಯುಗ ಆರಂಭಿಸಿದ ಹೆಗ್ಗಳಿಕೆ ಈ ಚಿತ್ರಕ್ಕೆ ಸಲ್ಲುತ್ತದೆ. ಮಿಲನ್​ ಲೂಥ್ರಿಯಾ ನಿರ್ದೇಶನದ ದಕ್ಷಿಣ ಭಾರತದ ಸ್ಪೆಷಲ್​ ಸಾಂಗ್​ಗಳ ತಜ್ಞೆ "ಸಿಲ್ಕ್​ ಸ್ಮಿತಾ' ಜೀವನದಿಂದ ಸ್ಫೂರ್ತಿ ಪಡೆದ ಈ ಚಿತ್ರದ ನಟನೆಗೆ ವಿದ್ಯಾ ಬಾಲನ್​ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಜತೆಗೆ ಅತ್ಯುತ್ತಮ ಪ್ರಸಾದನ ಮತ್ತು ಕಾಸ್ಟ್ಯೂಮ್​ ವಿಭಾಗಗಳಲ್ಲೂ "ದ ಡರ್ಟಿ ಪಿಕ್ಚರ್​' ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಇದೀಗ 15 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನಿರ್ಮಾಪಕಿ ಏಕ್ತಾ ಕಪೂರ್​ ಚಿತ್ರದ ಸೀಕ್ವೆಲ್​ ಬಗ್ಗೆ ತುಟಿ ಬಿಚ್ಚಿದ್ದಾರೆ.

ನಿರ್ಮಾಪಕಿ ಏಕ್ತಾ ಕಪೂರ್

ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ, "ನಾನು ಒಂದು ದೊಡ್ಡ ಸಿನಿಮಾಗಾಗಿ ಸಿದ್ಧತೆ ನಡೆಸುತ್ತಿದ್ದೇನೆ. ಇದೇ ಮೊದಲ ಬಾರಿಗೆ ಅದರ ಬಗ್ಗೆ ಮಾತನಾಡುತ್ತಿದ್ದೇನೆ. 15 ವರ್ಷಗಳ ಬಳಿಕ "ದ ಡರ್ಟಿ ಪಿಕ್ಚರ್​ 2' ಮಾಡಲು ಪ್ಲಾ$್ಯನ್​ ಮಾಡುತ್ತಿದ್ದೇನೆ. "ಸಿಲ್ಕ್​ ಸ್ಮಿತಾ' ಅವರಂತೆಯೇ ಈ ಸೀಕ್ವೆಲ್​ ಕೂಡ ಒಬ್ಬ ನಟ ಅಥವಾ ನಟಿಯ ಜೀವನಾಧಾರಿತ ಕಥೆಯಾಗಿರಲಿದೆ. ಅದು ಯಾರು ಅಂತ ಈಗಲೇ ಹೇಳಲಾರೆ. ಬದಲಾಗಿ ಕೆಲ ದಿನಗಳಲ್ಲೇ ಒಂದು ದೊಡ್ಡ ಅನೌನ್ಸ್​ಮೆಂಟ್​ ಮೂಲಕ ಮಾಹಿತಿ ನೀಡಲಿದ್ದೇನೆ' ಎಂದು ಏಕ್ತಾ ಮಾಹಿತಿ ನೀಡಿದ್ದಾರೆ. ಅಂದಹಾಗೆ, ₹12 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿದ್ದ "ದ ಡರ್ಟಿ ಪಿಕ್ಚರ್​' ಬರೋಬ್ಬರಿ ₹117 ಕೋಟಿ ಗಳಿಕೆ ಮಾಡಿಕೊಂಡಿತ್ತು. ವಿದ್ಯಾ ಬಾಲನ್​ ಜತೆ ನಾಸಿರುದ್ದಿನ್​ ಶಾ, ತುಷಾರ್​ ಕಪೂರ್​, ಎಮ್ರಾನ್​ ಹಷ್ಮಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.