ಚಿತ್ರ Instagram 
ಬಾಲಿವುಡ್

ಬಿ-ಟೌನ್‌ನಲ್ಲಿ ಹೊಸ ಪ್ರೇಮ ಪಕ್ಷಿಗಳು: ನ್ಯಾಷನಲ್ ಕ್ರಶ್ ರೋಹಿತ್ ಸರಾಫ್ ಹೃದಯ ಗೆದ್ದರಾ ಪ್ರತಿಭಾ ರಂತಾ? Rohit Saraf

ಪ್ರಮುಖ ಮುಖ್ಯಾಂಶಗಳು

  • ನ್ಯಾಷನಲ್ ಕ್ರಶ್ ರೋಹಿತ್ ಸರಾಫ್ ಮತ್ತು ನಟಿ ಪ್ರತಿಭಾ ರಂತಾ ನಡುವೆ ಚಿಗುರೊಡೆದ ಪ್ರೇಮ
  • ಕಳೆದ ದೀಪಾವಳಿ ಸಂಭ್ರಮದ ವೇಳೆ ಕೆಂಪು ಮತ್ತು ಗೋಲ್ಡನ್ ಬಣ್ಣದ ಮ್ಯಾಚಿಂಗ್ ಉಡುಪು ಧರಿಸಿ ಒಟ್ಟಿಗೆ ಕಾಣಿಸಿಕೊಂಡಿದ್ದ ಜೋಡಿ
  • 'ದ ರೆವಲ್ಯೂಷನರಿಸ್' ವೆಬ್ ಸರಣಿಯ ಚಿತ್ರೀಕರಣದ ಸಮಯದಲ್ಲಿ ಇನ್ನಷ್ಡು ಹತ್ತಿರವಾದ ಈ ಜೋಡಿ
Rohit Saraf: ಬಾಲಿವುಡ್‌ನ ನ್ಯಾಷನಲ್ ಕ್ರಶ್ ಖ್ಯಾತಿಯ ರೋಹಿತ್ ಸರಾಫ್ ಮತ್ತು ನಟಿ ಪ್ರತಿಭಾ ರಂತಾ ನಡುವಿನ ಪ್ರೇಮದ ಬಗ್ಗೆ ಇದೀಗ ಬಿಗ್​ ಟೌನ್​ನಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಲಪತಾ ಲೇಡಿಸ್ ಚಿತ್ರದ ಮೂಲಕ ಗುರುತಿಸಿಕೊಂಡಿರುವ ಪ್ರತಿಭಾ ಮತ್ತು ಮಿಸ್‌ಮ್ಯಾಚ್ಡ್ ಖ್ಯಾತಿಯ ರೋಹಿತ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ.

ಪ್ರೇಮದ ಸುಳಿವು ಸಿಕ್ಕಿದ್ದೆಲ್ಲಿ?

ರೋಹಿತ್ ಮತ್ತು ಪ್ರತಿಭಾ ನಡುವಿನ ಸ್ನೇಹ ಪ್ರೀತಿಯಾಗಿ ಬದಲಾಗಿದೆ ಎಂಬ ಮಾತುಗಳು ಕಳೆದ ವರ್ಷದ ದೀಪಾವಳಿ ಸಂಭ್ರಮದಿಂದಲೇ ಶುರುವಾಗಿದ್ದವು. ನಿರ್ದೇಶಕ ನಿಖಿಲ್ ಅಡ್ವಾಣಿ ಹಮ್ಮಿಕೊಂಡಿದ್ದ ದೀಪಾವಳಿ ಪಾರ್ಟಿಯಲ್ಲಿ ಇವರಿಬ್ಬರೂ ಭಾಗವಹಿಸಿದ್ದರು. ಈ ವೇಳೆ ಇಬ್ಬರೂ ಒಂದೇ ಬಣ್ಣದ ಬಟ್ಟೆಯನ್ನು ಧರಿಸಿ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಕಾಣಿಸಿಕೊಂಡರು.
ಈ ವಿಡಿಯೋ ಮತ್ತೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ, ಅಭಿಮಾನಿಗಳು ಈ ಜೋಡಿ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಮನವರಿಕೆ ಮಾಡಿಕೊಂಡರು.

ಶೂಟಿಂಗ್ ಸೆಟ್‌ನಲ್ಲಿ ಚಿಗುರಿದ ಸ್ನೇಹ

ವರದಿಗಳ ಪ್ರಕಾರ, ಈ ಜೋಡಿಯ ನಡುವೆ ಆತ್ಮೀಯತೆ ಹೆಚ್ಚಾಗಲು ಅವರು ಒಟ್ಟಿಗೆ ನಟಿಸುತ್ತಿರುವ 'ದ ರೆವಲ್ಯೂಷನರಿಸ್' ವೆಬ್ ಸರಣಿಯೇ ಕಾರಣ ಎನ್ನಲಾಗಿದೆ. ನಿಖಿಲ್ ಅದ್ವಾನಿ ನಿರ್ದೇಶನದ ವೆಬ್​ ಸರಣಿಯಲ್ಲಿ ಈ ಜೋಡಿ ಹೆಚ್ಚು ಸಮಯವನ್ನು ಒಟ್ಟಿಗೆ ಕಳೆದಿದ್ದಾರೆ. ಸೆಟ್​ನಲ್ಲಿ ಅವರಿಬ್ಬರ ಕೆಮಿಸ್ಟ್ರಿ ಅದ್ಭುತವಾಗಿದ್ದರಿಂದ ಇವರಿಬ್ಬರ ನಡುವೆ ಪ್ರೀತಿ ಇದೆ ಎಂದು ತಿಳಿದುಬಂದಿದೆ.
ಪ್ರಸ್ತುತ, ರೋಹಿತ್ ಸರಾಫ್ ಮತ್ತು ಪ್ರತಿಭಾ ರಾಂಟೆ ಇಬ್ಬರೂ ನಿಖಿಲ್ ಅಡ್ವಾಣಿ ನಿರ್ದೇಶನದ ದಿ ರೆವಲ್ಯೂಷನರೀಸ್‌ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. 2026 ರಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿರುವ ಈ ಚಿತ್ರವು ಭಾರತದ ಸ್ವಾತಂತ್ರ್ಯ ಹೋರಾಟಗಳ ಸುತ್ತ ಸುತ್ತುವ ಚಿತ್ರವಾಗಿದೆ.
ಡಿಯರ್ ಜಿಂದಗಿ ಚಿತ್ರದಲ್ಲಿ ಆಲಿಯಾ ಭಟ್ ಅವರ ಕಿರಿಯ ಸಹೋದರನಾಗಿ ಬಾಲಿವುಡ್ ಪ್ರಯಾಣವನ್ನು ಪ್ರಾರಂಭಿಸಿದ ರೋಹಿತ್ ಸರಾಫ್, ಪ್ರಜಕ್ತ ಕೋಲಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ರೋಹಿತ್ ಮತ್ತು ಪ್ರಜಕ್ತ ಮಿಸ್​ಮ್ಯಾಚ್ಡ್​ನಲ್ಲಿ ಕಾಣಿಸಿಕೊಂಡಿದ್ದಾರೆ (ಏಜೆನ್ಸೀಸ್​).