ಪತ್ನಿಯ ಜತೆ ಹನಿಮೂನ್ಗೆ ಹೊರಟಿದ್ದ ಖ್ಯಾತ ಕಿರುತೆರೆ ನಟ ಜೇ ದುಢಾಣೆ ಬಂಧನಕ್ಕೊಳಗಾಗಿದ್ದಾರೆ. ಬಿಗ್ಬಾಸ್ ಮರಾಠಿ ಸೀಸನ್ 3ರ ರನ್ನರ್ ಅಪ್ ಮತ್ತು 2021ರ ಸ್ಪ್ಲಿಟ್ಸ್ವಿಲ್ಲಾ ವಿಜೇತನಾಗಿದ್ದ ಜೇ 2025ರ ಡಿ. 24ರಂದು ಹರ್ಷಿಲಾ ಪಾಟೀಲ್ ಜತೆ ಸಪ್ತಪದಿ ಇಟ್ಟಿದ್ದರು. ಸೋಮವಾರ ಜೇ- ಹರ್ಷಿಲಾ ಜೋಡಿ ಜತೆಗೆ ಆತನ ಸಹೋದರ ಮತ್ತು ನಾದಿನಿ ಕೂಡ ವಿದೇಶಕ್ಕೆ ಹೊರಟಿದ್ದರು. ಆದರೆ, ಮುಂಬೈ ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ವೇಳೆ ಜೇ ಸೇರಿ ಅವರ ಕುಟುಂಬದ ಐವರ ಹೆಸರಿನಲ್ಲಿ ಲುಕ್-ಔಟ್ ನೊಟೀಸ್ ಜಾರಿ ಮಾಡಿರುವುದು ಗೊತ್ತಾಗಿದೆ. ತಕ್ಷಣ ಪೊಲೀಸರು ಜೇನ ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಅವರನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಜೇ ಕುಟುಂಬದಿಂದ ವ್ಯಕ್ತಿಯೊಬ್ಬರು 4.95 ಕೋಟಿ ರೂ.ಗೆ ಅಂಗಡಿ ಮುಂಗಟ್ಟುಗಳನ್ನು ಖರೀದಿಸಿದ್ದರು. ಆ ಅಂಗಡಿಗಳ ಮೇಲೆ ಲೋನ್ಗಳಿದ್ದರೂ, ಯಾವುದೇ ಸಾಲಗಳಿಲ್ಲ ಎಂದು ನಕಲಿ ಎನ್ಒಸಿ ನೀಡಿ ವಂಚಿಸಿದ್ದಾರೆ. ಇದೀಗ ಬ್ಯಾಂಕ್ನಿಂದ ನೊಟೀಸ್ ನೀಡಲಾಗಿದ್ದು, ಜತೆಗೆ ಅದೇ ಅಂಗಡಿಗಳನ್ನು ಬೇರೆಯವರಿಗೂ ಮಾರಾಟ ಮಾಡಿದ್ದಾರೆ ಎಂದು ಖರೀದಿಸಿದ್ದ ವ್ಯಕ್ತಿ ಜೇ, ತಾಯಿ, ಅಜ್ಜ, ಅಜ್ಜಿ ಮತ್ತು ಸಹೋದರಿಯ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
ಬಂಧನದ ಕುರಿತು ಪ್ರತಿಕ್ರಿಯೆ ನೀಡಿರುವ ಜೇ, "ಇದು ಸುಳ್ಳು ಆರೋಪ. ನನಗೆ ಕಾನೂನಿನ ಮೇಲೆ ಸಂಪೂರ್ಣ ನಂಬಿಕೆ ಇದೆ' ಎಂದಿದ್ದಾರೆ. ಮತ್ತೊಂದೆಡೆ ಜೇ ಮತ್ತು ಕುಟುಂಬವನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. &ಏಜೆನ್ಸೀಸ್